ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ ಅಮೆರಿಕಾಕ್ಕೆ ಕಾದಿದೆ ಬಹುದೊಡ್ಡ ಗಂಡಾಂತರ: ಎಫ್‌ಬಿಐ

|
Google Oneindia Kannada News

ವಾಷಿಂಗ್ಟನ್, ಜುಲೈ 8: ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಮುಖ್ಯಸ್ಥ ಕ್ರಿಸ್ಟೋಫರ್ ವ್ರೇ ಅವರು ಚೀನಾದ ಗೂಢಚರ್ಯೆ ಮತ್ತು ಕಳ್ಳತನದ ಕೃತ್ಯಗಳು ಅಮೆರಿಕಾದ ಭವಿಷ್ಯಕ್ಕೆ "ಅತಿದೊಡ್ಡ ದೀರ್ಘಕಾಲೀನ ಬೆದರಿಕೆಯನ್ನುಂಟು ಮಾಡುತ್ತವೆ'' ಎಂದು ಎಚ್ಚರಿಸಿದ್ದಾರೆ.

ವಾಷಿಂಗ್ಟನ್‌ನ ಹಡ್ಸನ್ ಇನ್‌ಸ್ಟಿಟ್ಯೂಟ್ ಥಿಂಕ್ ಟ್ಯಾಂಕ್‌ನಲ್ಲಿ ಮಾತನಾಡಿದ ವ್ರೇ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ(ಚೀನಾ) ಸರ್ಕಾರವು ವಿದೇಶದಲ್ಲಿ ವಾಸಿಸುತ್ತಿರುವ ತನ್ನದೇ ಆದ ಪ್ರಜೆಗಳ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವ ಅಭಿಯಾನದ ಕುರಿತು ಎಚ್ಚರಿಸಿದ್ದಾರೆ.

ಚೀನಾದೊಂದಿಗೆ ಸಂಘರ್ಷ ಏರ್ಪಟ್ಟರೆ, ಭಾರತದ ಪರ ಅಮೆರಿಕಾ ಸೇನೆ ಇರಲಿದೆ: ವೈಟ್ ಹೌಸ್ಚೀನಾದೊಂದಿಗೆ ಸಂಘರ್ಷ ಏರ್ಪಟ್ಟರೆ, ಭಾರತದ ಪರ ಅಮೆರಿಕಾ ಸೇನೆ ಇರಲಿದೆ: ವೈಟ್ ಹೌಸ್

ಅಮೆರಿಕಾದ ಈ ಮಾತುಗಳು ಉಭಯ ದೇಶಗಳ(ಯುಎಸ್-ಚೀನಾ) ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಕೋವಿಡ್ -19 ರ ಹರಡುವಿಕೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳ ಬಗ್ಗೆ ಈಗಾಗಲೇ ಈ ರಾಷ್ಟ್ರಗಳ ನಡುವೆ ಹೆಚ್ಚಿನ ಕಿತ್ತಾಟವಿದೆ.

ಕಳೆದ ಸೋಮವಾರವಷ್ಟೇ, ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ಚೀನಾದ ಮೊಬೈಲ್ ಫೋನ್ ಅಪ್ಲಿಕೇಶನ್‌ಗಳಾದ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್ - ವಿಡಿಯೋ ಹಂಚಿಕೆ ವೇದಿಕೆಯಂತಹ ಆ್ಯಪ್‌ಗಳನ್ನು ನಿಷೇಧಿಸುವ ಸುಳಿವು ನೀಡಿದರು. ಆದರೆ ಭಾರತವು ಈ ನಿರ್ಧಾರವನ್ನು ಕಳೆದ ತಿಂಗಳೇ ತೆಗೆದುಕೊಂಡು 59 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹಿಂದೆ ಸರಿದ ಅಮೆರಿಕವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹಿಂದೆ ಸರಿದ ಅಮೆರಿಕ

ಚೀನಾದೊಂದಿಗೆ ತಮ್ಮ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಉದ್ವಿಗ್ನತೆ ಮತ್ತು 45 ವರ್ಷಗಳಲ್ಲಿ ಭೀಕರ ಮಿಲಿಟರಿ ಘರ್ಷಣೆಯ ಮಧ್ಯೆ ಭಾರತದ ಈ ದಿಢೀರ್ ಕ್ರಮವನ್ನು ಕೈಗೊಂಡಿತು. ಇದೀಗ ಅಮೆರಿಕಾ ಕೂಡ ಭಾರತದ ಹಾದಿ ಹಿಡಿಯುವ ಸಾಧ್ಯತೆ ಇದೆ.

