• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೃಂಗಸಭೆಗೆ ಚೀನಾ ನಿರ್ಲಕ್ಷಿಸಿ ತೈವಾನ್‌ಗೆ ಆಹ್ವಾನ ನೀಡಿದ ಅಮೆರಿಕ

|
Google Oneindia Kannada News

ಅಮೆರಿಕ ಹಾಗೂ ಚೀನಾ ನಡುವಿನ ಶೀತಲ ಸಮರ ಮುಂದುವರೆದಿದೆ. ಬೆಂಕಿ ಜೊತೆ ಸರಸ ಬೇಡ ಎಂದು ಕೆಲವೇ ದಿನಗಳ ಹಿಂದೆ ಅಮೆರಿಕ-ಚೀನಾ ನಡುವೆ ನಡೆದಿದ್ದ ವರ್ಚ್ಯುಯಲ್ ಶೃಂಗಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದರು.

ಚೀನಾ ಅಷ್ಟೇ ಅಲ್ಲದೇ ರಷ್ಯಾ, ಟರ್ಕಿಗಳನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ತೈವಾನ್ ವಿಷಯವಾಗಿ ಅಮೆರಿಕ-ಚೀನಾ ಸಂಬಂಧ ಇತ್ತೀಚಿನ ದಿನಗಳಲ್ಲಿ ಹದಗೆಟ್ಟಿದೆ.

 ಅಮೆರಿಕ-ಚೀನಾ ಸಭೆ ಆರಂಭ: ಮಾನವ ಹಕ್ಕುಗಳು, ಭದ್ರತೆ ಕುರಿತು ಚರ್ಚೆ ಅಮೆರಿಕ-ಚೀನಾ ಸಭೆ ಆರಂಭ: ಮಾನವ ಹಕ್ಕುಗಳು, ಭದ್ರತೆ ಕುರಿತು ಚರ್ಚೆ

ನ್ಯಾಟೋ ಸದಸ್ಯ ರಾಷ್ಟ್ರವಾಗಿರುವ ಟರ್ಕಿಗೂ ಅಮೆರಿಕ ಆಹ್ವಾನವನ್ನು ನೀಡಿಲ್ಲ. ಭಾರತ, ಪಾಕಿಸ್ತಾನ, ಇರಾಕ್, ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರಗಾಳಿಗೆ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳಿಗೆ ಆಹ್ವಾನ ನೀಡಲಾಗಿಲ್ಲ.

ಚೀನಾ ತೈವಾನ್ ನ್ನು ತನ್ನದೇ ಪ್ರಾಂತ್ಯ ಎಂದು ಹೇಳಿಕೊಳ್ಳುತ್ತಿದ್ದರೆ, ಒಂದೇ ಚೀನಾ ನೀತಿಯನ್ನು ಕಡೆಗಣಿಸಿ ತೈವಾನ್ ನ್ನು ಪ್ರತ್ಯೇಕ ರಾಷ್ಟ್ರವಾಗಿ ಅಮೆರಿಕ ಗುರುತಿಸಿ ಆಹ್ವಾನ ನೀಡಿರುವುದು ಚೀನಾಗೆ ತೀವ್ರ ಮುಜುಗರ ಉಂಟುಮಾಡಿದೆ.

ಈಗ ತಾನೇನು ಕಮ್ಮಿ ಇಲ್ಲ ಎಂಬುದನ್ನು ಚೀನಾಗೆ ಸ್ಪಷ್ಟ ಸಂದೇಶದಲ್ಲಿ ತಿಳಿಸುವುದಕ್ಕಾಗಿಯೇನೋ ಎಂಬಂತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಮೆರಿಕದಿಂದ ಆಯೋಜಿಸಲಾಗಿರುವ ಪ್ರಜಾಪ್ರಭುತ್ವ ಶೃಂಗಸಭೆಗೆ 110 ದೇಶಗಳನ್ನು ಆಹ್ವಾನಿಸಿದ್ದು, ಈ ಪೈಕಿ ತೈವಾನ್‌ಗೂ ಆಹ್ವಾನ ಹೋಗಿದೆ. ಆದರೆ ಚೀನಾವನ್ನು ಇದರಿಂದ ಹೊರಗಿಡಲಾಗಿದೆ.

ಡಿಸೆಂಬರ್​ನಲ್ಲಿ ಈ ಪ್ರಜಾಪ್ರಭುತ್ವ ಶೃಂಗಸಭೆ ನಡೆಯಲಿದೆ ಎಂದು ಆಗಸ್ಟ್​​ನಲ್ಲಿಯೇ ಘೋಷಿಸಲಾಗಿತ್ತು. ಈ ಶೃಂಗಸಭೆಯಲ್ಲಿ, ಸರ್ವಾಧಿಕಾರದ ವಿರುದ್ಧ ಪ್ರಜೆಗಳ ರಕ್ಷಣೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಮಾನವ ಹಕ್ಕುಗಳ ಗೌರವ ಉತ್ತೇಜಿಸುವ ವಿಚಾರಗಳಿಗೆ ಆದ್ಯತೆ ಇರಲಿದೆ ಎಂದು ಆಗಸ್ಟ್​ನಲ್ಲಿಯೇ ಘೋಷಿಸಲಾಗಿದೆ.

