US Election ಯಾವಾಗ ಫಲಿತಾಂಶ?, ರಿಸಲ್ಟ್ ವಿಳಂಬದ ಬಗ್ಗೆ ಟ್ರಂಪ್ ಗರಂ
ವಾಷಿಂಗ್ಟನ್, ನ. 5: ''ಪೆನ್ಸಿಲ್ವೇನಿಯಾ ಪ್ರಾಂತ್ಯದಲ್ಲಿ ಸುಮಾರು 5 ಲಕ್ಷ ಮತಗಳು ಮಾಯವಾಗಿದೆ. ಈ ಮೂಲಕ ಜೋ ಬೈಡನ್ ಜಯ ಗಳಿಸಲು ಸಂಚು ರೂಪಿಸಲಾಗಿದೆ. ಇದೇ ರೀತಿ ಮಿಚಿಗನ್ ಹಾಗೂ ಉಳಿದ ರಾಜ್ಯಗಳಲ್ಲೂಇದೇ ತಂತ್ರ ರೂಪಿಸಲಾಗಿದೆ'' ಎಂದು ಆರೋಪಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಇದಲ್ಲದೆ ವಿಸ್ಕೋಸಿನ್ ನಲ್ಲಿ 10 ಎಲೆಕ್ಟೋರಲ್ ಮತಗಳ ಮರು ಎಣಿಕೆಗಾಗಿ ಮನವಿ ಸಲ್ಲಿಸುವುದಾಗಿ ಟ್ರಂಪ್ ಪರ ಪ್ರಚಾರಕರು ಹೇಳಿದ್ದಾರೆ. ಲಕ್ಷಾಂತರ ಅಂಚೆ ಮತಗಳ ಎಣಿಕೆ ವಿಳಂಬ ಮಾಡಲಾಗಿದೆ. ಜೊತೆಗೆ ಮತಗಳು ಕಣ್ಮರೆಯಾಗುತ್ತಿವೆ. ಇದೆಲ್ಲವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಿದೆ ಎಂದು ಟ್ರಂಪ್ ಪರ ಪ್ರಚಾರಕರು ಹೇಳಿದ್ದಾರೆ. ರಿಪಬ್ಲಿಕನ್ ಪ್ರಾಬಲ್ಯವಿರುವ ರಾಜ್ಯಗಳಲ್ಲೇ ಮತ ಎಣಿಕೆ ವಿಳಂಬ ತಂತ್ರ ಅನುಸರಿಸಿದ್ದಾರೆ ಎಂದು ಜೋ ಬೈಡನ್ ವಿರುದ್ಧ ಆರೋಪಿಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರೀಸ್ ಅವರು ಕೊನೆಯ ಮತ ಎಣಿಕೆ ತನಕ ಫಲಿತಾಂಶ ಘೋಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
They are working hard to make up 500,000 vote advantage in Pennsylvania disappear — ASAP. Likewise, Michigan and others!
— Donald J. Trump (@realDonaldTrump) November 4, 2020
ವಿಸ್ಕೋಸಿನ್, ನೆವಡಾ, ಅರಿಜೋನಾ, ಮಿಚಿಗನ್, ಪೆನ್ಸೆಲ್ವೇನಿಯಾ, ಜಾರ್ಜಿಯಾ ಹಾಗೂ ನಾರ್ಥ್ ಕರೋಲಿನಾ ರಾಜ್ಯಗಳ ಫಲಿತಾಂಶ ಅಂತಿಮ ಫಲಿತಾಂಶ ನೀಡಬಲ್ಲದು.

ಅಮೆರಿಕ ಅಧ್ಯಕ್ಷರಾಗಲು ಎಲೆಕ್ಟೊರಲ್ ಕಾಲೇಜ್‌ನ 538 ಮತಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯು 270 ಮತಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಇದರಲ್ಲಿ ಇಬ್ಬರೂ ನಾಯಕರ ನಡುವೆ ನಿಕಟ ಪೈಪೋಟಿ ನಡೆಯುತ್ತಿದ್ದು, ಗೆಲುವು ಯಾರಿಗೆ ಒಲಿಯುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.
ಅರಿಜೋನಾ, ಮಿನ್ನೆಸೊಟಾ ಮುಂತಾದ ಪ್ರಮುಖ ಎಲೆಕ್ಟೊರಲ್ ಮತಗಳ ರಾಜ್ಯಗಳಲ್ಲಿ ಜೋ ಬೈಡೆನ್ ಜಯಗಳಿಸಿದ್ದಾರೆ. ಫ್ಲೋರಿಡಾ, ಲೋವಾ, ಓಹಿಯೊ, ಟೆಕ್ಸಾಸ್‌ನಲ್ಲಿ ಜಯಗಳಿಸಿರುವ ಡೊನಾಲ್ಡ್ ಟ್ರಂಪ್, ಎಲೆಕ್ಟೊರಲ್ ಮತಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಬುಧವಾರ ನವೆಂಬರ್ 4 11:55 PM IST ವೇಳೆಗೆ ಬೈಡನ್ ಪರ ಎಲೆಕ್ಟೊರಲ್ ಮತಗಳು 238ಕ್ಕೆ ಏರಿಕೆಯಾಗಿವೆ. ಟ್ರಂಪ್ 213 ಮತಗಳನ್ನು ಪಡೆದಿದ್ದಾರೆ.
ಎಲೆಕ್ಟೊರಲ್ ಮತದಾನದಲ್ಲಿ ಜೋ ಬೈಡೆನ್ ಶೇ 49.8ರಷ್ಟು ಮತಗಳನ್ನು ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ ಶೇ 48.6 ಮತಗಳನ್ನು ಪಡೆದಿದ್ದರು.
ಯಾವಾಗ ಫಲಿತಾಂಶ ನಿರೀಕ್ಷಿಸಬಹುದು
ಬುಧವಾರ (ನವೆಂಬರ್ 4)
ವಿಸ್ಕೋಸಿನ್, ಮಿಚಿಗನ್, ಜಾರ್ಜಿಯಾ ಹಾಗೂ ಅರಿಜೋನಾ
ಶುಕ್ರವಾರ (ನವೆಂಬರ್ 6)
ಪೆನ್ಸೆಲ್ವೇನಿಯಾ
ಮಂಗಳವಾರ (ನವೆಂಬರ್ 10)
ನೆವಾಡಾ, ಅಲಾಸ್ಕಾ (ಅಂಚೆ ಮತಗಳ ಎಣಿಕೆ)
ಗುರುವಾರ (ನವೆಂಬರ್ 12)
ನಾರ್ಥ್ ಕರೋಲಿನಾ (ಅಂಚೆ ಮತಗಳ ಎಣಿಕೆ)












Click it and Unblock the Notifications