ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಟ್ರಂಪ್ ಬರ್ತಾ ಇಲ್ಲ
ವಾಷಿಂಗ್ಟನ್, ಅಕ್ಟೋಬರ್ 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2019ರ ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಸುದ್ದಿ ಬಂದಿದೆ.
ಭಾರತ ಸರ್ಕಾರ ನೀಡಿರುವ ಆಹ್ವಾನವನ್ನು ಟ್ರಂಪ್ ಸರ್ಕಾರ ನಿರಾಕರಿಸಿದ್ದಾರೆ. ಯುಎಸ್ಎ ಅಧಿಕಾರಿಗಳು, ಅಜಿತ್ ದೋವಲ್ ಗೆ ನೀಡಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ. ಪತ್ರದಲ್ಲಿ ಟ್ರಂಪ್ ಪರ ಅಧಿಕಾರಿಗಳು ಕ್ಷಮೆ ಕೋರಿದ್ದಾರೆ.
"ಭಾರತದೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಅಮೆರಿಕ ಬದ್ಧವಾಗಿದೆ" ಎಂದು ಕಳೆದ ಫೆಬ್ರವರಿಯಲ್ಲಿ, ಡೊನಾಲ್ಡ್ ಟ್ರಂಪ್ ಸರ್ಕಾರ ಹೇಳಿತ್ತು.

ಏನು ಕಾರಣ: ಜನವರಿ 26ರ ಸುಮಾರಿಗೆ ಸ್ಟೇಟ್ ಆಫ್ ದಿ ಯುನಿಯನ್ ಅಡ್ರೆಸ್ (ರಾಷ್ಟ್ರದ ಹೆಸರಿನಲ್ಲಿ ಭಾಷಣ) ಕಾರ್ಯಕ್ರಮವಿದೆ. ರಷ್ಯಾದ ಜತೆ ಒಪ್ಪಂದ, ಮಧ್ಯಪ್ರಾಚ್ಯದ ತೈಲ ಗೊಂದಲ ಇನ್ನು ಮುಗಿದಿಲ್ಲ ಹೀಗಾಗಿ, ಭಾರತ ಸರ್ಕಾರದ ಆಹ್ವಾನವನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ರಂಪ್ ಸರ್ಕಾರ ಹೇಳಿದೆ.
ಆದರೆ, ಈ ಹಿಂದೆ ಬರಾಕ್ ಒಮಾಬಾ ಅವರು 2015 ರಲ್ಲಿ ಭಾರತದ ಆಹ್ವಾನ ಸ್ವೀಕರಿಸಿ ಭಾರತಕ್ಕೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಟ್ರಂಪ್ ಅವರಿಗೆ ಫೆಬ್ರವರಿ ತಿಂಗಳಿನಲ್ಲಿ ಭಾರತ ಪ್ರವಾಸ ಕೈಗೊಳ್ಳುವಂತೆ ಕೋರಿ, ಭಾರತದ ಅಧಿಕಾರಿಗಳು ಮತ್ತೊಮ್ಮೆ ಆಹ್ವಾನ ಕಳಿಸಲು ಮುಂದಾಗಿದ್ದಾರೆ.












Click it and Unblock the Notifications