Johnson And Johnson: 60 ಸಾವಿರ ಜನರ ಮೇಲೆ ಕೊರೊನಾ ಲಸಿಕೆ ಪ್ರಯೋಗ

ವಾಷಿಂಗ್ಟನ್, ಆಗಸ್ಟ್ 21: ಕೊರೊನಾ ವೈರಸ್ ವಿರುದ್ಧ ಜಾನ್ಸನ್ ಆಂಡ್ ಜಾನ್ಸನ್ ಅಭಿವೃದ್ಧಿಪಡಿಸಿರುವ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ. ಸುಮಾರು 60 ಸಾವಿರ ಸ್ವಯಂ ಸೇವಕರು ಈ ಪ್ರಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ.

Recommended Video

      ಹಬ್ಬದಂದು ಕಾವೇರಿಗೆ CM ಭಾಗಿಣ ಅರ್ಪಣೆ | Oneindia Kannada

      ಕೊಕೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯುವ ರೇಸ್ ನಲ್ಲಿ ಅಮೆರಿಕ ಮೂಲದ ಜಾನ್ಸನ್ ‌ಅಂಡ್ ಜಾನ್ಸನ್‌ ಸಂಸ್ಥೆ ಕೂಡ ಮುಂಚೂಣಿಯಲ್ಲಿದ್ದು, ಈ ಸಂಸ್ಥೆ ಇದೀಗ ಜಗತ್ತಿನ ಅತೀ ದೊಡ್ಡ ಪ್ರಮಾಣದ ಲಸಿಕೆ ಪ್ರಯೋಗ ನಡೆಸುತ್ತಿದೆ.

      ಕೊರೊನಾ ವೈರಸ್ ವಿರುದ್ಧ ಜಾನ್ಸನ್ ‌ಆಂಡ್ ಜಾನ್ಸನ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆದಿದ್ದು, ಈ ಪ್ರಯೋಗದಲ್ಲಿ ಜಗತ್ತಿನಲ್ಲೇ ಅತೀ ದೊಡ್ಡ ಪ್ರಮಾಣದ ಅಂದರೆ ಸುಮಾರು 60,000 ಸ್ವಯಂಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ.

      ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಯೋಗ ಆರಂಭ

      ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಯೋಗ ಆರಂಭ

      ಈ ಬಗ್ಗೆ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದ್ದು, ಮುಂಬರುವ ಸೆಪ್ಟೆಂಬರ್‌ನಲ್ಲಿ ಪ್ರಯೋಗ ಆರಂಭಗೊಳ್ಳುವ ನಿರೀಕ್ಷೆ ಇದೆ. ಅಮೆರಿಕ, ಬ್ರೆಜಿಲ್, ಮೆಕ್ಸಿಕೊ ಸೇರಿದಂತೆ 180 ಕಡೆಗಳಲ್ಲಿ ಪ್ರಯೋಗ ನಡೆಯಲಿದೆ ಎಂದು ವರದಿ ಉಲ್ಲೇಖಿಸಿದೆ.

      ಮೊದಲೆರೆಡು ಪ್ರಯೋಗ ಬಹುತೇಕ ಯಶಸ್ವಿ

      ಮೊದಲೆರೆಡು ಪ್ರಯೋಗ ಬಹುತೇಕ ಯಶಸ್ವಿ

      ಈ ಬಗ್ಗೆ ಮಾಹಿತಿ ನೀಡಿರುವ ಜಾನ್ಸನ್ ‌ಆಂಡ್ ಜಾನ್ಸನ್‌ ವಕ್ತಾರರು, ಲಸಿಕೆಯ ಮೊದಲೆರಡು ಪ್ರಯೋಗಳು ಬಹುತೇಕ ಯಶಸ್ವಿಯಾಗಿದ್ದು, ಇದೇ ಕಾರಣಕ್ಕೆ ಮೂರನೇ ಹಂತದ ಪ್ರಯೋಗ ಆದಷ್ಟು ದೃಢವಾಗಿರಬೇಕು ಎಂದು ಉದ್ದೇಶಿಸಲಾಗಿದೆ.

      60 ಸಾವಿರ ಮಂದಿ ಮೇಲೆ ಪ್ರಯೋಗ

      60 ಸಾವಿರ ಮಂದಿ ಮೇಲೆ ಪ್ರಯೋಗ

      ಇದರಲ್ಲಿ ಸುಮಾರು 60,000 ಸ್ವಯಂಸೇವಕರು ಭಾಗಿಯಾಗಲಿದ್ದು, ಹೆಚ್ಚಿನ ಪ್ರಕರಣ ಹೊಂದಿರುವ ಕಡೆಗಳಲ್ಲೇ ನಡೆಸಲಾಗುವುದು. ಮೂರನೇ ಹಂತದ ಪ್ರಯೋಗಕ್ಕೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

      ವರ್ಲ್ಡೋಮೀಟರ್ ಅಂಕಿ ಅಂಶ

      ವರ್ಲ್ಡೋಮೀಟರ್ ಅಂಕಿ ಅಂಶ

      ವರ್ಲ್ಡೋ ಮೀಟರ್ ಅಂಕಿ ಅಂಶದ ಪ್ರಕಾರ, ಆಗಸ್ಟ್ 21ರ ಬೆಳಗ್ಗೆ ವೇಳೆಗೆ ಜಾಗತಿಕವಾಗಿ 2,28,58,540 ಕೊವಿಡ್ ಪ್ರಕರಣಗಳು ದೃಢಪಟ್ಟಿವೆ. 7,97,092 ಮಂದಿ ಸಾವನ್ನಪ್ಪಿದ್ದಾರೆ. 1,545,13,944 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

      ಅಮೆರಿಕ 57,46,272 ಸೋಂಕಿತರೊಂದಿಗೆ ಕೊವಿಡ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಈವರೆಗೆ ಅಮೆರಿಕದಲ್ಲಿ 1,77,424 ಮಂದಿ ಕೊವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 30,95,484 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+