• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೌರ ಮಂಡಲ ಅಧ್ಯಯನ ಮಾಡಲು ಬಂದಿತ್ತು ಈ 'ಸಿಗಾರ್'!

|

ವಾಷಿಂಗ್ಟನ್, ನವೆಂಬರ್ 5: ನಮ್ಮ ಸೌರಮಂಡಲದೊಂದಿಗೆ ಕಳೆದ ವರ್ಷ ಭೇಟಿ ನೀಡಿದ್ದ ಅತಿಥಿ 'ಒಮುಮಾಮುವಾ' ಮತ್ತೆ ಸುದ್ದಿಯಲ್ಲಿದ್ದಾನೆ.

2017ರಲ್ಲಿ ಹೆಚ್ಚೂ ಕಡಿಮೆ ಇದೇ ಸಮಯಕ್ಕೆ ಒಮುಮಾಮುವಾ ನಮ್ಮ ಸೌರ ಮಂಡಲದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದ. ಒಂದು ವರ್ಷ ಆತನನ್ನು ದೂರದಿಂದಲೇ ಸತತವಾಗಿ ಅಧ್ಯಯನ ಮಾಡಿರುವ ವಿಜ್ಞಾನಿಗಳು, ಆತ ಸೌರಮಂಡಲದಲ್ಲಿ ಜೀವಿಗಳ ಅಸ್ತಿತ್ವ ಇದೆಯೇ ಎಂಬುದನ್ನು ನೋಡಿ ಹೋಗಲು ಬಂದ 'ಪ್ರವಾಸಿಗ' ಎಂದು ವ್ಯಾಖ್ಯಾನಿಸಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

2017ರ ಅಕ್ಟೋಬರ್ 19ರಂದು ಹವಾಯಿಯಲ್ಲಿರುವ PAN STARRS1 ಎಂಬ ದೂರದರ್ಶನಕವು, ಕ್ಷುದ್ರಗ್ರಹವೊಂದನ್ನು ಪತ್ತೆಹಚ್ಚಿದ್ದರು. ಅದು ಬೇರೆ ಸೌರ ಮಂಡಲದಿಂದ ಬಂದ ವಿಚಿತ್ರ ವಸ್ತುವಾಗಿದೆ.

ಸೌರ ಮಂಡಲಕ್ಕೆ ಬಂದ 'ಹೊಸ ಅತಿಥಿ'ಯ ಕುತೂಹಲಕಾರಿ ಕಥೆ

ಆ ವಸ್ತುವಿಗೆ ನಾಸಾದ ವಿಜ್ಞಾನಿಗಳು ಒಮುಮಾಮುವಾ ಎಂದು ಹೆಸರಿಟ್ಟಿದ್ದರು. ಒಮುಮಾಮುವಾ ಎಂದರೆ ಹವಾಯಿ ಭಾಷೆಯಲ್ಲಿ 'ಬಲು ದೂರದಿಂದ ಬಂದ ಸಂದೇಶ' ಎಂದರ್ಥ.

ಒಮುಮಾಮುವಾ ಅಧ್ಯಯನ

ಒಮುಮಾಮುವಾ ಅಧ್ಯಯನ

ಹಾರ್ವರ್ಡ್ ಸ್ಮಿರ್‌ಸಾನಿಯನ್ ಬಾಹ್ಯಾಕಾಶ ಭೌತ ಕೇಂದ್ರವು ಒಮುಮಾಮುವಾ ಕುರಿತಾದ ಒಂದು ವರ್ಷದ ಅಧ್ಯಯನದ ವರದಿಯನ್ನು ಪ್ರಕಟಿಸಿದೆ.

ವಿಶಿಷ್ಟವಾದ 'ಸಿಗಾರ್' ಆಕಾರದ ಈ ವಸ್ತು, ತನ್ನ ಅಸ್ವಾಭಾವಿಕ ವರ್ತನೆಯ ಮೂಲಕ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಏಲಿಯನ್‌ಗಳ (ಅನ್ಯಗ್ರಹಜೀವಿಗಳು) ಗ್ರಹದಿಂದ ಬಂದಿರಬಹುದು ಎಂದು ಊಹಿಸಲಾಗಿತ್ತು.

