ಅಮೆರಿಕ ಅಧ್ಯಕ್ಷೆಯಾಗಲು ಕಮಲಾ ಅಲ್ಲ, ಇವಾಂಕಾ ಸೂಕ್ತ: ಟ್ರಂಪ್
ವಾಷಿಂಗ್ಟನ್, ಆಗಸ್ಟ್ 29: ಅಮೆರಿಕದ ಅಧ್ಯಕ್ಷೆಯಾಗಲು ಕಮಲಾ ಹ್ಯಾರಿಸ್ ಸೂಕ್ತರಲ್ಲ ಇವಾಂಕಾ ಸೂಕ್ತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಉಪಾಧ್ಯಕ್ಷ ಸ್ಥಾನದಲ್ಲಿ ಮಹಿಳೆಯೊಬ್ಬರನ್ನು ನೋಡುವ ಆಸೆ ಇದೆ, ನೀವೆಲ್ಲಾ ಇವಾಂಕಾ ಹೆಸರನ್ನು ಹೇಳುತ್ತಿದ್ದೀರಿ, ಕಮಲಾ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ವರ್ಷದ ಹಿಂದೆ ಹೇಳಲಾಗಿತ್ತು. ಹಾಗೆ ಹೇಳಿದ ಐದೇ ತಿಂಗಳಲ್ಲಿ ಅವರ ಜನಪ್ರಿಯತೆಯು ತಳಮಟ್ಟಕ್ಕೆ ಕುಸಿದಿತ್ತು ಎಂದು ಟ್ರಂಪ್ ಹೇಳಿದ್ದಾರೆ.
2024ರ ಚುನಾವಣೆಯಲ್ಲಿ ಕಮಲಾ ಅವರನ್ನು ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯನ್ನಾಗಿ ಘೋಷಿಸಲು ಡೆಮಾಕ್ರೆಟಿಕ್ ಪಕ್ಷವು ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬಂದಿವೆ.

ಮಹಿಳೆಯೊಬ್ಬರು ಅಮೆರಿಕದ ಅಧ್ಯಕ್ಷ ಗಾದಿಗೆ ಏರಬೇಕೆಂಬ ಮಾತಿಗೆ ನಾನು ಬೆಂಬಲ ಸೂಚಿಸುತ್ತೇನೆ. ಭಾರತ ಸಂಜಾತೆ ಕಮಲಾ ಅವರು ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು.
55 ವರ್ಷ ವಯಸ್ಸಿನ ಕಮಲಾಗೆ ಹೆಚ್ಚಿನ ಜನಮನ್ನಣೆ ಇಲ್ಲದಿರುವುದನ್ನು ಅರಿತ ಪಕ್ಷ ಅವರ ಹೆಸರನ್ನು ಕೈಬಿಟ್ಟಿತ್ತು. ಬಳಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು.
ತಾವು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾದರೆ ಯಾರೂ ಮತ ಹಾಕುವುದಿಲ್ಲ ಎಂಬುದು ಕಮಲಾ ಅವರಿಗೆ ಅರಿವಾಯಿತು, ಹೀಗಾಗಿ ಅವರು ಅಧ್ಯಕ್ಷೀಯ ಸ್ಥಾನದ ರೇಸ್‌ನಿಂದ ಹಿಂದೆ ಸರಿದರು ಎಂದು ಹೇಳಿದರು.












Click it and Unblock the Notifications