ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ: ಅಮೆರಿಕದಲ್ಲಿ ಟ್ರಂಪ್‌ ವಿರುದ್ಧ ವಾಗ್ದಾಳಿ

ವಾಷಿಂಗ್ಟನ್, ಫೆಬ್ರವರಿ 25: ಭಾರತಕ್ಕೆ ಭೇಟಿ ನೀಡಿರುವ ಡೊನಾಲ್ಡ್ ಟ್ರಂಪ್‌ ಬಗ್ಗೆ ಅಮೆರಿಕದಲ್ಲಿ ಟೀಕೆಗಳು ಎದುರಾಗಿವೆ.

ಭಾರತಕ್ಕೆ ಭೇಟಿ ನೀಡಿರುವ ಟ್ರಂಪ್ ಭಾರತದೊಂದಿಗೆ ಕೆಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ ಭದ್ರತಾ ಒಪ್ಪಂದ ಪ್ರಮುಖವಾಗಿದ್ದು, ಯುದ್ಧ ಹೆಲಿಕಾಪ್ಟರ್ ಸೇರಿ ಕೆಲವು ಶಸ್ತ್ರಾಸ್ತ್ರಗಳ ಮಾರಾಟವನ್ನೂ ಸಹ ಭದ್ರತಾ ಒಪ್ಪಂದ ಒಳಗೊಂಡಿದೆ.

ಆದರೆ ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿರುವ ಬಗ್ಗೆ ಅಮೆರಿಕದಲ್ಲಿ ಹಿರಿಯ ರಾಜಕಾರಣಿಗಳು ಟ್ರಂಪ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

Help India To Cure Air Pollution Instead Of Selling Weapons: Bernie Sanders To Trump

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಉಮೇದುವಾರ ಸೆನೆಟರ್ ಬರ್ನಿ ಸ್ಯಾಂಡರ್ಸ್, ಟ್ರಂಪ್ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, 'ನವದೆಹಲಿಯ ವಾಯುಮಾಲಿನ್ಯ ಶಮನ ಮಾಡಲು ಅಮೆರಿಕ ಭಾರತಕ್ಕೆ ನೆರವು ನೀಡಬೇಕಿತ್ತು, ಆದರೆ ಟ್ರಂಪ್ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದಾರೆ' ಎಂದು ಹೇಳಿದ್ದಾರೆ.

ಟ್ರಂಪ್ ಭಾರತದ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಬರ್ನಿ ಸ್ಯಾಂಡರ್ಸ್, '22 ಸಾವಿರ ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ಮಾರುವ ಬದಲಿಗೆ, ಹವಾಮಾನ ವೈಪರಿತ್ಯದ ವಿರುದ್ಧ ಹೋರಾಡಲು ಭಾರತಕ್ಕೆ ಜೊತೆ ನೀಡಬೇಕಿತ್ತು' ಎಂದು ಅವರು ಹೇಳಿದ್ದಾರೆ.

Help India To Cure Air Pollution Instead Of Selling Weapons: Bernie Sanders To Trump

ಟ್ರಂಪ್ ಅವರು 22 ಸಾವಿರ ಕೋಟಿ ರೂಪಾಯಿ ಭದ್ರತಾ ಒಪ್ಪಂದವನ್ನು ಭಾರತದೊಂದಿಗೆ ಮಾಡಿಕೊಳ್ಳುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ನಿನ್ನೆಯ ತಮ್ಮ ಭಾಷಣದಲ್ಲಿ ಹೇಳಿದ್ದರು. ಅಂತೆಯೇ ಇಂದು ಹಲವು ಒಪ್ಪಂದಗಳಿಗೆ ಮೋದಿ ಮತ್ತು ಟ್ರಂಪ್ ಸಹಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+