• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಾಕಿಂಗಾಯ್ತು? ಬಾಹ್ಯಾಕಾಶ ವಿಜ್ಞಾನ ಲೋಕಕ್ಕೆ ಇದು ಕರಾಳ ಸುದ್ದಿ

|
Google Oneindia Kannada News

ಬಾನೆತ್ತರಕ್ಕೆ ಕಣ್ಣಗಲಿಸಿ ನೋಡಿದರೆ ಕಣ್ಣು ಪೂರ್ತಿ ಹಿಡಿಸದಷ್ಟು ನಕ್ಷತ್ರಗಳ ರಾಶಿ ಮಿನುಗುತ್ತದೆ. ಆದ್ರೆ ನಕ್ಷತ್ರ ಲೋಕವನ್ನೇ ತನ್ನ ಕಣ್ಣಲ್ಲಿ ಕಟ್ಟಿಹಾಕಿದ್ದ ದಂತಕಥೆ 'ಹಬಲ್ ಟೆಲಿಸ್ಕೋಪ್' ಕೆಲದಿನಗಳಿಂದ ನಿರ್ಜೀವವಾಗಿದೆ. ಬರೋಬ್ಬರಿ 30 ವರ್ಷಗಳ ಕಾಲ ಮನುಷ್ಯರ ಪಾಲಿಗೆ ಬಾಹ್ಯಾಕಾಶದ ಬೆಳಕಾಗಿದ್ದ 'ಹಬಲ್' ಕೆಲಸ ನಿಲ್ಲಿಸಿದೆ. ಇದು 'ನಾಸಾ' ಸೇರಿದಂತೆ ಜಗತ್ತಿನ ಘಟಾನುಘಟಿ ಬಾಹ್ಯಾಕಾಶ ಸಂಸ್ಥೆಗಳಿಗೆ ಆತಂಕ ಮೂಡಿಸಿದೆ.

ಇಷ್ಟುದಿನ ಲಕ್ಷಾಂತರ ನಕ್ಷತ್ರಗಳನ್ನ ಗುರುತಿಸಿ, ಹತ್ತಾರು ಗ್ಯಾಲಕ್ಸಿಗಳ ಪರಿಚಯ ಮಾಡಿಸಿದ್ದ ಮಾನವರ ಬಾಹ್ಯಾಕಾಶದ ಕಣ್ಣು ಮರೆಯಾಗುತ್ತಾ ಎಂಬ ದುಗುಡ ಮನೆಮಾಡಿದೆ. ಏಕೆಂದರೆ ಹಬಲ್ ಕೇವಲ ಒಂದು ದೂರದರ್ಶಕವಲ್ಲ ಅದು ಬಾಹ್ಯಾಕಾಶ ಜಗತ್ತಿನ ಮಿನುಗು ತಾರೆ. ಬರೋಬ್ಬರಿ 30 ವರ್ಷಗಳಿಂದ ಯಾವುದೇ ಟೆಲಿಸ್ಕೋಪ್‌ಗಳು ಮಾಡಲಾಗದ ಕೆಲಸವನ್ನ, ನೆಲದ ಸಹಾಯ ಇಲ್ಲದೆ ಮಾಡಿರುವ ಸಾಧಕ.

ನಾಸಾ ಸಂಸ್ಥೆ ಮಹತ್ವದ ಸಾಧನೆಗೆ ಇದೇ ಹಬಲ್ ದಾರಿದೀಪ. 1990ರ ಏಪ್ರಿಲ್‌ 24 ರಂದು 'ಡಿಸ್ಕವರೀ' ನೌಕೆ ಮೂಲಕ ಬಾಹ್ಯಾಕಾಶ ಸೇರಿದ್ದ ಹಬಲ್, 30 ವರ್ಷಗಳಿಂದ ಸತತವಾಗಿ ಭೂಮಿ ಸುತ್ತಲೂ ಗಿರಕಿ ಹೊಡೆಯುತ್ತಾ ಲಕ್ಷಾಂತರ ನಕ್ಷತ್ರ ಹಾಗೂ ಗ್ರಹಗಳ ಫೋಟೋ ಕ್ಲಿಕ್ಕಿಸಿದೆ.

 ಬದುಕಿ ಬಾ ‘ಹಬಲ್’!

ಬದುಕಿ ಬಾ ‘ಹಬಲ್’!

ಜಗತ್ತಿನ ಪ್ರತಿಯೊಬ್ಬ ಪ್ರಾಮಾಣಿಕ ಬಾಹ್ಯಾಕಾಶ ವಿಜ್ಞಾನಿಗೂ ಈ ಕೊರಗು ಕಾಡದೇ ಇರದು. ಏಕೆಂದರೆ ಈ ಟೆಲಿಸ್ಕೋಪ್ ಮಾಡಿದ ಸಾಧನೆಗಳೇ ಅಂತಹದ್ದು. ಕಡೆಗೆ ಅಮೆರಿಕದ ಜೊತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಿದ್ದಿಗೆ ಬಿದ್ದಿರುವ ರಾಷ್ಟ್ರಗಳು ಕೂಡ ‘ಹಬಲ್ ಟೆಲಿಸ್ಕೋಪ್' ಸಾಧನೆಯನ್ನ ಮನಸಾರೆ ಹೊಗಳಿವೆ. ಇದೇ ಕಾರಣಕ್ಕೆ ಹಬಲ್ ಸಾವನ್ನು ಯಾವ ವಿಜ್ಞಾನಿಯೂ ಬಯಸುವುದಿಲ್ಲ. ಹಬಲ್ ಟೆಲಿಸ್ಕೋಪ್ ಇನ್ನೂ ನೂರಾರು ವರ್ಷ ಹೀಗೆ ಬಾಹ್ಯಾಕಾಶದಲ್ಲಿ ಮಿನುಗಬೇಕು ಎಂಬುದು ಇಡೀ ಜಗತ್ತಿನ ಆಸೆ. ಹೀಗಾಗಿಯೇ ‘ಹಬಲ್ ಬದುಕಿ ಬಾ' ಅಂತಾ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಸೆಕೆಂಡ್‌ಗೆ 8 ಕಿ.ಮೀ. ಸ್ಪೀಡ್..!

ಸೆಕೆಂಡ್‌ಗೆ 8 ಕಿ.ಮೀ. ಸ್ಪೀಡ್..!

ಭೂ ಗ್ರಹದ ನೆಲದಿಂದ ಸುಮಾರು 560 ಕಿಲೋ ಮೀಟರ್ ಎತ್ತರದಲ್ಲಿ, ಭೂಮಿ ತಾಯಿ ಗುರುತ್ವ ಬಲದಿಂದ ಎಸ್ಕೇಪ್ ಆಗಲು ‘ಹಬಲ್ ಟೆಲಿಸ್ಕೋಪ್' ಹರಸಾಹಸ ಮಾಡುತ್ತಿದೆ. ಪ್ರತಿ ಸೆಕೆಂಡ್‌ಗೆ ಸುಮಾರು 8 ಕಿ.ಮೀ ವೇಗದಲ್ಲಿ ಭೂಮಿ ಸುತ್ತಲೂ ಗಿರಕಿ ಹೊಡೆಯುತ್ತಿದೆ ‘ಹಬಲ್ ಟೆಲಿಸ್ಕೋಪ್'. ಪ್ರತಿ 97 ನಿಮಿಷಗಳಿಗೆ ಒಮ್ಮೆ ಭೂಮಿಯನ್ನು ಒಂದು ರೌಂಡ್ ಹಾಕುತ್ತಿದೆ ಹಬಲ್ ಟೆಲಿಸ್ಕೋಪ್. ಹೀಗೆ ತನ್ನ 30 ವರ್ಷಗಳ ಪ್ರಯಾಣದಲ್ಲಿ ಸುಮಾರು 600 ಕೋಟಿ ಕಿ.ಮೀ. ದೂರದಷ್ಟು ಭೂಮಿಯನ್ನ ಸುತ್ತಿದೆ ಹಬಲ್ ದೂರದರ್ಶಕ. ಇದು ಜಗತ್ತಿನ ಬೇರೆ ಯಾವುದೇ ದೂರದರ್ಶಕ ಮಾಡದ ಅತ್ಯುತ್ತಮ ಸಾಧನೆ ಎನ್ನಬಹುದು.

‘ಹಬಲ್’ ಹೆಸರು ಏಕೆ ಬಂತು..?

‘ಹಬಲ್’ ಹೆಸರು ಏಕೆ ಬಂತು..?