ಡಿಸೆಂಬರ್​ 9-10ರಂದು ನಡೆಯಲಿರುವ ವರ್ಚ್ಯುವಲ್​ ಶೃಂಗಸಭೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇಸ್ರೇಲ್​ ಮತ್ತು ಇರಾಕ್​ ಮಾತ್ರ ಪಾಲ್ಗೊಳ್ಳಲಿವೆ. ಇಲ್ಲಿ ಈಜಿಪ್ಟ್​, ಸೌದಿ ಅರೇಬಿಯಾ, ಜೋರ್ಡನ್​, ಕತಾರ್​, ಯುನೈಟೆಡ್​ ಅರಬ್​ ಎಮಿರೇಟ್ಸ್​ಗಳಿಗೆ ಯುಎಸ್ ಆಹ್ವಾನ ನೀಡಿಲ್ಲ.

ಬ್ರೆಜಿಲ್​ ಅಧ್ಯಕ್ಷ ಜೇರ್​ ಬೊಲ್ಸೊನಾರೋ ಅವರು ಸರ್ವಾಧಿಕಾರಿ, ಅಮೆರಿಕದ ಹಿಂದಿನ ಅಧ್ಯಕ್ಷ ಜೋ ಬೈಡನ್​ ಬೆಂಬಲಿಗರು ಎಂಬಂಥ ಟೀಕೆಗಳಿದ್ದರೂ ಅವರಿಗೂ ಶೃಂಗಸಭೆಗೆ ಆಹ್ವಾನ ನೀಡಲಾಗಿದೆ. ಯುರೋಪ್​​ನಲ್ಲಿ ಪೋಲ್ಯಾಂಡ್​, ಆಫ್ರಿಕಾದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ನೈಜರ್ ದೇಶಗಳು ಪಟ್ಟಿಯಲ್ಲಿ ಸೇರಿವೆ.

ಚೀನಾ -ಅಮೆರಿಕ ವೈರತ್ವ ಜಗಜ್ಜಾಹೀರು. ಯುಎಸ್​ಗೆ ಚೀನಾ ಯಾವತ್ತಿದ್ದರೂ ಸೈದ್ಧಾಂತಿಕ ಶತ್ರು. ಹಾಗೇ ತೈವಾನ್​ ಮೇಲೆ ಕೂಡ ಚೀನಾದ ಕೆಂಗಣ್ಣಿದೆ. ತೈವಾನ್​ ಆಡಳಿತ ತನ್ನನ್ನು ತಾನು ಸ್ವತಂತ್ರ ಎಂದು ಹೇಳಿಕೊಂಡಿದ್ದರೂ ಚೀನಾ ಅದನ್ನು ಒಪ್ಪುತ್ತಿಲ್ಲ. ಅದು ತಮ್ಮದೇ ಒಂದು ಭಾಗ ಎಂದೇ ಹೇಳಿಕೊಂಡುಬರುತ್ತಿದೆ. ಈಗ ಅಮೆರಿಕ ತೈವಾನ್​​ಗೆ ಆಮಂತ್ರಣಕೊಟ್ಟಿದ್ದು ಚೀನಾದ ಸಿಟ್ಟಿಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು.

ಡಿಸೆಂಬರ್​ 9-10ರಂದು ನಡೆಯಲಿರುವ ವರ್ಚ್ಯುವಲ್​ ಶೃಂಗಸಭೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇಸ್ರೇಲ್​ ಮತ್ತು ಇರಾಕ್​ ಮಾತ್ರ ಪಾಲ್ಗೊಳ್ಳಲಿವೆ. ಇಲ್ಲಿ ಈಜಿಪ್ಟ್​, ಸೌದಿ ಅರೇಬಿಯಾ, ಜೋರ್ಡನ್​, ಕತಾರ್​, ಯುನೈಟೆಡ್​ ಅರಬ್​ ಎಮಿರೇಟ್ಸ್​ಗಳಿಗೆ ಯುಎಸ್ ಆಹ್ವಾನ ನೀಡಿಲ್ಲ.

ಬ್ರೆಜಿಲ್​ ಅಧ್ಯಕ್ಷ ಜೇರ್​ ಬೊಲ್ಸೊನಾರೋ ಅವರು ಸರ್ವಾಧಿಕಾರಿ, ಅಮೆರಿಕದ ಹಿಂದಿನ ಅಧ್ಯಕ್ಷ ಜೋ ಬೈಡನ್​ ಬೆಂಬಲಿಗರು ಎಂಬಂಥ ಟೀಕೆಗಳಿದ್ದರೂ ಅವರಿಗೂ ಶೃಂಗಸಭೆಗೆ ಆಹ್ವಾನ ನೀಡಲಾಗಿದೆ. ಯುರೋಪ್​​ನಲ್ಲಿ ಪೋಲ್ಯಾಂಡ್​, ಆಫ್ರಿಕಾದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ನೈಜರ್ ದೇಶಗಳು ಪಟ್ಟಿಯಲ್ಲಿವೆ.

English summary
The Biden administration has invited Taiwan to its "Summit for Democracy" next month, according to a list of participants published on November 23, a move likely to infuriate China, which views the democratically governed island as its territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion