Gold Price: ಒಂದೇ ದಿನಕ್ಕೆ ಬಂಗಾರ ಬೆಲೆ ಭರ್ಜರಿ ಕುಸಿತ, ಗಗನಕ್ಕೇರಿದ ಬೆಳ್ಳಿ; ಬೆಂಗಳೂರಿನಲ್ಲಿ ಎಷ್ಟಿದೆ ದರ?
Gold Price Today: ಜಾಗತಿಕವಾಗಿ ಬೆಳ್ಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಚಿನ್ನದ ಬೇಡಿಕೆ ತಾತ್ಕಾಲಿಕವಾಗಿ ತಗ್ಗಿದೆ ಎನ್ನಬಹುದು. ಈ ಮಾತಿಗೆ ಪೂರಕೆವೆಂಬಂತೆ ಬಂಗಾರದ ದರದಲ್ಲಿ ಇಳಿಕೆಯ ಟ್ರೆಂಡ್ ಮುಂದುವರಿದಿದೆ. ಇಂದು ವಾರದ ಮೊದಲ ದಿನ ಸೋಮವಾರ (ಮೇ 18) ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ದಾಖಲಾದರೆ, ಬೆಳ್ಳಿ ಮೌಲ್ಯವು ಗಗನಕ್ಕೇರಿದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲೂ ಚಿನ್ನವು ಕುಸಿತ ಕಂಡಿದೆ. ಬೆಂಗಳೂರು ಸೇರಿದಂತೆ ದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರಪಟ್ಟಿ ಮುಂದಿದೆ.
ಮೊದಲಿಗೆ ಬೆಳ್ಳಿ ಬೆಲೆ ನೋಡುವುದಾದರೆ, ಕಳೆದ ನಾಲ್ಕು ದಿನಗಳಿಂದ ಇಳಿಕೆಯತ್ತ ಸಾಗಿದ್ದ ಬಿಳಿ ಲೋಹಕ್ಕೆ ಬೇಡಿಕೆ ಏರುಗತಿಯಲ್ಲಿದೆ. ಕೈಗಾರಿಕೆ ಹಾಗೂ ಇನ್ನಿತರ ಕಾರಣಗಳಿಂದ ಹೆಚ್ಚಿನ ಬಳಕೆಯಲ್ಲಿರುವ ಬೆಳ್ಳಿಯ ಒಂದು ಕೆಜಿ ದರವು ಇಂದು ಒಂದೇ ದಿನಕ್ಕೆ 10,000 ರೂಪಾಯಿ ಹೆಚ್ಚಾಗಿದೆ. ಈ ಮೂಲಕ ಅದರ ದರ 2,90,000 ರೂಪಾಯಿ ತಲುಪಿದೆ. ಮೇ 14ರಿಂದ ಪ್ರತಿ ದಿನ 10,000 ರೂ.ನಷ್ಟು ಬೆಲೆ ಇಳಿಕೆ ಆಗಿತ್ತು. ಇದೀಗ ಏರಿಕೆಯ ಟ್ರೆಂಡ್‌ನಲ್ಲಿದೆ ಬೆಳ್ಳಿ ಮೊದಲಿದೆ.

ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ
ಮದುವೆ, ಹಬ್ಬ ಹರಿದಿನಗಳು ಸೇರಿದಂತೆ ಇನ್ನಿತರ ಸಮಾರಂಭಗಳಿಗಾಗ ಚಿನ್ನ ಖರೀದಿಗೆ ಮುಂದಾಗುವ ಜನಸಾಮಾನ್ಯರಿಗೆ ಇಂದಿನ ಚಿನ್ನದ ಬೆಲೆ ಕುಸಿತ ಕೊಂಚ ನೆಮ್ಮದಿ ತಂದಿದೆ.
* 22 ಕ್ಯಾರಟ್ 1ಗ್ರಾಂ ಚಿನ್ನದ ಬೆಲೆ ಇಂದು 65 ರೂಪಾಯಿ ಕುಸಿದಿದೆ. 10 ಗ್ರಾಂಗೆ 650 ರೂಪಾಯಿ ಕಡಿಮೆ ಆಗುವ ಮೂಲಕ ಒಟ್ಟು ಬೆಲೆ 1,43,200 ರೂಪಾಯಿ ಹೆಚ್ಚಾಗಿದೆ.
* 24 ಕ್ಯಾರಟ್ 1 ಗ್ರಾಂ ಬಂಗಾರದ ದರ 71 ರೂಪಾಯಿ ಕುಸಿತ ಕಂಡಿದೆ. ಇದೇ ಚಿನ್ನದ 10 ಗ್ರಾಂ ಬೆಲೆಯು 710 ರೂಪಾಯಿ ಇಳಿಕೆ ಕಾಣುವ ಮೂಲಕ 1,56,220 ರೂಪಾಯಿ ತಲುಪಿದೆ.
* ಇನ್ನೂ 18 ಕ್ಯಾರಟ್ ಒಂದು ಗ್ರಾಂಗೆ 53 ರೂ.ನಂತೆ 10 ಗ್ರಾಂಗೆ 530 ರೂಪಾಯಿ ಇಳಿಕೆಯಾಗಿದ್ದು, ಅದರ ಬೆಲೆ 1,17,170 ರೂಪಾಯಿ ತಲುಪಿದೆ ಎಂದು ವರದಿ ಆಗಿದೆ.
ಜಾಗತಿಕ ಅನಿಶ್ಚಿತತೆ, ಯುಎಸ್ ಡಾಲರ್ ಮೌಲ್ಯದ ಏರಿಳಿತ, ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಹಿಂತೆಗೆದುಕೊಳ್ಳವುದು, ಯುಎಸ್ ಫೆಡರಲ್ ಬ್ಯಾಂಕ್ ಬಾಂಡ್‌ಗಳ ಖರೀದಿ ಮೇಲಿನ ಹೆಚ್ಚಿದ ಆಸಕ್ತಿ ಸೇರಿದಂತೆ ಹಲವು ಕಾರಣಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ.
ನಗರವಾರು 22 ಕ್ಯಾರಟ್ 1ಗ್ರಾಂ ಚಿನ್ನದ ದರಪಟ್ಟಿ
ಚೆನ್ನೈ : 16,091 ರೂಪಾಯಿ
ಮುಂಬೈ : 15,622 ರೂಪಾಯಿ
ದೆಹಲಿ : 15,637 ರೂಪಾಯಿ
ಕೊಲ್ಕತ್ತಾ : 15,622 ರೂಪಾಯಿ
ಬೆಂಗಳೂರು :15,622 ರೂಪಾಯಿ
ಹೈದರಾಬಾದ್ : 15,622 ರೂಪಾಯಿ
ಕೇರಳ : 15,622 ರೂಪಾಯಿ
ಪುಣೆ : 15,622 ರೂಪಾಯಿ
ವಡೋದರಾ : 15,627 ರೂಪಾಯಿ













Click it and Unblock the Notifications