ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರರಾಕ್ಷಸ ಬಾಗ್ದಾದಿ ಕೊಂದ ನಾಯಿಯ ಗುಟ್ಟು ಬಿಚ್ಚಿಟ್ಟ ಟ್ರಂಪ್

|
Google Oneindia Kannada News

Recommended Video

ನಾಯಿಯನ್ನು ವೈಟ್ ಹೌಸ್ ಗೆ ಕರೆಸಿ ವಿಶೇಷ ಆತಿಥ್ಯ ನೀಡಿದ ಟ್ರಂಪ್ | Oneindia kannada

ವಾಷಿಂಗ್ಟನ್, ನವೆಂಬರ್ 26: ಜಾಗತಿಕ ಉಗ್ರ ಸಂಘಟನೆ ಐಎಸ್‌ಐಎಸ್ ಮುಖ್ಯಸ್ಥ ಅಬುಬಕರ್ ಬಾಗ್ದಾದಿಯನ್ನು ಅಟ್ಟಾಡಿಸಿಕೊಂಡು ಹೋಗಿ ಸಾವಿಗೆ ಕಾರಣವಾದ ಅಮೆರಿಕ ಸೇನೆಯ ನಾಯಿ 'ಕಾನನ್' ಅನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್‌ ಹೌಸ್‌ಗೆ ಸ್ವಾಗತಿಸಿ ಆತಿಥ್ಯ ನೀಡಿದ್ದಾರೆ.

ಬಾಗ್ದಾದಿ ಸಾವಿನ ಘೋಷಣೆ ಮಾಡಿದ ದಿನವೇ ಈ ವಿಶೇಷ ನಾಯಿಯನ್ನು ಕರೆಯಿಸಿ ಸನ್ಮಾನ ಮಾಡುವುದಾಗಿ ಟ್ರಂಪ್ ಘೋಷಿಸಿದ್ದರು.

ಅದರಂತೆಯೇ ಸೋಮವಾರ ಸಂಜೆ ವೈಟ್‌ಹೌಸ್‌ಗೆ ಕರೆಯಿಸಿ ವಿಶೇಷ ಆತಿಥ್ಯ ನೀಡಿದ್ದಾರೆ. ಇದಲ್ಲದೆ ಮಾಧ್ಯಮಗಳ ಎದುರು ಈ ನಾಯಿಯನ್ನು ಮತ್ತೆ ಹಾಡಿ ಹೊಗಳಿದ್ದಾರೆ.

Donald Trump

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್ ''ಇದೊಂದು ಅದ್ಭುತ ನಾಯಿ ಗಾಯದಿಂದ ವೇಗವಾಗಿ ಗುಣಮುಖವಾಗಿದೆ.ಜಗತ್ತಿನ ಅತಿ ಪ್ರಮುಖ ದಾಳಿಯಲ್ಲಿ ಭಾಗವಹಿಸಿ ಹಿಂದಿರುಗಿದೆ'' ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ದಾಳಿಯ ಒಂದು ಗುಟ್ಟನ್ನು ಬಿಟ್ಟುಕೊಟ್ಟಿರುವ ಟ್ರಂಪ್ ''ಬಾಗ್ದಾದಿಯನ್ನು ಅಟ್ಟಾಡಿಸಿಕೊಂಡು ಹೋಗುವಾಗ ಯಾವುದೇ ಕಾರಣಕ್ಕೂ ಬೊಗುಳಬಾರದು ಎಂದು ತರಬೇತಿ ನೀಡಲಾಗಿತ್ತು, ಒಂದೊಮ್ಮೆ ಕೂಗಿದರೆ ನಾಯಿ ಮೇಲೆ ಭರ್ಜರಿ ದಾಳಿಯಾಗುವ ಸಾಧ್ಯತೆ ಇತ್ತು. ಆದಾಗ್ಯೂ ದಾಳಿ ಸಂದರ್ಭದಲ್ಲಿ ಕಾನನ್ ನಾಯಿಗೆ ತೀವ್ರ ಗಾಯಗಳಾಗಿದ್ದವು, ನಾಯಿ ಈಗಷ್ಟೇ ಚೇತರಿಸಿಕೊಂಡಿದೆ'' ಎಂದರು.

ಬಗ್ದಾದಿಯನ್ನು ಕೊಂದ ನಾಯಿ 'ಅಮೆರಿಕನ್ ಹೀರೋ': ಪದಕ ತೊಡಿಸಿದರೇ ಟ್ರಂಪ್?ಬಗ್ದಾದಿಯನ್ನು ಕೊಂದ ನಾಯಿ 'ಅಮೆರಿಕನ್ ಹೀರೋ': ಪದಕ ತೊಡಿಸಿದರೇ ಟ್ರಂಪ್?

ಈಗಷ್ಟೇ ಸಿರಿಯಾ ಭಾಗದಿಂದ ಅಮೆರಿಕಕ್ಕೆ ವಾಪಸ್ ಆಗಿದ್ದು, ಈ ನಾಯಿಗೆ ವಿಶೇಷ ಪದಕ ನೀಡಿ ಟ್ರಂಪ್ ಗೌರವಿಸಿದ್ದಾರೆ.

ಐಎಸ್‌ಐಎಸ್ ಉಗ್ರ ಬಾಗ್ದಾದಿ ವಿರುದ್ಧದ ಅಮೆರಿಕ ಸೇನೆಯ ದಾಳಿಯಲ್ಲಿ ಈ ನಾಯಿ ವಿಶೇಷ ಪಾತ್ರವಹಿಸಿತ್ತು. ಸಾವಿರಾರು ಜನರನ್ನು ಬಲಿ ಪಡೆದಿದ್ದ ನರರಾಕ್ಷಸರನ್ನು ನಾಯಿ ಅಟ್ಟಾಡಿಸಿಕೊಂಡು ಹೋಗಿತ್ತು.

ನಾಯಿಯಿಂದ ತಪ್ಪಿಸಿಕೊಳ್ಳಲು ಆತ ಗುಹೆಯ ಒಳಗೆ ಓಡಿ ಹೋಗಿ ಅಂತಿಮವಾಗಿ ದಾರಿಯೇ ತೋಚದಿದ್ದಾಗ ಆತ್ಮಾಹುತಿ ದಾಳಿ ಮಾಡಿಕೊಂಡು ಸತ್ತಿದ್ದ. ಈ ಸಂದರ್ಭದಲ್ಲಿ ನಾಯಿಗೂ ತೀವ್ರ ಗಾಯಗಳಾಗಿದ್ದವು.

English summary
American Army Special Dog Conon Honoured by President Donald Trump at White House with aspecial Medal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X