ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ನಿರ್ಗಮನ ಪ್ರಕ್ರಿಯೆ ಹೇಗಿರುತ್ತದೆ? ಬಲವಂತವೋ- ಬರೀ ಸ್ವಂತವೋ?

By ಅನಿಲ್ ಆಚಾರ್
|
Google Oneindia Kannada News

ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಧ್ಯಕ್ಷೀಯ ಚುನಾವಣೆ ಅದರೆ ಇಲ್ಲಿಯ ತನಕ ಅಧಿಕಾರ ಹಸ್ತಾಂತರ ಶಾಂತಿಯುತವಾಗಿಯೇ ನಡೆದುಕೊಂಡು ಬಂದಿದೆ. ಅದು ಈಗಲೂ ಹಾಗೇ ಮುಂದುವರಿಯಬಹುದು. ಈಗಿನ ಫಲಿತಾಂಶದ ಸಾಚಾತನದ ಬಗ್ಗೆಯೇ ಅಧ್ಯಕ್ಷ ಟ್ರಂಪ್ ಅನುಮಾನ ವ್ಯಕ್ತಪಡಿಸುತ್ತಿರುವ ಹೊರತಾಗಿಯೂ ಸಾಂಗೋಪಾಂಗವಾಗಿ ಅಧಿಕಾರ ಹಸ್ತಾಂತರ ಆಗಲಿದೆ ಎನ್ನುತ್ತಾರೆ ರಾಷ್ಟ್ರೀಯ ಭದ್ರತಾ ತಜ್ಞರು.

ಟ್ರಂಪ್ ನಿರ್ಗಮನದ ಕುರಿತು ಇಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಗಳಿವೆ ಮತ್ತು ಅವುಗಳು ಆಸಕ್ತಿಕರವಾಗಿವೆ.

* ಕಚೇರಿಯನ್ನು ಬಿಟ್ಟು ಹೊರಡುವುದಕ್ಕೆ ಟ್ರಂಪ್ ಗೆ ಗಡುವು ಇದೆಯಾ?

ಹೌದು. ಯುಎಸ್ ಅಧ್ಯಕ್ಷೀಯ ಚುನಾವಣೆ ಅಧಿಕೃತವಾಗಿ ಮುಕ್ತಾಯವಾಗಿಲ್ಲ. ಎಲೆಕ್ಟೋರ್ ಗಳು- ಪಕ್ಷದ ವಿಶ್ವಾಸಿಗಳು ತಮ್ಮ ರಾಜ್ಯಗಳಲ್ಲಿ ಯಾರು ಅತಿ ಹೆಚ್ಚು ಮತ ಪಡೆದಿರುತ್ತಾರೋ ಅವರಿಗೆ ತಮ್ಮ ಬೆಂಬಲವನ್ನು ನೀಡುತ್ತಾರೆ- ಡಿಸೆಂಬರ್ ಹದಿನಾಲ್ಕನೇ ತಾರೀಕು ಅಧಿಕೃತವಾಗಿ ಸಭೆ ಸೇರಿ, ಮತ ಹಾಕಲಾಗುತ್ತದೆ, ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಎಲೆಕ್ಟೋರಲ್ ಕಾಲೇಜಿನಿಂದ ಫಲಿತಾಂಶವನ್ನು ಜನವರಿ ಆರರಂದು ಪಡೆಯುತ್ತದೆ. ನಿರೀಕ್ಷೆ ಮಾಡಿದಂತೆ ಎಲೆಕ್ಟೋರಲ್ ಕಾಲೇಜು ಮತಗಳನ್ನು ಜೋ ಬೈಡೆನ್ ಪಡೆದರೆ ಜನವರಿ ಇಪ್ಪತ್ತನೇ ತಾರೀಕಿನ ಮಧ್ಯಾಹ್ನ ಅಧಿಕಾರ ಸ್ವೀಕಾರ ಮಾಡುತ್ತಾರೆ- ಇದು ಸಂವಿಧಾನದಲ್ಲಿ ನಿಗದಿ ಆಗಿರುವ ದಿನಾಂಕ ಆಗಿದೆ.

How Will Be The Exit Process Of Donald Trump From White House?

* ಟ್ರಂಪ್ ಆಕ್ಷೇಪದ ಹೊರತಾಗಿಯೂ ಬೈಡೆನ್ ಅಧಿಕಾರ ಪಡೆಯಬಹುದಾ?