ನಿಮಗೆಲ್ಲಾ ಗೊತ್ತೇ ಇದೆ ಬಾಹ್ಯಾಕಾಶ ಲೋಕ ಒಬ್ಬರ ಅಥವಾ ಇಬ್ಬರ ಸಾಧನೆ ಮೇಲೆ ಬೆಳೆದು ನಿಂತಿಲ್ಲ. ಈ ವಿಭಾಗ ಬೆಳೆದು ನಿಲ್ಲಲು ಕೋಟ್ಯಂತರ ಸಾಧಕರ ಪರಿಶ್ರಮವಿದೆ. ಬಾಹ್ಯಾಕಾಶ ವಿಜ್ಞಾನಕ್ಕೆ ಸಾವಿರಾರು ವರ್ಷ ಇತಿಹಾಸವೂ ಇದೆ. ಗ್ರೀಕರ ಕಾಲದಿಂದಲೂ ಬಾಹ್ಯಾಕಾಶ ವಿಜ್ಞಾನ ಬಹುದೊಡ್ಡ ಕ್ಷೇತ್ರ. ಇದೇ ರೀತಿ ವಿಶ್ವ ವಿಖ್ಯಾತ ಖಗೋಳ ವಿಜ್ಞಾನಿ ‘ಎಡ್ವಿನ್‌ ಹಬಲ್‌' ಅವರ ಸ್ಮರಣಾರ್ಥ ಹಬಲ್ ದೂರದರ್ಶಕಕ್ಕೆ ‘ಹಬಲ್' ಎಂಬ ಹೆಸರು ಬಂದಿದೆ. ಎಡ್ವಿನ್‌ ಹಬಲ್‌ ಅವರು ಮಾಡಿದ್ದ ಸಾಧನೆಗೆ ಸರಿಸಮನಾಗಿ ನಿಲ್ಲುವ ತಾಕತ್ತು ಈ ‘ಹಬಲ್ ಟೆಲಿಸ್ಕೋಪ್'ಗೆ ಇದೆ ಎಂದರೆ ತಪ್ಪಾಗಲಾರದು.

ಸಮಸ್ಯೆ ಸರಿಹೋಗುತ್ತಾ..?

ಸಮಸ್ಯೆ ಸರಿಹೋಗುತ್ತಾ..?

ವಿಜ್ಞಾನಿಗಳು ಹೀಗೆ ಧೈರ್ಯ ತುಂಬುತ್ತಿದ್ದಾರೆ. ನಾಸಾ ವಿಜ್ಞಾನಿಗಳ ಪ್ರಕಾರ ಇದು ಕೇವಲ ತಾಂತ್ರಿಕ ಸಮಸ್ಯೆ. ಆದಷ್ಟು ಬೇಗ ಸಮಸ್ಯೆ ಬಗೆಹರಿದು, ಹಬಲ್ ಮೊದಲಿನಂತೆ ಕೆಲಸ ಮಾಡುವ ವಿಶ್ವಾಸ ಇದೆ ಅಂತಾ ಧೈರ್ಯ ಹೇಳುತ್ತಿದ್ದಾರೆ. ಮತ್ತೊಂದೆಡೆ ಹಬಲ್‌ಗೆ ವಯಸ್ಸಾಗಿದೆ, ಮತ್ತೊಮ್ಮೆ ಅದು ಬದುಕಿ ಬರುವುದೇ ಅನುಮಾನ ಎಂಬ ಮಾತುಗಳೂ ಕೇಳಿಬಂದಿವೆ. ಜೂನ್ 13ರಂದೇ ಕೆಲಸ ನಿಲ್ಲಿಸಿರುವ ಹಬಲ್‌ನ ಸಂಪರ್ಕಿಸುವ ಕಾರ್ಯ ಮುಂದುವರಿದಿದೆ. ಇಷ್ಟೆಲ್ಲಾ ಗೊಂದಲಗಳ ನಡುವೆ ಆದಷ್ಟು ಬೇಗ ಹಬಲ್ ಮೊದಲಿನಂತೆ ಆಗಲಿ ಎಂಬುದೇ ಎಲ್ಲರ ಆಶಯ.

English summary
NASA’s 30 year old Hubble telescope on halt after technical trouble with payload computer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X