ಜೀವರಕ್ಷಕ ಲಸಿಕೆ ಅಭಿವೃದ್ಧಿ; ಭಾರತವನ್ನು ಶ್ಲಾಘಿಸಿದ ಅಮೆರಿಕ

ವಾಷಿಂಗ್ಟನ್, ಫೆಬ್ರವರಿ 23: ಕೊರೊನಾ ಸೋಂಕಿನ ವಿರುದ್ಧ ಜೀವರಕ್ಷಕ ಲಸಿಕೆ ಅಭಿವೃದ್ಧಿಯಲ್ಲಿ ಭಾರತದ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿರುವ ಅಮೆರಿಕ, ಆರೋಗ್ಯ ಕ್ಷೇತ್ರದಲ್ಲಿ ಸಹಕಾರಕ್ಕೆ ಭಾರತದೊಂದಿಗೆ ಒಡಂಬಡಿಕೆ ಪತ್ರ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದೆ.

ಕೊರೊನಾ ನಿರ್ವಹಣೆ ಹಾಗೂ ಲಸಿಕೆ ಅಭಿವೃದ್ಧಿ ಸಂಬಂಧ ಉಭಯ ದೇಶಗಳ ನಡುವೆ ಸಹಕಾರವಿದ್ದು, ಹೆಚ್ಚಿನ ಮಟ್ಟದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಸಂಶೋಧನೆ ಸಾಧ್ಯವಾಗಲಿದೆ ಎಂದು ತಿಳಿಸಿದೆ.

"ಕೊರೊನಾ ವಿರುದ್ಧ ಹೋರಾಡಲು ಹಾಗೂ ಲಸಿಕೆ ಅಭಿವೃದ್ಧಿಯಲ್ಲಿ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಔಷಧಗಳ ಪ್ರಾಮುಖ್ಯದೊಂದಿಗೆ ಅವುಗಳನ್ನು ಜಾಗತಿಕವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶ ಈ ಒಡಂಬಡಿಕೆಯದ್ದು" ಎಂದು ರಾಜ್ಯ ಇಲಾಖೆ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.

India Played Key Role In Corona Vaccine Production Praised US

ಭಾರತದ ವೈದ್ಯಕೀಯ ವಲಯ ಸದೃಢವಾಗಿದೆ. ವಿಶ್ವದ ಔಷಧಾಲಯ ಎಂದು ಕರೆಸಿಕೊಂಡಿರುವ ಭಾರತ ಜಾಗತಿಕವಾಗಿ 60% ಲಸಿಕೆ ಉತ್ಪಾದಿಸುತ್ತಿದೆ. ನೇಪಾಳ, ಬಾಂಗ್ಲಾ, ಭೂತಾನ್, ಮಾಲ್ಡೀವ್ಸ್‌, ಸೀಶೆಲ್ಸ್‌, ಮ್ಯಾನ್ಮಾರ್, ಮಾರಿಷಸ್, ಒಮನ್, ಸೌದಿ ಅರೇಬಿಯಾ ಇನ್ನೂ ಹಲವು ದೇಶಗಳಿಗೆ ಲಸಿಕೆಗಳನ್ನು ಕಳುಹಿಸಿದೆ. ಜೀವರಕ್ಷಕ ಲಸಿಕೆ ಅಭಿವೃದ್ಧಿಯಲ್ಲಿ ಭಾರತದ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಐದು ಲಕ್ಷ ಮೀರಿದ್ದು, ಕೊರೊನಾದಿಂದ ಅತಿ ಕೆಟ್ಟ ಪರಿಣಾಮ ಎದುರಿಸಿದ ದೇಶಗಳಲ್ಲಿ ಅಮೆರಿಕ ಒಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+