"ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಯುದ್ಧ ನಡೆದರೆ..."

ವಾಷಿಂಗ್ಟನ್, ಅಕ್ಟೋಬರ್ 3: ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಯುದ್ಧ ನಡೆದರೆ 12.5 ಕೋಟಿ ಮಂದಿ ಸಾವನ್ನಪ್ಪಬಹುದು. ಇದರಿಂದ ಜಾಗತಿಕ ಹವಾಮಾನಕ್ಕೆ ಮಹಾದುರಂತವಾಗಿ ಮಾರ್ಪಟ್ಟು, ಜಗತ್ತನ್ನೇ ಅಪಾಯಕ್ಕೆ ದೂಡಬಹುದು ಎಂದು ಅಧ್ಯಯನವೊಂದರಲ್ಲಿ ಅಭಿಪ್ರಾಯ ಪಡಲಾಗಿದೆ.

ಇಂಥ ಯುದ್ಧದಿಂದ ಬಾಂಬ್ ಬಿದ್ದ ಸ್ಥಳ ಮಾತ್ರ ದುರಂತಕ್ಕೆ ಈಡಾಗುವುದಿಲ್ಲ. ಇಡೀ ಜಗತ್ತಿಗೆ ಅಪಾಯಕಾರಿ ಆಗಬಹುದು ಎಂದು ಅಮೆರಿಕದ ನ್ಯೂ ಬ್ರುನ್ಸ್ ವಿಕ್ ನ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಧ್ಯಯನದ ಸಹ ಲೇಖಕ ಆಲನ್ ರೋಬೊಕ್ ಅಭಿಪ್ರಾಯ ಪಟ್ಟಿದ್ದಾರೆ.

2025ರ ಹೊತ್ತಿಗೆ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಸನ್ನಿವೇಶ ಸೃಷ್ಟಿ ಆಗಬಹುದು ಎನ್ನಲಾಗಿದೆ. ಈ ಅಧ್ಯಯನವನ್ನು ಜರ್ನಲ್ ಸೈನ್ಸ್ ಅಡ್ವಾನ್ಸಸ್ ನಲ್ಲಿ ಮುದ್ರಿಸಲಾಗಿದೆ. ಈಗಾಗಲೇ ಈ ದೇಶಗಳು ಕಾಶ್ಮೀರ ವಿಚಾರವಾಗಿ ಹಲವು ಯುದ್ಧ ಮಾಡಿವೆ. 2025ರ ಹೊತ್ತಿಗೆ ಎರಡೂ ದೇಶಗಳ ಬಳಿ ಒಟ್ಟಾರೆ 400ರಿಂದ 500 ಅಣ್ವಸ್ತ್ರ ಸಂಗ್ರಹ ಇರಲಿದೆ ಎಂದು ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ.

If Nuclear War Happened Between India And Pakistan...

ಸಂಶೋಧಕರ ಪ್ರಕಾರ, ಈ ಭೂಮಿ ಮೇಲಿನ ಸಸ್ಯ ವರ್ಗದ ಬೆಳವಣಿಗೆ 15ರಿಂದ 30 ಪರ್ಸೆಂಟ್ ಇಳಿಕೆಯಾಗಲಿದೆ. ಇನ್ನು ಸಾಗರದ ಉತ್ಪನ್ನದಲ್ಲೂ 5ರಿಂದ 15ರಷ್ಟು ಇಳಿಕೆ ಆಗಲಿದೆ.

"ಒಂಬತ್ತು ದೇಶಗಳಲ್ಲಿ ಆಣ್ವಸ್ತ್ರಗಳಿವೆ. ಆದರೆ ಭಾರತ ಹಾಗೂ ಪಾಕಿಸ್ತಾನ ಮಾತ್ರ ತನ್ನ ಬಳಿ ಇರುವ ಶಸ್ತ್ರಾಸ್ತ್ರ ಪ್ರಮಾಣವನ್ನು ಹೆಚ್ಚಿಸುತ್ತಾ ಸಾಗಿವೆ" ಎಂದು ರೋಬೊಕ್ ಹೇಳಿದ್ದಾರೆ.

ಕಾಶ್ಮೀರದ ವಿಚಾರಕ್ಕೆ ಎರಡೂ ದೇಶಗಳ ಮಧ್ಯೆ ಪರಿಸ್ಥಿತಿ ವಿಷಮಿಸುತ್ತಿರುವುದನ್ನು ಗಮನಿಸಬಹುದು. ಅದರ ಪರಿಣಾಮ ಏನಾಗಬಹುದು ಎಂಬುದನ್ನು ತಿಳಿಯಬೇಕು ಎಂದಿರುವ ಸಂಶೋಧಕರು, 2025ರ ಹೊತ್ತಿಗೆ ಅಣ್ವಸ್ತ್ರ ಸ್ಫೋಟದ ಪ್ರಮಾಣ 15 ಕಿಲೋಟನ್ ನಷ್ಟು ಇರುತ್ತದೆ. ಅಮೆರಿಕವು 1945ರಲ್ಲಿ ಇಷ್ಟೇ ಪ್ರಮಾಣದ ಬಾಂಬ್ ಅನ್ನು ಹಿರೋಷಿಮಾ ಮೇಲೆ ಹಾಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+