Sreeleela: ನಟಿ ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮಾ ಪ್ರೀತಿಸುತ್ತಿದ್ದಾರಾ? ವೈರಲ್ ಸುದ್ದಿಗೆ ಕೊನೆಗೂ ಸಿಕ್ಕಿತು ಉತ್ತರ

ಕನ್ನಡತಿ, ಬಹುಭಾಷಾ ನಟಿ ಶ್ರೀಲೀಲಾ ಹಾಗೂ ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ಸ್ಟಾರ್‌ ಆಟಗಾರ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಇಬ್ಬರ ಫ್ಯಾನ್‌ ಪೇಜ್‌ಗಳು ಮತ್ತು ಗಾಸಿಪ್ ಖಾತೆಗಳು ಇವರಿಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ಸುದ್ದಿಯನ್ನು ಹರಡುತ್ತಿವೆ. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಗಾಸಿಪ್‌ ಶುರುವಾಗಿದ್ದು ಹೇಗೆ?

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಒಂದೇ ಸಮಯದಲ್ಲಿ ಕಾಣಿಸಿಕೊಂಡಿದ್ದನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಊಹಾಪೋಹಗಳನ್ನು ಹರಡಲಾಗಿತ್ತು. ಇತ್ತೀಚಿನ ಕೆಲವು ದಿನಗಳ ಹಿಂದೆ ಇಬ್ಬರೂ ಒಂದೇ ವಾರದಲ್ಲಿ ಬೇರೆ ಬೇರೆ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ಹಾಗೂ ಕ್ರಿಕೆಟ್ ಪಂದ್ಯಾವಳಿಗಳ ಕೆಲವು ಕಾಕತಾಳೀಯ ಸನ್ನಿವೇಶಗಳನ್ನು ಜೋಡಿಸಿ ಅಭಿಮಾನಿಗಳು ಲಿಂಕ್ ಮಾಡಲು ಆರಂಭಿಸಿದ್ದಾರೆ.

Sreeleela

ನಟಿ ಶ್ರೀಲೀಲಾ ಮತ್ತು ಟೀಮ್ ಇಂಡಿಯಾದ ಯುವ ರನ್ ಮಷೀನ್ ತಿಲಕ್ ವರ್ಮಾ ಜೋಡಿಯ ಬಗ್ಗೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೊಸದೊಂದು ಚರ್ಚೆ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇವರಿಬ್ಬರೂ ಸದ್ದಿಲ್ಲದೆ ಪ್ರೇಮಲೋಕದಲ್ಲಿ ತೇಲುತ್ತಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಗಾಸಿಪ್ ಪ್ರಿಯರ ನಿದ್ದೆಗೆಡಿಸಿವೆ. ಅಷ್ಟಕ್ಕೂ ಈ ಕ್ರಿಕೆಟ್-ಸಿನಿಮಾ ಕನೆಕ್ಷನ್ ಹಿಂದಿರೋ ಅಸಲಿ ಕಥೆಯಾದರೂ ಏನು? ಇಬ್ಬರ ನಡುವೆ ನಿಜವಾಗಿಯೂ ಪ್ರೇಮಾಂಕುರವಾಗಿದೆಯಾ ಅಥವಾ ಇದೆಲ್ಲಾ ಕೇವಲ ಕಾಕತಾಳೀಯವಾ? ಇಡೀ ಇಂಟರ್ನೆಟ್ ಹುಡುಕುತ್ತಿರುವ ಆ ಬಿಗ್ ಕ್ಲಾರಿಟಿ ಇಲ್ಲಿದೆ ನೋಡಿ.

ಜೂನಿಯರ್ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾಗೆ 'ಡ್ರ್ಯಾಗನ್' ಟೈಟಲ್‌ ಫಿಕ್ಸ್? ಗ್ಲಿಂಪ್ಸ್ ರನ್‌ಟೈಮ್ ನೋಡಿ ಫ್ಯಾನ್ಸ್ ಶಾಕ್
ಜೂನಿಯರ್ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾಗೆ 'ಡ್ರ್ಯಾಗನ್' ಟೈಟಲ್‌ ಫಿಕ್ಸ್? ಗ್ಲಿಂಪ್ಸ್ ರನ್‌ಟೈಮ್ ನೋಡಿ ಫ್ಯಾನ್ಸ್ ಶಾಕ್

ಅವರ ಆಪ್ತ ವಲಯದ ಮೂಲಗಳು ಈ ವರದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ತಿಲಕ್ ವರ್ಮಾ ಮತ್ತು ಶ್ರೀಲೀಲಾ ಅವರ ನಡುವಿನ ಸಂಬಂಧದ ಕುರಿತು ಹರಡುತ್ತಿರುವುದೆಲ್ಲ ಕೇವಲ ಕಾಲ್ಪನಿಕ ಕಥೆಗಳು. ಅವರಿಬ್ಬರು ಇದುವರೆಗೆ ವೈಯಕ್ತಿಕವಾಗಿ ಭೇಟಿಯಾಗಿಯೂ ಇಲ್ಲ, ಪರಸ್ಪರ ಮಾತನಾಡಿದೂ ಇಲ್ಲ. ಯಾವುದೇ ನೈಜ ಆಧಾರಗಳಿಲ್ಲದೆ ಇಂತಹ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವುದು ಮತ್ತು ಹರಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಬ್ಬರ ವೃತ್ತಿಜೀವನದ ಹಾದಿ

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಶ್ರೀಲೀಲಾ, ಸದ್ಯ ಟಾಲಿವುಡ್‌ನಲ್ಲಿ ಬಿಡುವಿಲ್ಲದ ನಟಿಯಾಗಿದ್ದಾರೆ. ಇತ್ತೀಚೆಗಷ್ಟೇ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಇವರು ನಟಿಸಿದ್ದ 'ಭಗವಂತ್ ಕೇಸರಿ' ಸಿನಿಮಾ ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಸದ್ಯ ಧನುಷ್ ಅವರ 55ನೇ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ಹೈದರಾಬಾದ್ ಮೂಲದ ಬ್ಯಾಟರ್ ಆಗಿರುವ ತಿಲಕ್ ವರ್ಮಾ, 2022ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಭಾರಿ ಪ್ರಸಿದ್ಧಿ ಪಡೆದರು. ಆ ಬಳಿಕ ಭಾರತ ತಂಡದಲ್ಲೂ ಸ್ಥಾನ ಪಡೆದು ಸದ್ಯ ಯುವ ಕ್ರಿಕೆಟಿಗರಲ್ಲಿ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+