ಅಧ್ಯಯನ ಮಾಡಲು ಬಂದಿದ್ದು

ಅಧ್ಯಯನ ಮಾಡಲು ಬಂದಿದ್ದು

ವಿಜ್ಞಾನಿಗಳ ಪ್ರಕಾರ ನಮ್ಮ ಸೌರ ವ್ಯವಸ್ಥೆಯಲ್ಲಿ ಏನೇನಿದೆ ಎಂದು ಇಣುಕಿ ನೋಡಲು ಬಂದಿರುವ ಗೂಢಚಾರ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.

ಸೌರ ಮಂಡಲದಲ್ಲಿ ಜೀವಿಗಳ ಕುರುಹುಗಳು ಇದೆಯೇ ಎಂಬುದನ್ನು ನೋಡಲು ಈ ಕೃತಕ ಬೆಳಕಿನ ನೌಕೆಯನ್ನು ಕಳುಹಿಸಿರಬಹುದು ಎಂದು ಅಧ್ಯಯನ ವರದಿ ಹೇಳಿದೆ.

ಸೌರ ಮಂಡಲಕ್ಕೆ ಬಂದ ವಿಚಿತ್ರ ಕ್ಷುದ್ರಗ್ರಹದ ಹಿಂದೆ ಏಲಿಯನ್ ಕೈವಾಡ

ಅನ್ಯ ಸೌರ ವ್ಯವಸ್ಥೆ

ಅನ್ಯ ಸೌರ ವ್ಯವಸ್ಥೆಯಿಂದ ನಮ್ಮ ಸೌರ ವ್ಯವಸ್ಥೆಯೊಳಗೆ ಬಂದ ಈ ಕಲ್ಲಿನಾಕೃತಿ ಕಳೆದ ವರ್ಷ ಅನಿರೀಕ್ಷಿತ ವೇಗ ಪಡೆದುಕೊಂಡು ನಮ್ಮ ಆಂತರಿಕ ಸೌರ ವ್ಯವಸ್ಥೆ ಮೂಲಕ ಹಾದುಹೋಗಿತ್ತು.

ಸೌರ ಮಂಡಲದಲ್ಲಿ ಕಂಡುಬಂದಿದ್ದ ವಸ್ತು, ಕ್ಷುದ್ರಗ್ರಹ ಮತ್ತು ಧೂಮಕೇತು ಎರಡರ ಗುಣಗಳನ್ನೂ ಪ್ರದರ್ಶಿಸಿತ್ತು. ಆ ವಸ್ತುವಿನಲ್ಲಿ ಉಂಟಾದ ಹಠಾತ್ ವೇಗೋತ್ಕರ್ಷವು ಸೋಲಾರ್ ರೇಡಿಯೇಷನ್‌ನಿಂದ ಹೊರಹೊಮ್ಮಿದ ಕೃತಕ ಸೃಷ್ಟಿಯ ನೌಕೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ವಿಚಿತ್ರ ವೇಗದ ವಿಸ್ಮಯ

'ಸೋಲಾರ್ ರೇಡಿಯೇಷನ್‌ನ ಒತ್ತಡ ಒಮುಮಾಮುವಾದ ವಿಚಿತ್ರ ವೇಗೋತ್ಕರ್ಷವನ್ನು ವಿವರಿಸಿಲಿದೆಯೇ?' ಎಂಬ ಶೀರ್ಷಿಕೆಯಡಿ ಈ ಅಧ್ಯಯನ ಮಾಡಲಾಗಿದೆ. ಸಿಎಫ್‌ಎ ಸಂಸ್ಥೆಯ ಸಂಶೋಧಕ ಶ್ಮೆಲ್ ಬೈಲಿ ಮತ್ತು ಐಟಿಸಿ ನಿರ್ದೇಶಕ ಪ್ರೊಫೆಸರ್ ಅಬ್ರಹಾಂ ಲೊಯೆಬ್ ಈ ಅಧ್ಯಯನ ನಡೆಸಿದ್ದಾರೆ.

