ಅಮೆರಿಕದಿಂದ ಭಾರತಕ್ಕೆ ಮತ್ತೆ 100 ವೆಂಟಿಲೇಟರ್‌ಗಳು
ವಾಷಿಂಗ್ಟನ್, ಆಗಸ್ಟ್ 19: ಅಮೆರಿಕದಿಂದ ಮತ್ತೆ 100 ವೆಂಟಿಲೇಟರ್‌ಗಳು ಭಾರತಕ್ಕೆ ಬರಲಿವೆ.
Recommended Video
ಒಟ್ಟು 200 ವೆಂಟಿಲೇಟರ್‌ಗಳು ಬಂದಂತಾಗಲಿವೆ. ಅಮೆರಿಕ ಸರ್ಕಾರವು ಯುಎಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವಲಾಪ್‌ಮೆಂಟ್ ಮೂಲಕ ಭಾರತ ಸರ್ಕಾಋ ಹಾಗೂ ರೆಡ್ ಕ್ರಾಸ್ ಸಹಕಾರದೊಂದಿಗೆ 100 ವೆಂಟಿಲೇಟರ್‌ಗಳನ್ನು ನೀಡುತ್ತಿದೆ.
ಯುಎಸ್ ರಾಯಭಾರಿ ಕೆನ್ನೆತ್ ಈ ಕುರಿತು ಮಾಹಿತಿ ನೀಡಿದ್ದು, 100 ವೆಂಟಿಲೇಟರ್‌ಗಳನ್ನು ಭಾರತಕ್ಕೆ ನೀಡಲು ಉತ್ಸುಕರಾಗಿದ್ದೇವೆ, ಇದನ್ನು ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರಿಗೆ ನೀಡಲಾಗುತ್ತದೆ ಎಂದರು.

ಮೊದಲ ಹಂತದಲ್ಲಿ ಜೂನ್ 14 ರಂದು 100 ವೆಂಟಿಲೇಟರ್‌ಗಳನ್ನು ನೀಡಲಾಗಿದೆ.ಒಟ್ಟು 8 ಆಲ್‌ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ನೀಡಲಾಗಿದೆ.
ಭಾರತಕ್ಕೆ ಶೀಘ್ರದಲ್ಲೇ ವೆಂಟಿಲೇಟರ್‌ಗಳನ್ನು ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಸಂಕಷ್ಟದ ಸಮಯದಲ್ಲಿ ನಾವು ಭಾರತದೊಂದಿಗೆ ಗಟ್ಟಿಯಾಗಿ ನಿಲ್ಲಲಿದ್ದೇವೆ ಎಂದು ಈ ವೇಳೆ ಟ್ರಂಪ್ ಹೇಳಿದ್ದರು. ಅದರಂತೆ ಇಂದು ಮೊದಲ ಹಂತದ ಭಾಗವಾಗಿ 100 ವೆಂಟಿಲೇಟರ್‌ಗಳು ಭಾರತಕ್ಕೆ ಹಸ್ತಾಂತರಗೊಂಡಿದೆ.












Click it and Unblock the Notifications