ಕೊರೊನಾ ನಿಯಂತ್ರಣ: ಧಾರಾವಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಭಾರಿ ಮೆಚ್ಚುಗೆ

ಮುಂಬೈ, ಜುಲೈ 11: ಕೊರೊನಾವೈರಸ್ ಹಾಟ್‌ಸ್ಪಾಟ್‌ ಎನಿಸಿರುವ ಧಾರಾವಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಧಾರಾವಿಯಲ್ಲಿ ಕಿರಿದಾದ ಪ್ರದೇಶ, ಒಂದೇ ಕಡೆ ಸಾವಿರಾರು ಜನರ ವಾಸ, ಸಮೂಹ ಶೌಚಾಲಯ ಇದರಿಂದಾಗಿ ವೈರಸ್ ಹೆಚ್ಚಾಗುವ ಭೀತಿ ಇತ್ತು ಆದರೆ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಧಾರಾವಿ ಇಡೀ ವಿಶ್ವಕ್ಕೆ ಮಾದರಿ ಎಂದು ಶ್ಲಾಘಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಮಾತನಾಡಿ, ಇಟಲಿ, ಸ್ಪೇನ್, ದಕ್ಷಿಣ ಕೊರಿಯಾದಲ್ಲಿ ಕೂಡ ಸ್ಲಂಗಳಿವೆ, ಅಲ್ಲಿ ಕೊರೊನಾ ಸೋಂಕು ಎತೇಚ್ಛವಾಗಿ ಹರಡಿದೆ. ಆದರೆ ಧಾರಾವಿಯಲ್ಲಿ ಸೋಂಕನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Tedros

ವಿಶ್ವದ ಎಲ್ಲೆಡೆ ಸೋಂಕು ಹರಡುತ್ತಿದೆ ಆದರೆ ಅದನ್ನು ನಿಯಂತ್ರಣಕ್ಕೆ ತರುವುದು ಸವಾಲಿನ ಕೆಲಸವಾಗಿದೆ. ಮುಂಬೈನಲ್ಲಿ ಜನಸಂಖ್ಯೆಯೂ ಕೂಡ ಹೆಚ್ಚಿದೆ. ಅಲ್ಲಿ ಸಮುದಾಯ ಸೋಂಕು ಹರಡುವ ಸಾಧ್ಯತೆಯೂ ಇದೆ. ಟೆಸ್ಟಿಂಗ್, ಟ್ರೇಸಿಂಗ್, ಐಸೋಲೇಷನ್, ಚಿಕಿತ್ಸೆ ಕೂಡ ಮುಖ್ಯವಾಗಿರುತ್ತದೆ.

ಕೊರೊನಾವೈರಸ್ ವಿಶ್ವದಾದ್ಯಂತ 555,000 ಮಂದಿ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ ಕಳೆದ ಡಿಸೆಂಬರ್‌ನಿಂದಲೇ ಸೋಂಕು ಹರಡಲು ಆರಂಭವಾಗಿದೆ. 196 ದೇಶಗಳಿಂದ 12.3 ಮಿಲಿಯನ್ ಮಂದಿ ಸೋಂಕಿಗೆ ಗುರಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 2 ಲಕ್ಷದ 31 ಸಾವಿರ ಕೊರೊನಾ ಸೋಂಕಿತರಿದ್ದಾರೆ. 1 ಲಕ್ಷದ 27 ಸಾವಿರ ಮಂದಿ ಗುಣಮುಖರಾಗಿದ್ದಾರೆ. 9,667 ಮಂದಿ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+