ಅಮೆರಿಕದಲ್ಲಿ ಪ್ರಾಣ ಉಳಿಸಿಕೊಳ್ಳಲು ಐಸಿಯು ಬೆಡ್‌ಗಳಿಲ್ಲ..!
ವಾಷಿಂಗ್ಟನ್, ಜುಲೈ 20: ವಿಶ್ವದ ದೊಡ್ಡಣ್ಣ, ಅತ್ಯಂತ ಶ್ರೀಮಂತ ರಾಷ್ಟ್ರ ಅಂತಾ ಬಿಲ್ಡಪ್ ಕೊಡುವ ಅಮೆರಿಕದ ಮರ್ಯಾದೆ ಇದೀಗ ಬೀದಿಪಾಲಾಗಿದೆ. ಕೊರೊನಾ ವೈರಸ್ ಅಮೆರಿಕದ ಮಾನ ಹರಾಜು ಹಾಕಿದೆ. ದೊಡ್ಡಣ್ಣನ ನಾಡಿನ ಸ್ಥಿತಿ ಹೇಗಿದೆ ಅಂದರೆ, ಸದ್ಯಕ್ಕೆ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಈವರೆಗೆ 39 ಲಕ್ಷ ಕೇಸ್ ಕನ್ಫರ್ಮ್ ಆಗಿವೆ. ನಿನ್ನೆ ಕೂಡ 65 ಸಾವಿರ ಕೇಸ್ ದಾಖಲಾಗಿವೆ. ಪರಿಣಾಮ ಅಮೆರಿಕದ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್‌ಗಳೇ ಸಿಗುತ್ತಿಲ್ಲ.
ಫ್ಲೋರಿಡಾ ಸ್ಥಿತಿಯಂತೂ ಬರ್ಬರವಾಗಿದೆ. ಇಲ್ಲಿನ 49 ಆಸ್ಪತ್ರೆಗಳಲ್ಲಿ ಒಂದೇ ಒಂದು ಐಸಿಯು ಹಾಸಿಗೆ ಕೂಡ ಲಭ್ಯವಿಲ್ಲ. ನಿನ್ನೆ ಕೂಡ 12 ಸಾವಿರಕ್ಕೂ ಹೆಚ್ಚು ಕೇಸ್‌ಗಳು ಫ್ಲೋರಿಡಾ ಸ್ಟೇಟ್‌ನಲ್ಲಿ ದಾಖಲಾಗಿವೆ. ಒಂದೇ ದಿನ 87 ಅಮೆರಿಕನ್ನರು ಫ್ಲೋರಿಡಾದಲ್ಲಿ ಪ್ರಾಣಬಿಟ್ಟಿದ್ದಾರೆ.
ಪರಿಸ್ಥಿತಿ ಹೀಗಿರುವಾಗಲೇ ತುರ್ತಾಗಿ ಒಂದೇ ಒಂದು ಐಸಿಯು ಬೆಡ್ ಕೂಡ ಖಾಲಿ ಇಲ್ಲ. ಫ್ಲೋರಿಡಾ ರಾಜ್ಯದಲ್ಲಿ 3 ಲಕ್ಷ 50 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್‌ಗಳು ಕನ್ಫರ್ಮ್ ಆಗಿವೆ. ಅಮೆರಿಕದಲ್ಲಿ ಕೊರೊನಾ ದಾಳಿಗೆ ತುತ್ತಾದ ರಾಜ್ಯಗಳ ಪೈಕಿ ಫ್ಲೋರಿಡಾ 4ನೇ ಸ್ಥಾನದಲ್ಲಿದೆ.

ಬಹುತೇಕ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ
ಇದು ಒಂದು ರಾಜ್ಯದ ಸ್ಥಿತಿ ಅಲ್ಲ. ಅಮೆರಿಕದ 50 ರಾಜ್ಯಗಳ ಪೈಕಿ ಬಹುಪಾಲು ಸ್ಟೇಟ್‌ಗಳ ಸ್ಥಿತಿ ಇದೇ ಆಗಿದೆ. ಐಸಿಯು ಬೆಡ್ ಬಿಡಿ ಕಾಮನ್ ವಾರ್ಡ್‌ಗೂ ಹಾಹಾಕಾರ ಎದ್ದಿದೆ. ಅದರಲ್ಲೂ ನ್ಯೂಯಾರ್ಕ್ ನಿವಾಸಿಗಳನ್ನು ಆ ದೇವರೆ ಕಾಪಾಡಬೇಕು. ಸೋಂಕಿತರಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ಆಸ್ಪತ್ರೆಗಳನ್ನ ನಿರ್ಮಿಸಿದ್ದರೂ ಸಾಲುತ್ತಿಲ್ಲ. ಲಕ್ಷ ಲಕ್ಷ ಸೋಂಕಿತರು ಆಸ್ಪತ್ರೆಗೆ ಸೇರಲು ಸಾಧ್ಯವಾಗದೆ ನರಳಾಡಿ ಸಾಯುವ ಸ್ಥಿತಿ ಇದೆ. ಇನ್ನು ವೆಂಟಿಲೇಟರ್ಸ್ ಪಾಡು ಕಂಡವನೇ ಬಲ್ಲ. ಹೀಗೆ ಅಮೆರಿಕ ವಿಶ್ವದೆದುರು ತನ್ನ ಮಾನವನ್ನ ತಾನೇ ಹರಾಜು ಹಾಕಿಕೊಳ್ಳುತ್ತಿದೆ.

