ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕೇ?: ಹೊಸ ಲೆಕ್ಕಾಚಾರ ಮುಂದಿಟ್ಟ ಟ್ರಂಪ್

ವಾಷಿಂಗ್ಟನ್, ನವೆಂಬರ್ 25: ಕೆಲವು ದಿನಗಳ ಹಿಂದಷ್ಟೇ ಜೋ ಬೈಡನ್ ಎದುರು ಸೋಲೊಪ್ಪಿಕೊಂಡು ಸುಗಮ ಅಧಿಕಾರ ಹಸ್ತಾಂತರದ ಸೂಚನೆ ನೀಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊಸ ವರಸೆ ಶುರುಮಾಡಿದ್ದಾರೆ. ತಾವು ಡೆಮಾಕ್ರಟಿಕ್ ಪಕ್ಷದ ಎದುರು ಸೋಲು ಒಪ್ಪಿಕೊಳ್ಳಬೇಕೇ ಎಂಬ 'ಸಮೀಕ್ಷೆ ಫಲಿತಾಂಶ'ವನ್ನು ಟ್ವಿಟ್ಟರ್‌ನಲ್ಲಿ ಮುಂದಿಟ್ಟಿದ್ದಾರೆ.

ಟ್ರಂಪ್ ಹಂಚಿಕೊಂಡಿರುವ ಈ ಸಮೀಕ್ಷೆ ಫಲಿತಾಂಶದ ಪ್ರಕಾರ ಶೇ 98.9ರಷ್ಟು ಮಂದಿ ಟ್ರಂಪ್ ಅವರ ಪರವಾಗಿದ್ದಾರೆ. ಅಂದರೆ ಅವರು ಸೋಲೊಪ್ಪಿಕೊಳ್ಳುವುದು ಬೇಡ ಎಂಬ ಅಭಿಪ್ರಾಯ ನೀಡಿದ್ದಾರಂತೆ. ಇನ್ನು ಕೇವಲ ಶೇ 1.1 ಮಂದಿ ಜೋ ಬೈಡನ್ ಪರವಾಗಿದ್ದಾರೆ.

'ಅಧ್ಯಕ್ಷ ಟ್ರಂಪ್ ಅವರ ಬೈಡನ್‌ಗೆ ಸೋಲೊಪ್ಪಿಕೊಳ್ಳಬೇಕೇ? ಸಮೀಕ್ಷೆ ಫಲಿತಾಂಶ: ಇಲ್ಲ: 1,90,593 (98.9%), ಹೌದು: 2,181 (1.1%). ಒಟ್ಟು ಮತಗಳು: 1,92,774. ನಮ್ಮ ದೇಶದ ಒಳಿತಿಗಾಗಿ ನಾವು ಗೆಲ್ಲಲೇಬೇಕು ' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

Donald Trump Shows Poll Results As People Not In Favour Of Conceding Defeat To Biden

ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲು ಅನುಭವಿಸಿದ್ದರೂ ಇದುವರೆಗೂ ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಹಾಗೆಯೇ ಬೈಡನ್ ಅವರಿಗೆ ಸಾಂಪ್ರದಾಯಿಕವಾಗಿ ಅಧಿಕಾರ ಬಿಟ್ಟುಕೊಡುವ ಪ್ರಕ್ರಿಯೆಯನ್ನೂ ನಿರಾಕರಿಸಿದ್ದಾರೆ. ಈ ನಡುವೆ ಬೈಡನ್ ತಮ್ಮ ಆಡಳಿತ ತಂಡವನ್ನು ಘೋಷಿಸುವುದನ್ನು ಆರಂಭಿಸಿದ್ದಾರೆ. ಪ್ರಮುಖ ಹುದ್ದೆಗಳಿಗೆ ಈಗಾಗಲೇ ನೇಮಕಗಳು ನಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+