ಟ್ಯಾಟೂವಿನಲ್ಲಿ ತಂದೆಯ ಧ್ವನಿ! ಅಗಲಿದ ಅಪ್ಪನ ನೆನಪಿಗೆ ಮಗಳ ಕಾಣಿಕೆ

ವಾಷಿಂಗ್ಟನ್, ಅಕ್ಟೋಬರ್ 12: ಅಗಲಿದ ತನ್ನಪ್ಪ ನೆನಪಿಗಾಗಿ ಪುತ್ರಿಯೊಬ್ಬಳು ಕೈಮೇಲೆ ಹಾಕಿಕೊಂಡಿರುವ ಟ್ಯಾಟೂ ಮಾತನಾಡುತ್ತದೆ! ಹೌದು ಆಕೆಯ ತಂದೆಯೇ ಆ ಟ್ಯಾಟೂವಿನ ಮೂಲಕ ಮಾತನಾಡುತ್ತಾರೆ!

2013 ರಲ್ಲಿ ಲಿವರ್ ಕ್ಯಾನ್ಸರ್ ಗೆ ತುತ್ತಾಗಿ ಮೈಕೆಲ್ ಗೊಟೋ ಎಂಬ ವ್ಯಕ್ತಿ ಮೃತರಾದರು. ತಂದೆಯನ್ನು ತೀರಾ ಹಚ್ಚಿಕೊಂಡಿದ್ದ ಅವರ ಮಗಳು ಯ್ವೆಟ್ಟೆ ಮೂರೆ, ಅಪ್ಪನ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದಳು. ಅಪ್ಪನ ನೆನಪನ್ನು ಜೀವಂತವಾಗಿರಿಸುವ ಪ್ರಯತ್ನವಾಗಿ ಆಕೆ ಜೀವಂತ ಟ್ಯಾಟೂ ಹಾಕಿಸಿಕೊಂಡಿದ್ದಾಳೆ!

Girl Inked A Tatoo Which Plays Her Fathers Voice

ಲಾಸ್ ಏಂಜಲೀಸ್ ಮೂಲದ ಟ್ಯಾಟೂ ಆರ್ಟಿಸ್ಟ್ ಒಬ್ಬರು ಈ ಟ್ಯಾಟೂ ನಿರ್ಮಿಸಿದ್ದು, ಇದು ಸೌಂಡ್ ವೇವ್ ಟ್ಯಾಟೂ ಎಂದು ಪ್ರಸಿದ್ಧಿ ಪಡೆದಿದೆ. ಸ್ಕಿನ್ ಮೋಶನ್ ಎಂಬ ಮೊಬೈಲ್ app ಅನ್ನು ಈ ಟ್ಯಾಟೂ ಮುಂದೆ ಹಿಡಿದು ಸ್ಕ್ಯಾನ್ ಮಾಡಿದರೆ ಮೈಕೆಲ್ ಅವರ ಧ್ವನಿ ಕೇಳುತ್ತದೆ.

"Hi babies, thank you - I feel better already. I love you. I'll see you when I get back to the house. Bye bye," ಎಂದು ಮೈಕೆಲ್ ಸಾಯುವ ಮುನ್ನ ಹೇಳಲಿದ್ದ ಮಾತುಗಳನ್ನು ಧ್ವನಿಮುದ್ರಿಸಲಾಗಿತ್ತು. ಟ್ಯಾಟೂವೂ ಇದೇ ಸಾಲನ್ನು ಉಸುರುತ್ತದೆ. ಈ ಮೂಲಕ ತನ್ನಪ್ಪನ ನೆನಪನ್ನು ಮಗಳು ಸದಾ ಜೀವಂತವಾಗಿರಿಸಿಕೊಂಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+