ಮುಂದಿನ ದಿನಗಳಲ್ಲಿ ಬಹುದೊಡ್ಡ ಆಪತ್ತು
ಅಮೆರಿಕದಲ್ಲಿ ಈಗ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ಜಸ್ಟ್ ಸ್ಯಾಂಪಲ್ ಅಷ್ಟೇ. ಮುಂಬರುವ ದಿನಗಳಲ್ಲಿ ಈ ಅಂಕಿ-ಅಂಶ ದುಪ್ಪಟ್ಟಾಗುವ ಬಗ್ಗೆ ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಲಾಕ್‌ಡೌನ್ ನಿಯಮಗಳ ಸಡಿಲಿಕೆ ಮತ್ತು ಚಿಕಿತ್ಸೆಗೆ ಅಗತ್ಯವಾದ ಸೂಕ್ತ ವ್ಯವಸ್ಥೆಗಳನ್ನು ಮಾಡದೇ ಇರುವುದು ಇಂತಹ ಸ್ಥಿತಿ ತಂದೊಡ್ಡಿದೆ. ವಿಶ್ವದ ಪವರ್‌ಫುಲ್ ರಾಷ್ಟ್ರದ ಪರಿಸ್ಥಿತಿಯೇ ಹೀಗಾದರೆ ಬಡ ರಾಷ್ಟ್ರಗಳ ಪಾಡು ಹೇಗೆ ಎಂಬ ಆತಂಕ ಇಡೀ ಜಗತ್ತಿನಾದ್ಯಂತ ಮನೆಮಾಡಿದೆ.

ರಾಜ್ಯವಾರು ಸೋಂಕಿತರ ಮಾಹಿತಿ
| ರಾಜ್ಯವಾರು ಸೋಂಕಿತರ ಮಾಹಿತಿ | ||
|---|---|---|
| ರಾಜ್ಯ | ಪ್ರಕರಣಗಳು | ಸಾವು |
| ನ್ಯೂಯಾರ್ಕ್ | 4.12 ಲಕ್ಷ | 32,187 |
| ಕ್ಯಾಲಿಫೋರ್ನಿಯಾ | 3.91 ಲಕ್ಷ | 7,710 |
| ಫ್ಲೋರಿಡಾ | 3.50 ಲಕ್ಷ | 4,981 |
| ಟೆಕ್ಸಾಸ್ | 3.38 ಲಕ್ಷ | 4,033 |
| ನ್ಯೂಜೆರ್ಸಿ | 1.79 ಲಕ್ಷ | 15,706 |

ವಿಶ್ವದಲ್ಲಿ ಕೊರೊನಾವೈರಸ್ ಪ್ರಕರಣಗಳು
ಜಾಗತಿಕ ಮಹಾಮಾರಿ ಕೊರೊನಾವೈರಸ್ ಪ್ರಕರಣಗಳ ಲೆಕ್ಕಾಚಾರ ಜುಲೈ 20ರಂತೆ 14,664,746 ಕೊರೊನಾ ಕೇಸ್ ದಾಖಲಾಗಿವೆ. 609,291 ಮಂದಿ ಮೃತಪಟ್ಟಿದ್ದಾರೆ. 8,748,224 ಮಂದಿ ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ 3,898,550 ಪ್ರಕರಣಗಳಿದ್ದು, 143,289 ಮಂದಿ ಮೃತಪಟ್ಟಿದ್ದಾರೆ.1,952,923 ಸಕ್ರಿಯ ಪ್ರಕರಣಗಳಿದ್ದು, 16,552 ವಿಷಮ ಪರಿಸ್ಥಿತಿಯಲ್ಲಿದ್ದು, 1,802,338 ಮಂದಿ ಗುಣಮುಖರಾಗಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications