ಸೌರ ವ್ಯವಸ್ಥೆಯ ಕಟ್ಟಕಡೆಯ ಗ್ರಹಕಾಯಕ್ಕೆ 'ನ್ಯೂ ಹಾರಿಜಾನ್' ಭೇಟಿ

ವಾಷಿಂಗ್ಟನ್, ಜನವರಿ 2: ಸೌರ ವ್ಯವಸ್ಥೆಯ ಉಗಮದ ಕುರಿತಾದ ಅಧ್ಯಯನಕ್ಕೆ ನೆರವಾಗಬಲ್ಲ ಅಂಶಗಳನ್ನು ಹೊಂದಿರುವ ಕ್ಯೂಪೆರ್ ಬೆಲ್ಟ್ ಖಗೋಳ ಪ್ರದೇಶವನ್ನು ಪರಿಶೋಧಿಸುವ ಮಹತ್ವದ ಗಳಿಗೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾ ಅಡಿಯಿಟ್ಟಿದೆ.

ನಾಸಾದ ನ್ಯೂ ಹಾರಿಜಾನ್ಸ್ ಬಾಹ್ಯಾಕಾಶ ನೌಕೆ, ನಿರೀಕ್ಷೆಯಂತೆಯೇ ಹೊಸ ವರ್ಷದ ಮೊದಲ ದಿನ ನಸುಕಿನಲ್ಲಿ ಸೌರ ಮಂಡಲದಾಚೆಗಿನ ಕಟ್ಟಕಡೆಯ ಗ್ರಹಕಾಯ ಅಲ್ಟಿಮಾ ಟ್ಯುಲೆಯನ್ನು ಹಾದುಹೋಗಿದೆ.

ಬಾಹ್ಯಾಕಾಶ ನೌಕೆಯೊಂದು ನಮ್ಮ ಸೌರ ವ್ಯವಸ್ಥೆಯನ್ನು ದಾಟಿ ಅದರಾಚೆಗಿನ ಜಗತ್ತಿಗೆ ಪ್ರವೇಶಿಸಿರುವುದು ಇದೇ ಮೊದಲ ಸಲವಾಗಿದೆ.

nasa ultima thule new horizons pluto solar system spacecraft kuiper belt

ನ್ಯೂ ಹಾರಿಜಾನ್ಸ್ ಕಳುಹಿಸುತ್ತಿರುವ ಸಂಕೇತಗಳು ನೌಕೆಯು ಸಮರ್ಪಕವಾಗಿದೆ ಎಂಬುದನ್ನು ಖಚಿತಪಡಿಸಿದೆ. ನೌಕೆಯು ಅಲ್ಟಿಮಾ ಟ್ಯುಲೆಯ ಅತ್ಯಂತ ಸಮೀಪಕ್ಕೆ ಹೋದ 10 ಗಂಟೆಯ ಬಳಿಕ ತನ್ನ ಡಿಜಿಟಲ್ ರೆಕಾರ್ಡರ್‌ಗಳ ಮೂಲಕ ಅದರ ವೈಜ್ಞಾನಿಕ ದತ್ತಾಂಶಗಳನ್ನು ಜಾನ್ಸ್ ಹಾಪ್ಕಿನ್ಸ್ ಅಪ್ಲೈಡ್ ಫಿಸಿಕ್ಸ್ ಲ್ಯಾಬೊರೇಟರಿಗೆ (ಎಪಿಎಲ್) ರವಾನಿಸಿದೆ.

'ನ್ಯೂ ಹಾರಿಜಾನ್ಸ್ ನಾವು ಉದ್ದೇಶಿಸಿದಂತೆಯೇ ಕೆಲಸ ಮಾಡಿದೆ. ಸೂರ್ಯನಿಂದ 4 ಬಿಲಿಯನ್ ಮೈಲು ದೂರದಾಚೆಯ ಜಗತ್ತನ್ನು ಶೋಧಿಸುವ ಕಾರ್ಯಕ್ಕೆ ಅದು ನೆರವಾಗಿದೆ ಎಂದು ಕೊಲಾರಾಡೊದ ಬೌಲ್ಡರ್‌ನಲ್ಲಿರುವ ಸೌತ್‌ವೆಸ್ಟ್ ರೀಸರ್ಚ್ ಸಂಸ್ಥೆಯ ವಿಜ್ಞಾನಿ ಅಲಾನ್ ಸ್ಟೆರ್ನ್ ತಿಳಿಸಿದ್ದಾರೆ.

ನೌಕೆ ನಮಗೆ ಕಳುಹಿಸಿರುವ ದತ್ತಾಂಶಗಳು ಬಹು ಪ್ರಯೋಜನಕಾರಿಯಾಗಿ ಕಾಣಿಸುತ್ತಿವೆ. ಅಲ್ಟಿಮಾ ಬಗ್ಗೆ ಈಗಾಗಲೇ ಸಾಮೀಪ್ಯದ ಅಧ್ಯಯನವನ್ನು ಆರಂಭಿಸಿದ್ದೇವೆ. ಅದನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸಲು ಈ ದತ್ತಾಂಶಗಳು ನೆರವಾಗಲಿವೆ ಎಂದು ಅವರು ಹೇಳಿದ್ದಾರೆ.

nasa ultima thule new horizons pluto solar system spacecraft kuiper belt

ಕ್ಯೂಪೆರ್ ಬೆಲ್ಟ್ ಎನ್ನುವುದು ಸೌರ ವ್ಯವಸ್ಥೆಯ ಹೊರಭಾಗದಲ್ಲಿರುವ ವೃತ್ತಾಕಾರದ ವಲಯವಾಗಿದೆ. ಇದು ಮಿಥೇನ್, ಅಮೋನಿಯಾ ಮತ್ತು ನೀರಿನ ಅಂಶಗಳನ್ನು ಹೊಂದಿರುವ ಅನೇಕ ಆಕಾಶಕಾಯಗಳನ್ನು ಒಳಗೊಂಡಿದೆ.

ನ್ಯೂ ಹಾರಿಜಾನ್ಸ್ ನೌಕೆ ಅಲ್ಟಿಮಾ ಟ್ಯುಲೆಯ ಸಮೀಪದಿಂದ ದತ್ತಾಂಶಗಳನ್ನು ರವಾನಿಸಿದ ಬಳಿಕ ಕ್ಯೂಪೆರ್ ಬೆಲ್ಟ್ ಸುತ್ತಲೂ ತನ್ನ ಸುತ್ತಾಟ ಮುಂದುವರಿಸಲಿದೆ. ಇನ್ನಷ್ಟು ವಸ್ತುಗಳ ಬಗ್ಗೆ ಅಧ್ಯಯನ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+