ಹೌದು. ಬೈಡೆನ್ ಅಧಿಕಾರ ಸ್ವೀಕರಿಸುವುದನ್ನು ಅಥವಾ ಈ ಬದಲಾವಣೆಯನ್ನು ನಿಧಾನ ಮಾಡುವ ಅಧಿಕಾರ ಮಾತ್ರ ಟ್ರಂಪ್ ಗೆ ಇದೆ.

ಪ್ರೆಸಿಡೆನ್ಷಿಯಲ್ ಟ್ರಾನ್ಸಿಷನ್ ಆಕ್ಟ್ 1963 ಎಂಬ ಕಾನೂನು ಇದೆ. ಅದರಡಿಯಲ್ಲಿ ಸರ್ಕಾರಿ ಹುದ್ದೆಯಲ್ಲಿ ಇರುವವರು ಅಧಿಕಾರ ಹಸ್ತಾಂತರ ಮಾಡುವ ಪ್ರಕ್ರಿಯೆ ಬಹಳ ಮುಖ್ಯವಾದದ್ದು. ದತ್ತಾಂಶ ಮತ್ತು ಆಕ್ಸೆಸ್ ಗಳನ್ನು ಮುಂದಿನವರಿಗೆ ಹಸ್ತಾಂತರ ಮಾಡಿಕೊಡುವುದಕ್ಕೆ ಗಡುವು ನಿಗದಿ ಆಗಿರುತ್ತದೆ.

ಕಾನೂನು ಪ್ರಕಾರ, ಒಂದು ಸಲ ಯುಎಸ್ ಜನರಲ್ ಸರ್ವೀಸ್ ಅಡ್ಮಿನಿಸ್ಟ್ರೇಷನ್ ಕರೆ ನೀಡಿದ ಮೇಲೆ ಈ ಬದಲಾವಣೆ ಬಹಳ ವೇಗವಾಗಿ ಆಗುತ್ತದೆ. ಸರ್ಕಾರದ ಕಟ್ಟಡ ಮತ್ತಿತರ ಕಾರ್ಯ- ಕಲಾಪಗಳನ್ನು ನೋಡಿಕೊಳ್ಳುವುದೇ ಅದು. ಆ ಘಟ್ಟದಲ್ಲಿ ಮುಂಬರುವ ಅದ್ಯಕ್ಷರ ತಂಡವು ವಿವರಣೆ ಪುಸ್ತಕಗಳನ್ನು ಪಡೆಯಬಹುದು, ಅನುದಾನದ ನಿರ್ಧಾರ ತೆಗೆದುಕೊಳ್ಳಬಹುದು, ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಪ್ರತಿನಿಧಿಗಳನ್ನು ಕಳುಹಿಸಬಹುದು.

How Will Be The Exit Process Of Donald Trump From White House?

ಕಳೆದ ಭಾನುವಾರದಂದು ಜಿಎಸ್ ಎ ಆಡಳಿತಾಧಿಕಾರಿ ಎಮಿಲಿ ಮರ್ಫಿ ಅವರಿಗೆ ಪತ್ರ ಕಳುಹಿಸಿರುವ ತಜ್ಞರು, ಬೈಡೆನ್ ಅವರನ್ನು ವಿಜೇತ ಎಂದು ಪರಿಗಣಿಸಲು ತಿಳಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳು ಯುಎಸ್ ಸಂವಿಧಾನವನ್ನು ಎತ್ತಿಹಿಡಿಯುವ ಪ್ರಮಾಣ ಸ್ವೀಕರಿಸಬೇಕು. ಈ ಪ್ರಮಾಣ ಸ್ವೀಕಾರಕ್ಕಾಗಿ ಎಲೆಕ್ಟೋರಲ್ ಕಾಲೇಜಿನಿಂದ ಗೆದ್ದು, ಬೈಡೆನ್ ಅನ್ನು ಮುಂಬರುವ ಅಧ್ಯಕ್ಷ ಎಂದು ಗುರುತಿಸಬೇಕು. ಈ ವಿಷಯದಲ್ಲಿ ಟ್ರಂಪ್ ಏನು ಹೇಳುತ್ತಾರೆ ಎಂಬುದು ಮುಖ್ಯವಾಗುವುದಿಲ್ಲ ಎನ್ನುತ್ತಾರೆ ಟೆಕ್ಸಾಸ್ ಕಾನೂನು ವಿ.ವಿ. ಪ್ರೊಫೆಸರ್.