ಬಾಹ್ಯಾಕಾಶದ ಚಿತ್ರ ಕ್ಲಿಕ್ಕಿಸಿ ರವಾನಿಸಿದ ನಾಸಾದ ಸೋಲಾರ್ ಪ್ರೋಬ್ ನೌಕೆ

ಅತ್ಯಾಧುನಿಕ ಸೌಲಭ್ಯಗಳಿವೆ

ಅತ್ಯಾಧುನಿಕ ಸೌಲಭ್ಯಗಳಿವೆ

'ಕೃತಕ ಸೃಷ್ಟಿಯ ಸಾಧ್ಯತೆಯನ್ನು ಪರಿಗಣಿಸಿ, ಒಮುಮಾಮುವಾ ಒಂದು ಹಗುರವಾದ ನೌಕೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಸಾಧನಗಳೊಂದಿಗೆ ಅಂತರ್ ಬಾಹ್ಯಾಕಾಶ ವ್ಯವಸ್ಥೆಯೊಳಗೆ ಓಡಾಡಿದೆ' ಎಂದು ಭೌತವಿಜ್ಞಾನಿಗಳು ಬರೆದಿದ್ದಾರೆ.

ಬೇರೆ ಸೌರಮಂಡಲದಿಂದ ಹೊರಟ ಈ ವಸ್ತು ನಮ್ಮ ಸೌರ ಮಂಡಲದೊಳಗೆ ಬಂದಿತ್ತು. 400 ಮೀಟರ್ ಉದ್ದ, 40 ಮೀಟರ್ ನಷ್ಟು ಅಗಲವಾಗಿರುವ ವಸ್ತು ಸಿಗಾರ್ ಆಕಾರದ ಕಲ್ಲಿನಂತೆ ಕಾಣಿಸುತ್ತದೆ.

ಕ್ಷುದ್ರಗ್ರಹವಲ್ಲ, ಸೃಷ್ಟಿಯಾದ ವಸ್ತು

ಇದರ ಆಕಾರ ನೋಡಿ ವಿಜ್ಞಾನಿಗಳು ಆರಂಭದಲ್ಲಿ ಇದನ್ನು ಕ್ಷುದ್ರಗ್ರಹ ಎಂದು ಅಂದಾಜಿಸಿದ್ದರಾದರೂ ಇದು ಸೃಷ್ಟಿ ಮಾಡಲಾದ ಕಲಾಕೃತಿ ಆಗಿರಬಹುದು ಎಂದು ಅಂದಾಜಿಸಿದ್ದಾರೆ. ಏಲಿಯನ್ ನಾಗರಿಕತೆಯ ಕಲಾಕೃತಿ ಇದಾಗಿರಬಹುದು ಎಂಬುದು ವಿಜ್ಞಾನಿಗಳ ಊಹೆಯಾಗಿದೆ.

ಸಾಮಾನ್ಯವಾಗಿ ಕ್ಷುದ್ರಗ್ರಹಗಳು ಈ ರೀತಿ ಉದ್ದದ ಆಕಾರದಲ್ಲಿ ಇರುವುದಿಲ್ಲ. ಜತೆಗೆ ಉದ್ದ ಇದ್ದಲ್ಲಿ ದೂಳಿನ ಕಣಗಳು, ವಾಯು ಪ್ರದೇಶವನ್ನು ದಾಟಿ ಸಾಗುವುದು ಸುಲಭವಾಗಲಿದೆ. ಹೀಗಾಗಿ ಇದನ್ನು ಏಲಿಯನ್ ಗಳು ರಚನೆ ಮಾಡಿ ಕಳುಹಿಸಿರಬಹುದು ಎಂದು ಕೆಲವು ಸಂಶೋಧಕರು ಹೇಳಿದ್ದಾರೆ.

ಕೆಂಪು ಬಣ್ಣದ ವಸ್ತು

ನಮ್ಮ ಸೌರ ಮಂಡಲದಲ್ಲಿರುವ ಕ್ಷುದ್ರ ಗ್ರಹಗಳಿಗಿಂತ ಇದು ಭಿನ್ನವಾಗಿದ್ದು, ಇದರಿಂದ ಭೂಮಿಗೆ ಯಾವುದೇ ಸಮಸ್ಯೆ ಇಲ್ಲ. ಇದು ಕೆಂಪು ಬಣ್ಣದಲ್ಲಿದೆ. ದೀರ್ಘ ಕಾಲ ಸೌರ ಮಂಡಲದಲ್ಲಿದ್ದು, ಬಹುಶಃ ನಮ್ಮ ಸೂರ್ಯ ಮತ್ತು ಬೇರೆ ಸೌರ ಮಂಡಲದ ಸೂರ್ಯನ ಬೆಳಕಿನಿಂದ ಹಾಗಾಗಿರಬಹುದು ಎಂದು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದರು.

English summary
The interstellar object in the solar system found last year might be an artificial light sail sent to look for signs of life, scientists claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X