ನ್ಯೂಯಾರ್ಕ್‌ನಲ್ಲಿ ವೆಂಟಿಲೇಟರ್‌ನಲ್ಲಿದ್ದ ಕೊರೊನಾ ಸೋಂಕಿತರ ಮರಣ ಪ್ರಮಾಣವೇ ಹೆಚ್ಚು
ನ್ಯೂಯಾರ್ಕ್, ಏಪ್ರಿಲ್ 23: ಅಮೆರಿಕದ ಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿರುವ ನಗರ ನ್ಯೂಯಾರ್ಕ್. ಇಲ್ಲಿ ವೆಂಟಿಲೇಟರ್‌ನಲ್ಲಿದ್ದ ಕೊರೊನಾ ಸೋಂಕಿತರ ಮರಣ ಪ್ರಮಾಣವೇ ಹೆಚ್ಚಿದೆ ಎಂದು ತಿಳಿದುಬಂದಿದೆ.
ನ್ಯೂಯಾರ್ಕ್ ನಗರದಲ್ಲಿ ಸಾಕಷ್ಟು ಮಂದಿ ಕೊವಿಡ್ 19 ರೋಗದಿಂದ ಬಳಲುತ್ತದ್ದಾರೆ. ಅದರಲ್ಲಿ ಬಹುತೇಕ ಮಂದಿಯನ್ನು ಮೆಕಾನಿಕಲ್ ವೆಂಟಿಲೇರ್‌ನಲ್ಲಿ ಇರಿಸಿದರೂ ಸಾನ್ನಪ್ಪಿದ್ದಾರೆ.
ಮಾರ್ಚ್ 1ರಿಂದ ಏಪ್ರಿಲ್ 4ರವರೆಗೆ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ 5700 ಮಂದಿ ಕೊರೊನಾ ಸೋಂಕಿತರನ್ನು ದಾಖಲಿಸಲಾಗಿದೆ.ಅದರಲ್ಲಿ 2364 ಮಂದಿ ಗುಣಮುಖರಾಗಿದ್ದಾರೆ. ಎಲ್ಲಾ ಕೊವಿಡ್ 19 ಪ್ರಕರಣಗಳಲ್ಲಿ ವೆಂಟಿಲೇಟರ್ ಅಗತ್ಯವಿರುವುದಿಲ್ಲ, ಅದರಿಂದ ಅಡ್ಡ ಪರಿಣಾಮಗಳೇ ಹೆಚ್ಚಿರುತ್ತವೆ.

ವೆಂಟಿಲೇಟರ್‌ನಲ್ಲಿದ್ದವರ ಸಾವು ಹೆಚ್ಚು
ಒಟ್ಟಾರೆ ಸಾವಿನ ಪ್ರಮಾಣವನ್ನು ಗಮನಿಸಿದಾಗ ಶೇ.80ರಷ್ಟು ಮಂದಿಯನ್ನು ಮೆಕಾನಿಕಲ್ ವೆಂಟಿಲೇಟರ್‌ನಲ್ಲಿಟ್ಟಿದ್ದರೂ ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದುಬಂದಿದೆ.

ವೆಂಟಿಲೇಟರ್‌ಗಳು ಶ್ವಾಸಕೋಶಕ್ಕೆ ಗಾಳಿಯನ್ನು ಪುಶ್ ಮಾಡುತ್ತದೆ
ಸಾಮಾನ್ಯವಾಗಿ ಉಸಿರಾಟದ ತೊಂದರೆ ಇರುವವರನ್ನು ವಂಟಿಲೇಟರ್‌ನಲ್ಲಿ ಇರಿಸಲಾಗುತ್ತದೆ. ಆದರೆ ಈಗ ವೆಂಟಿಲೇಟರ್‌ಗಳೇ ಆರಾಮವಾಗಿದ್ದ ರೋಗಿಗಳ ಜೀವವನ್ನು ತೆಗೆಯುತ್ತಿದೆ ಎಂದೆನಿಸುತ್ತಿದೆ ಎಂದು ಡಾ. ಕೆವಿನ್ ಟ್ರಾಸಿ ಹೇಳಿದ್ದಾರೆ.ಮೆಕಾನಿಕಲ್ ವೆಂಟಿಲೇಟರ್‌ಗಳು ಗಾಳಿಯನ್ನು ಶ್ವಾಸಕೋಶಗಳಿಗೆ ಪುಶ್ ಮಾಡುತ್ತದೆ.

ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ಮಾತ್ರ ವೆಂಟಿಲೇಟರ್ ಅಳವಡಿಸಬೇಕು
ಗಂಭೀರತರದ ರೋಗಿಗಳು ತಾವಾಗಿಯೇ ಉಸಿರಾಡಲು ಸಾಧ್ಯವಾಗದ ಕಾರಣ ವೆಂಟಿಲೇಟರ್ ಬಳಕೆ ಮಾಡಲಾಗುತ್ತದೆ. ಆದರೂ ವೆಂಟಿಲೇಟರ್‌ನಲ್ಲಿದ್ದವರೂ ಕೂಡ ಮೃತಪಡುತ್ತಿರುವ ಕಾರಣ ಕೊವಿಡ್ 19 ರೋಗಿಗಳನ್ನು ತಕ್ಷಣಕ್ಕೆ ವೆಂಟಿಲೇಟರ್‌ನಲ್ಲಿರಿಸುವುದನ್ನು ನಿಲ್ಲಿಸಲಾಗಿದೆ.

ವೆಂಟಿಲೇಟರ್‌ನಲ್ಲಿಟ್ಟಾಕ್ಷಣ ರೋಗಿ ಗುಣಮುಖನಾಗುವುದಿಲ್ಲ
ವಂಟಿಲೇಟರ್‌ನಲ್ಲಿಟ್ಟ ಕೂಡಲೇ ರೋಗಿಗಳು ಬೇಗ ಗುಣಮುಖವಾಗುತ್ತಾರೆ ಎನ್ನುವುದು ತಪ್ಪು ಕಲ್ಪನೆ, ಕೊರೊನಾ ರೋಗಿಗಳು ಆಸ್ಪತ್ರೆಗೆ ಬಂದ ಕೂಡಲೇ ಅವರನ್ನು ಐಸಿಯುನಲ್ಲಿರಲಸಾಗುತ್ತಿತ್ತು ಎಂದು ಮೌಂಟ್ ಸಿನಾಲ್ ಆಸ್ಪತ್ರೆಯ ಡಾ. ಉದಿತ್ ಚಡ್ಡಾ ಮಾಹಿತಿ ನೀಡಿದ್ದಾರೆ.
ಅವರಿಗೆ ನಿಜವಾಗಲೂ ತವಾಗಿಯೇ ಉಸಿರಾಡಲು ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಾಗಲಷ್ಟೇ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗುತ್ತದೆ.
ಶೇ.40-50 ರಷ್ಟು ರೋಗಿಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಿದ ಬಳಿಕ ಮೃತಪಟ್ಟಿದ್ದಾರೆ.

ಸಾಕಷ್ಟು ಕೊವಿಡ್ 19 ಪ್ರಕರಣಗಳಲ್ಲಿ ಉಸಿರಾಟ ಸಮಸ್ಯೆ ಇರುವುದಿಲ್ಲ
ಸಾಕಷ್ಟು ಪ್ರಕರಣಗಳಲ್ಲಿ ಅವರಿಗೆ ಕೃತಕ ಉಸಿರಾಟದ ಸಮಸ್ಯೆ ಇರುವುದಿಲ್ಲ, ಅಂತಹ ರೋಗಿಗಳಿಗೆ ವೆಂಟಿಲೇಟರ್ ಅಳವಡಿಸುವುದರಿಂದ ಅವರ ಪ್ರಾಣಕ್ಕೆ ಅಪಾಯವಿದೆ.

ವೆಂಟಿಲೇಟರ್ ಅಳವಡಿಸುವುದರಿಂದಾಗುವ ದುಷ್ಪರಿಣಾಮಗಳು
ವೆಂಟಿಲೇಟರ್ ಅಳವಡಿಸುವುದರಿಂದ ನಾನಾ ರೀತಿಯ ಇನ್‌ಫೆಕ್ಷನ್‌ಗಳು ಆಗುವ ಸಾಧ್ಯತೆ ಇರುತ್ತದೆ.ಮಾನಸಿಕವಾಗಿ ಸಮಸ್ಯೆಗಳು ಕಾಡುವ ಸಾಧ್ಯತೆಯೂ ಇರುತ್ತದೆ. ಇದಷ್ಟೇ ಅಲ್ಲ ಅದರಿಂದ ಸಾಕಷ್ಟು ಅಡ್ಡ ಪರಿಣಾಮಗಳಿರುತ್ತದೆ.
ಸಾಮಾನ್ಯವಾಗಿ ಕೊವಿಡ್ ರೋಗಿಗಳಲ್ಲಿ ಶೇ.57ರಷ್ಟು ರಕ್ತದೊತ್ತಡ, ಶೇ.41ರಷ್ಟು ಒಬೆಸಿಟಿ, ಶೇ.34ರಷ್ಟು ಮಧುಮೇಹ ತೊಂದರೆ ಇರುತ್ತದೆ.
ಸಾಮಾನ್ಯವಾಗಿ ಮಧುಮೇಹವಿರುವ ರೋಗಿಗಳನ್ನು ವೆಂಟಿಕೇಷನ್ ಅಲ್ಲಿ ಇರಿಸಲಾಗುತ್ತದೆ. ಅಥವಾ ಕಿಡ್ನಿಗೆ ಸಂಬಂಧಿಸಿದ ತೊಂದರೆಗಳಿದ್ದಲ್ಲಿ ಕೂಡ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗುತ್ತದೆ.












Click it and Unblock the Notifications