ಸಿದ್ಧವಾಗಿವೆ ಅಮೆರಿಕಾದ ಯುದ್ಧ ವಿಮಾನಗಳು

ಸಿದ್ಧವಾಗಿವೆ ಅಮೆರಿಕಾದ ಯುದ್ಧ ವಿಮಾನಗಳು

ಚೀನಾ ರಾಷ್ಟ್ರವು ಈಗಾಗಲೇ ಆಗ್ನೇಯ ಏಷ್ಯಾದ ನೆರೆಹೊರೆಯ ಸಣ್ಣ ರಾಷ್ಟ್ರಗಳೊಂದಿಗೆ ಕಾಲ್ಕೆರೆಡು ಜಗಳಕ್ಕೆ ಹೋಗುತ್ತಿದೆ. ವಿಯೆಟ್ನಾಂ, ಮಲೇಷ್ಯಾ ಮತ್ತು ಇಂಡೋನೇಷ್ಯಾದ ನಡುವಿನ ಕಿತ್ತಾಟದ ಮೇಲೆ ಸುತ್ತಲಿನ ರಾಷ್ಟ್ರಗಳ ನಡುವಿನ ಸಂಬಂಧವು ಹಳಸಿದೆ. ಇದರ ಜೊತೆಗೆ ಭಾರೀ ಬೆಳವಣಿಗೆಯಂತೆ ಚೀನಾ ಮೇಲೆ ಎಗರಿ ಬೀಳಲು ರೆಡಿಯಾಗಿವೆ ಅಮೆರಿಕಾದ ಯುದ್ಧ ವಿಮಾನಗಳು.

ಹೌದು ಅಮೆರಿಕಾ ಈಗಾಗಲೇ ತನ್ನ ಎರಡು ವಿಮಾನವಾಹಕ ನೌಕೆಗಳನ್ನು ದಕ್ಷಿಣ ಚೀನಾ ಸಮುದ್ರದಲ್ಲಿರಿಸಿದೆ. ಚೀನಾ ಮೇಲೆ ಹೆಸರಿಸಿದ ಯಾವುದೇ ರಾಷ್ಟ್ರಗಳು ಮೇಲೆ ದಾಳಿ ನಡೆಸಿದರೆ ಅಮೆರಿಕಾ ಸೇನೆ ನೆರವಿಗೆ ಹೋಗಲಿದೆ.

ಅನೇಕ ರಾಷ್ಟ್ರಗಳೊಂದಿಗೆ ಸಂಬಂಧ ಹಾಳು ಮಾಡಿಕೊಂಡಿರುವ ಚೀನಾ

ಅನೇಕ ರಾಷ್ಟ್ರಗಳೊಂದಿಗೆ ಸಂಬಂಧ ಹಾಳು ಮಾಡಿಕೊಂಡಿರುವ ಚೀನಾ

ಚೀನಾ ಅಮೆರಿಕಾ ಜೊತೆಗಷ್ಟೇ ಸಂಬಂಧವನ್ನು ಹಾಳು ಮಾಡಿಕೊಂಡಿಲ್ಲ. ಈಗಾಗಲೇ ಆಸ್ಟ್ರೇಲಿಯಾ, ಕೆನಡಾ, ಜಪಾನ್ ಮತ್ತು ಇತರರೊಂದಿಗೂ ಮುನಿಸಿಕೊಂಡಿದೆ.

ಅಮೆರಿಕಾದ ಮೇಲೆ ಬೇಹುಗಾರಿಕೆ ಆರೋಪ

ಅಮೆರಿಕಾದ ಮೇಲೆ ಬೇಹುಗಾರಿಕೆ ಆರೋಪ

ಮಂಗಳವಾರ ತಮ್ಮ ಒಂದು ಗಂಟೆ ಸುದೀರ್ಘ ಭಾಷಣದಲ್ಲಿ, ಎಫ್‌ಬಿಐ ನಿರ್ದೇಶಕರು ಚೀನಾದ ಹಸ್ತಕ್ಷೇಪ, ಆರ್ಥಿಕ ಬೇಹುಗಾರಿಕೆ, ದತ್ತಾಂಶ ಮತ್ತು ವಿತ್ತೀಯ ಕಳ್ಳತನ ಮತ್ತು ಅಕ್ರಮ ರಾಜಕೀಯ ಚಟುವಟಿಕೆಗಳ ದೂರದೃಷ್ಟಿಯ ಅಭಿಯಾನ, ಲಂಚ ಮತ್ತು ಬ್ಲ್ಯಾಕ್‌ಮೇಲ್ ಬಳಸಿ ಯುಎಸ್ ನೀತಿಯ ಮೇಲೆ ಚೀನಾ ಪ್ರಭಾವ ಬೀರುತ್ತಿರುವ ಬಗ್ಗೆ ವಿವರಿಸಿದ್ದಾರೆ.

"ನಾವು(ಎಫ್‌ಬಿಐ) ಈಗ ಪ್ರತಿ 10 ಗಂಟೆಗಳಿಗೊಮ್ಮೆ ಚೀನಾಕ್ಕೆ ಸಂಬಂಧಿಸಿದ ಹೊಸ ಗುಪ್ತಚರ ಪ್ರಕರಣವನ್ನು ತೆರೆಯುವ ಹಂತಕ್ಕೆ ತಲುಪಿದ್ದೇವೆ" ಎಂದು ವ್ರೇ ಹೇಳಿದರು. "ದೇಶಾದ್ಯಂತ ಪ್ರಸ್ತುತ ನಡೆಯುತ್ತಿರುವ ಸುಮಾರು 5,000 ಸಕ್ರಿಯ ಪ್ರತಿ ಗುಪ್ತಚರ ಪ್ರಕರಣಗಳಲ್ಲಿ, ಅರ್ಧದಷ್ಟು ಚೀನಾಕ್ಕೆ ಸಂಬಂಧಿಸಿವೆ." ಎಂದಿದ್ದಾರೆ.

ವಿದೇಶದಲ್ಲಿ ವಾಸಿಸುತ್ತಿರುವ ಚೀನಿಯರ ಮೇಲೆಯೇ ಕಣ್ಣಿಟ್ಟಿದೆ

ವಿದೇಶದಲ್ಲಿ ವಾಸಿಸುತ್ತಿರುವ ಚೀನಿಯರ ಮೇಲೆಯೇ ಕಣ್ಣಿಟ್ಟಿದೆ

ಚೀನಾ ದೇಶವು ವಿದೇಶದಲ್ಲಿ ವಾಸಿಸುತ್ತಿರುವ ತನ್ನದೇ ದೇಶದ ಪ್ರಜೆಗಳ ಮೇಲೆ ಕಣ್ಣಿಟ್ಟಿದ್ದು, ಬೆದರಿಕೆ ಒಡ್ಡುತ್ತಿದೆ ಎನ್ನಲಾಗಿದೆ.

"ಚೀನಾ ಸರ್ಕಾರವು ಅವರನ್ನು(ಚೀನಾ ಪ್ರಜೆಗಳು) ಚೀನಾಕ್ಕೆ ಮರಳುವಂತೆ ಒತ್ತಾಯಿಸಲು ಬಯಸಿದೆ ಮತ್ತು ಅದನ್ನು ಸಾಧಿಸಲು ಚೀನಾದ ತಂತ್ರಗಳು ಭಾರೀ ಆಘಾತಕಾರಿಯಾಗಿವೆ'' ಎಂದು ಎಫ್‌ಬಿಐ ಹೇಳಿದೆ.

English summary
Head of the US Federal Bureau of Investigation Christopher Wray has warned that acts of espionage and theft by China pose the "greatest long-term threat" to the future of the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X