ಬಗ್ದಾದಿ ಹತ್ಯೆ ಮಾಡಿದ್ದೇವೆ ಎಂದು ಬೀಗಬೇಡಿ: ಅಮೆರಿಕಕ್ಕೆ ಐಎಸ್ ಎಚ್ಚರಿಕೆ

ವಾಷಿಂಗ್ಟನ್, ನವೆಂಬರ್ 1: ಇಸ್ಲಾಮಿಕ್ ಸ್ಟೇಟ್‌ ಉಗ್ರ ಸಂಘಟನೆಯ ಅಬು ಬಕರ್-ಬಗ್ದಾದಿ ಹತ್ಯೆ ಮಾಡಿದ್ದೇವೆ ಎಂದು ಖುಷಿ ಪಡಬೇಡಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಐಎಸ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಈ ಕುರಿತು ಆಡಿಯೋ ಟೇಪ್ ವೊಂದನ್ನು ಬಿಡುಗಡೆ ಮಾಡಿರುವ ಇಸಿಸ್, ಬಾಗ್ದಾದಿ ಮೃತಪಟ್ಟಿರುವುದು ನಿಜ. ಆತನ ಉತ್ತರಾಧಿಕಾರಿಯಾಗಿ ಅಬು ಇಬ್ರಾಹಂ ಅಲ್ ಹಷಿಮಿ ಅಲ್ ಖುರೇಶಿಯನ್ನು ನೇಮಿಸಲಾಗಿದ್ದು, ನಮ್ಮ ಬಾಹುಳ್ಯವನ್ನು ಮತ್ತಷ್ಟು ವಿಸ್ತರಿಸುತ್ತೇವೆಂದು ಹೇಳಿದೆ.

ಬಗ್ದಾದಿ ಅಂತ್ಯದ ಬಳಿಕ ವಿಶ್ವದ ಅತ್ಯಂತ ಕ್ರೂರ ಮತ್ತು ನಿರ್ದಯಿ ಉಗ್ರಗಾಮಿ ಸಂಘಟನೆಯಾಗಿರುವ ಐಎಸ್‌ಗೆ ವಿಧ್ವಂಸಕ ಎಂದೇ ಕುಖ್ಯಾತಿಗಳಿಸಿರುವ ಅಬ್ದುಲ್ಲಾ ಖರ್ದಾಶ್ ನೂತನ ನಾಯಕನಾಗಿ ನೇಮಕಗೊಂಡಿದ್ದಾನೆಂದು ತಿಳಿದುಬಂದಿದೆ.

IS Names Baghdadi Successor Threatens US

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಳೆಯ ಮೂರ್ಖನೆಂದು ಕರೆದಿರುವ ಐಎಸ್, ಹೆಚ್ಚು ಹಿಗ್ಗಬೇಡ ಅಮೆರಿಕಾ, ಶೀಘ್ರದಲ್ಲಿಯೇ ನಾವು ನಮ್ಮ ಸೇಡು ತೀರಿಸಿಕೊಳ್ಳುತ್ತೇವೆ. ಇತರೆ ರಾಷ್ಟ್ರಗಳ ಎದುರು ಹೇಗೆ ನಗಪಾಟಲಿಗೆ ಈಡಾಗಿದ್ದೀರಿ ಎಂಬುದನ್ನು ನೀವು ನೋಡುತ್ತಿಲ್ಲ. ನಿಮ್ಮ ಹಣೆಬರಹವು ವಯಸ್ಸಾದ ಮೂರ್ಖನಿಂದ ಆಳಲ್ಪಡುತ್ತಿದೆ. ಒಂದು ಅಭಿಪ್ರಾಯದಿಂದ ನಿದ್ರೆಗೆ ಜಾರುತ್ತಾರೆ.

ಮತ್ತೊಬ್ಬರೊಂದಿಗೆ ಎಚ್ಚರಗೊಳ್ಳುತ್ತಾರೆ. ಈಗಾಗಲೇ ಮತ್ತೊಬ್ಬ ಮುಖ್ಯಸ್ಥರನ್ನು ನೇಮಕ ಮಾಡಲಾಗಿದ್ದು, ನೂತನ ಮುಖ್ಯಸ್ಥ ಸೇಡು ತೀರಿಸಿಕೊಳ್ಳಲಿದ್ದಾರೆ. ಬಾಗ್ದಾದಿ ಇದ್ದ ದಿನಗಳ ಸಾಧನೆಗಳನ್ನು ಸಿಹಿ ಮಾಡಲಿದ್ದಾರೆ ತಿಳಿಸಿದೆ.

ಅಮೆರಿಕಾ ಸೇನಾಪಡೆಗಳ ದಾಳಿಯಲ್ಲಿ ಹತನಾದ ಬಗ್ದಾದಿ ಪರಮಾಪ್ತನಾದ ಈತ ಈ ಹಿಂದೆ ಇರಾಕ್ ಸರ್ವಾಧಿಕಾರಿ ಸದ್ಧಾಮ್ ಹುಸೇನ್ ಆಪ್ತ ವಲಯದ ಸೇನೆಯಲ್ಲಿ ಉನ್ನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ತನ್ನ ಶತ್ರುಗಳನ್ನು ನಿಗ್ರಹಿಸಲು ಸದ್ದಾಮ್ ಬಳಸುತ್ತಿದ್ದ ವಿಶೇಷ ಸೇನೆಯ ತಂಡದಲ್ಲಿದ್ದ ಈತನನ್ನು ಡಿಸ್ಟ್ರಾಯರ್ (ವಿಧ್ವಂಸಕ) ಎಂದೇ ಗುರ್ತಿಸಲಾಗುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+