* ಒಂದು ವೇಳೆ ಹುದ್ದೆ ಬಿಡಲು ನಿರಾಕರಿಸಿದಲ್ಲಿ ಸೈನ್ಯವು ಟ್ರಂಪ್ ರನ್ನು ಹೊರ ಹಾಕಬಹುದಾ?

ಯುಎಸ್ ನ ಇಬ್ಬರು ನಿವೃತ್ತ ಸೈನ್ಯಾಧಿಕಾರಿಗಳು ಕಳೆದ ಆಗಸ್ಟ್ ನಲ್ಲೇ ಟ್ರಂಪ್ ರನ್ನು ಬಲವಂತವಾಗಿ ತೊಲಗಿಸುವ ಬಗ್ಗೆ 'ಬಹಿರಂಗ ಪತ್ರ'ವನ್ನು ಅತ್ಯುಚ್ಚ ಯುಎಸ್ ಜನರಲ್ ಮಾರ್ಕ್ ಮಿಲ್ಲಿ ಅವರಿಗೆ ಬರೆದಿದ್ದಾರೆ.

ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವಧಿ ಮುಗಿದ ಮೇಲೂ ಹುದ್ದೆಯನ್ನು ಬಿಟ್ಟು ಹೋಗಲು ನಿರಾಕರಿಸಿದಲ್ಲಿ ಯುನೈಟೆಡ್ ಸ್ಟೇಟ್ಸ್ ಸೈನ್ಯವು ಬಲವಂತವಾಗಿ ಟ್ರಂಪ್ ರನ್ನು ಹೊರಹಾಕಬೇಕು. ಮತ್ತು ನೀವು ಆ ಆದೇಶ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಪತ್ರವನ್ನು ಡಿಫೆನ್ಸ್ ಒನ್ ನಲ್ಲಿ ಪ್ರಕಟಿಸಲಾಗಿದೆ.

ಆದರೆ, ಇತರರು ಹೇಳುವಂತೆ ಇಂಥ ನಿರ್ಧಾರವನ್ನು ಯುಎಸ್ ಸೀಕ್ರೆಟ್ ಸರ್ವೀಸ್ ಗೆ ಬಿಡುವುದೇ ಉತ್ತಮ. ದೇಶೀಯ ಕಾನೂನು ಜಾರಿ ವಿಚಾರದಿಂದ ಸೈನ್ಯಾಧಿಕಾರಿಗಳು ದೂರ ಇರಬೇಕು ಎಂಬುದು ಈ ನಿಲವಿನ ಹಿಂದಿನ ಉದ್ದೇಶ. ನಮ್ಮ ಬಳಿ ಇದಕ್ಕೆ ಸಾಂವಿಧಾನಿಕ ಪ್ರಕ್ರಿಯೆ ಇದೆ. ಈ ಸೂತ್ರದಲ್ಲಿ ಸೈನ್ಯವೂ ಎಲ್ಲೂ ಇಲ್ಲ ಎನ್ನುತ್ತಾರೆ ವಿಶ್ಲೇಷಕರು.

ಒಂದು ವೇಳೆ ಜನವರಿ ಇಪ್ಪತ್ತನೇ ತಾರೀಕಿನಂದು ಶ್ವೇತ ಭವನ ಬಿಟ್ಟು ಹೊರಡಲು ಟ್ರಂಪ್ ನಿರಾಕರಿಸಿದಲ್ಲಿ ಅವರು "ಅನುಮತಿ ಇಲ್ಲದೆ ಪ್ರವೇಶಿಸಿದವ"ರಾಗುತ್ತಾರೆ. ಸೀಕ್ರೆಟ್ ಸರ್ವೀಸ್ ನವರು ಬಂದು, ಟ್ರಂಪ್ ರನ್ನು ಹೊರಹಾಕಬಹುದು ಎಂದು ಹೇಳುತ್ತಾರೆ ವಿಷಯ ಪರಿಣತರು.

English summary
Here is the details of exit process of US president Donald Trump. How will he exit from White House? Explainer in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X