ಅಮೆರಿಕದಲ್ಲಿ ಕೊರೊನಾ ಲಸಿಕೆ ಕಡ್ಡಾಯವಲ್ಲ: ಆರೋಗ್ಯ ತಜ್ಞರು ಹೇಳುವುದೇನು?

ವಾಷಿಂಗ್ಟನ್, ಆಗಸ್ಟ್ 20: ಮುಂಬರುವ ದಿನಗಳಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿಯಾಗಲಿದ್ದು, ಅವುಗಳನ್ನು ಮಕ್ಕಳು, ವೃದ್ಧರು ಅಂತಹ ಕೆಲವು ಗುಂಪುಗಳಿಗೆ ಮೀಸಲಿಡಿ, ಎಲ್ಲರೂ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅಮರಿಕ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Recommended Video

      ಮತ್ತೆ ಸ್ವಚ್ಛ ನಗರ ಗೌರವ ಮುಡಿಗೆರಿಸಿಕೊಂಡ ಮೈಸೂರು! | Oneindia Kannada

      ಆಂಥೊನಿ ಫಾಸಿ ಮಾತನಾಡಿ, ಯಾವುದೇ ಕಾರಣಕ್ಕೂ ಲಸಿಕೆಯನ್ನು ಪಡೆಯಲೇಬೇಕು ಎಂದು ಯಾರನ್ನೂ ಒತ್ತಾಯ ಮಾಡುವಂತಿಲ್ಲ, ಅವರಿಗೆ ತೆಗೆದುಕೊಳ್ಳಬೇಕೆನಿಸಿದರೆ ತೆಗೆದುಕೊಳ್ಳಬಹುದು, ಕಡ್ಡಾಯವಿಲ್ಲ ಎಂದರು.

      ಆರೋಗ್ಯ ಕಾರ್ಯಕರ್ತರು, ಮಕ್ಕಳು ಸೇರಿದಂತೆ ಕೆಲವೇ ಕೆಲವು ಗುಂಪುಗಳಿಗೆ ಕಡ್ಡಾಯವಾಗಿ ನೀಡಬೇಕು. ಆರೋಗ್ಯ ಕಾರ್ಯಕರ್ತರು ಈ ಲಸಿಕೆ ಪಡೆದುಕೊಳ್ಳದೆ ರೋಗಿಗಳ ಸೇವೆ ಮಾಡಲು ಸಾಧ್ಯವಿಲ್ಲ.

      Coronavirus Vaccine Wont Be Mandatory In US

      ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮಾತನಾಡಿ, ಕೊರೊನಾ ಲಸಿಕೆಗೆ ಒಮ್ಮೆ ಸಮ್ಮತಿ ಸಿಕ್ಕರೆ, ದೇಶದ ಜನತೆ ಕಡ್ಡಾಯವಾಗಿ ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ಘೋಷಿಸಿದ್ದಾರೆ. ಈ ರೀತಿ ಯಾರ ಮೇಲೂ ಒತ್ತಾಯ ಹೇರಬಾರದು ಎಂದು ಫಾಸಿ ಹೇಳಿದರು.

      ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರು ಕಂಪನಿಗಳಿಗೆ ಮುಂಚಿತವಾಗಿಯೇ ಕೊರೊನಾ ಲಸಿಕೆಯ ಬೇಡಿಕೆಯನ್ನಿಟ್ಟಿದೆ. ಒಟ್ಟು 100 ಮಿಲಿಯನ್ ಲಸಿಕೆಗಳಿಗೆ ಬೇಡಿಕೆ ಇಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+