ಕೆಲಸದಿಂದ ತೆಗೆದಿದ್ದಕ್ಕೆ ಐವರು ಸಹೋದ್ಯೋಗಿಗಳನ್ನು ಕೊಂದ
ಶಿಕಾಗೊ, ಫೆಬ್ರವರಿ 16: ಕೆಲಸದಿಂದ ಕಿತ್ತೊಗೆದಿದ್ದಕ್ಕೆ ಸಿಟ್ಟಿಗೆದ್ದಿದ್ದ ನೌಕರನೊಬ್ಬ ಐವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದಿರುವ ಘಟನೆ ಅಮೆರಿಕದ ಶಿಕಾಗೊ ನಗರದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
45 ವರ್ಷದ ಗ್ಯಾರಿ ಮಾರ್ಟಿನ್ ಎಂಬಾತ 15 ವರ್ಷದ ಸಂಸ್ಥೆಯೊಂದರಲ್ಲಿ ನೌಕರನಾಗಿ ದುಡಿಯುತ್ತಿದ್ದ ಆತನನ್ನು ಅಚಾನಕ್ ಆಗಿ ಕೆಲಸದಿಂದ ತೆಗೆಯಲಾಗಿದೆ ಇದರಿಂದ ಸಿಟ್ಟಿಗೆದ್ದ ಆತ ಗುಂಡಿನ ಮಳೆ ಗರೆದಿದ್ದಾನೆ, ಈ ದಾಳಿಯಲ್ಲಿ ಐವರು ಸಾವನ್ನಪ್ಪಿತ್ತು, ಆರು ಮಂದಿ ಇತರ ನೌಕರರು, ಹಾಗೂ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.
ಚಿಕಾಗೋದಿಂದ 65 ಕಿ.ಮೀ.ದೂರದಲ್ಲಿರುವ ಇಲಿನೊಯ್ನಸ್‍ನ ಆರೊರಾ ಪಟ್ಟಣದ ಕಾರ್ಖಾನೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ನೌಕರಿ ಕಳೆದುಕೊಂಡ ಗ್ಯಾರಿ ಹತಾಶೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಗುಂಡಿನ ಸುರಿಮಳೆಗರೆದ ಗ್ಯಾರಿ ಮಾರ್ಟಿನ್‌ನನ್ನು ಪೊಲೀಸರು ಹತ್ಯೆಗೈದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೆರಿಕದಲ್ಲಿ ಶೂಟ್‌ಔಟ್ ಪ್ರಕರಣಗಳು ಸರ್ವೆ ಸಾಮಾನ್ಯ ಎಂಬಂತಾಗಿವೆ.












Click it and Unblock the Notifications