ಹಬಲ್ ಟೆಲಿಸ್ಕೋಪ್‌ಗೆ 30 ವರ್ಷ: ಏನಿದರ ವಿಶೇಷತೆ?
ವಾಷಿಂಗ್ಟನ್, ಏಪ್ರಿಲ್ 25: ಹಬಲ್ ದೂರದರ್ಶಕಕ್ಕೆ ಇಂದಿಗೆ 30 ವರ್ಷ. ಹಬಲ್ ದೂರದರ್ಶಕ ಭೂಮಿಯ ಸುತ್ತ ಬಾಹ್ಯಾಕಾಶದಲ್ಲಿ ಸುತ್ತುತ್ತಿರುವ ಒಂದು ದೂರದರ್ಶಕವಾಗಿದೆ.
ಬಾಹ್ಯಾಕಾಶದಲ್ಲಿರುವುದರಿಂದ ಈ ದೂರದರ್ಶಕವು ಭೂಮಿಯ ವಾಯುಮಂಡಲದ ಹೊರಗಿರುವುದರಿಂದ ಬ್ರಹ್ಮಾಂಡದ ದೂರ ಪ್ರದೇಶಗಳಿಂದ ಬರುವ ದುರ್ಬಲ ಬೆಳಕನ್ನು ಕೂಡ ಪತ್ತೆ ಹಚ್ಚಬಲ್ಲದು. 1990ರಲ್ಲಿ ಅಂತರಿಕ್ಷದಲ್ಲಿ ಸ್ಥಾಪನೆಗೊಂಡ ನಂತರದಿಂದಲೂ ಇದು ಖಗೋಳವಿಜ್ಞಾನಕ್ಕೆ ಬ್ರಹ್ಮಾಂಡದ ಬಗ್ಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡುತ್ತಾ ಬಂದಿದೆ.
ಪ್ರತಿ ಸಕೆಂಡ್‌ಗೆ 8 ಕಿ.ಮೀ. ವೇಗ, ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯ ಪರಿಭ್ರಮಣೆ ನಡೆಸುತ್ತಿರುವ ಹಬಲ್ ಬಾಹ್ಯಾಕಾಶ ದೂರದರ್ಶಕವು ದಟ್ಟ ಗ್ಯಾಲಕ್ಸಿಯ ಚಿತ್ರವನ್ನು ಸೆರೆ ಹಿಡಿದಿದೆ.

ಹಬಲ್ ದೂರದರ್ಶಕದ ನಿರ್ಮಾಣ ಮತ್ತು ಉಡಾವಣೆಗಳು ಹಲವು ಹಣಕಾಸು ಸಮಸ್ಯೆಗಳಿಗೆ ಮತ್ತು ತಡಗಳಿಗೆ ಒಳಪಟ್ಟಿದ್ದವು. ಹಾಗೂ, 1990 ರಲ್ಲಿ ಉಡಾವಣೆಯ ಸ್ವಲ್ಪವೇ ನಂತರ ಅದರ ಮುಖ್ಯ ಕನ್ನಡಿಯು ಗೋಳೀಯ ವಿಪಥನ ದೋಷದಿಂದ ಕೂಡಿದ್ದು ಗಮನಕ್ಕೆ ಬಂದಿತು. ಅದರ ನಿರ್ಮಾಣ ಕಾಲದಲ್ಲಿ ದೋಷಪೂರಿತ ಗುಣ ನಿಯಂತ್ರಣದಿಂದ ಆದ ಈ ತಪ್ಪಿನಿಂದ ದೂರದರ್ಶಕವು ಬಹಳ ಅದಕ್ಷವಾಯಿತು.
ಆದರೆ, 1993ರ ದುರಸ್ತಿ ಯಾತ್ರೆಯ ಬಳಿಕ ದೂರದರ್ಶಕವು ತನ್ನ ನಿರೀಕ್ಷಿತ ದಕ್ಷತೆಯನ್ನು ತಲುಪಿ, ಖಗೋಳಶಾಸ್ತ್ರದಲ್ಲಿ ಒಂದು ಪ್ರಮುಖ ಸಂಶೋಧನಾ ಉಪಕರಣವಾಯಿತು.

ಇದು ಮೊಟ್ಟ ಮೊದಲ ಬಾಹ್ಯಾಕಾಶ ದೂರದರ್ಶಕವಲ್ಲವಾದರೂ, 1990ರಲ್ಲಿ ಇದರ ಉಡಾವಣೆಯ ನಂತರ ಇದು ಖಗೋಳಶಾಸ್ತ್ರದ ಇತಿಹಾಸದಲ್ಲಿ ಒಂದು ಮುಖ್ಯ ಉಪಕರಣವಾಗಿ ಕಾರ್ಯ ನಿರ್ವಹಿಸಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications