ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ಕೊರೊನಾ ಸೋಂಕಿನಿಂದ ಸ್ವಾತಂತ್ರ್ಯ..!

ಜುಲೈ 4ರ ಒಳಗೆ ಕೊರೊನಾ ಸೋಂಕನ್ನು ತೊಲಗಿಸಲು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪಣತೊಟ್ಟಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಅಮೆರಿಕನ್ನರಿಗೆ ಕೊರೊನಾ ಸೋಂಕಿನಿಂದ ಸ್ವಾತಂತ್ರ್ಯ ಸಿಗಬೇಕಿದೆ ಎಂದು ಅಧ್ಯಕ್ಷ ಬೈಡನ್ ಹೇಳಿದ್ದಾರೆ. ಇದಕ್ಕಾಗಿ ಅಮೆರಿಕದಲ್ಲಿ ಉಚಿತ ವ್ಯಾಕ್ಸಿನ್ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ. ಅಧ್ಯಕ್ಷರಾಗಿ ಮೊದಲ ಪ್ರೈಮ್‌ಟೈಂ ಭಾಷಣದಲ್ಲಿ ಅಮೆರಿಕದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಬೈಡನ್, ಜನರಲ್ಲಿ ಧೈರ್ಯ ತುಂಬಿದ್ದಾರೆ.

ಅಮೆರಿಕದ ಯುವಕ, ಯುವತಿಯರು ಮೇ 1ರ ಒಳಗಾಗಿ ವ್ಯಾಕ್ಸಿನೇಷನ್‌ಗೆ ಸಿದ್ಧರಾಗಿರಬೇಕು, ಈ ಕುರಿತು ರಾಜ್ಯಗಳಿಗೆ ನಾನು ಆದೇಶ ಹೊರಡಿಸಲಿದ್ದೇನೆ ಎಂದಿದ್ದಾರೆ ಬೈಡನ್. ವ್ಯಾಕ್ಸಿನ್ ವಿತರಣೆಗಾಗಿ ಅಮೆರಿಕದ ಆರೋಗ್ಯ ಕೇಂದ್ರಗಳಿಗೂ ಸದ್ಯದಲ್ಲೇ ಅಧಿಕೃತ ಸೂಚನೆ ಹೋಗುವ ಸಾಧ್ಯತೆ ಇದೆ. ತಮ್ಮ ಭಾಷಣದಲ್ಲಿ ಈ ಬಗ್ಗೆ ಹಿಂಟ್ ಕೊಟ್ಟಿರುವ ಬೈಡನ್, ಕೊರೊನಾ ವಿರುದ್ಧದ ಹೋರಾಟದಲ್ಲಿ ಅಮೆರಿಕ ಎದುರಿಸಿದ ನೋವು, ಸಂಕಷ್ಟಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಈಗಾಗಲೇ ಸರ್ಕಾರಿ ನೌಕರರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. 'ಕೊರೊನಾ' ಸೋಂಕು ಇಳಿಮುಖವಾಗಲು ಅಗತ್ಯವಿರುವ ಕ್ರಮಗಳನ್ನು ಬೈಡನ್ ಸರ್ಕಾರ ಕೈಗೊಂಡಿದೆ. ಜುಲೈ 4 ಅಮೆರಿಕದ ಸ್ವಾತಂತ್ರ್ಯ ದಿನವಾಗಿದೆ. ಅಷ್ಟರೊಳಗೆ ಕೊರೊನಾಗೆ ಒಂದು ಗತಿ ಕಾಣಿಸಲು ಜೋ ಬೈಡನ್ ಆಡಳಿತ ಸಜ್ಜಾಗಿದೆ.

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು

ಮಿತ್ರಪಡೆಗಳ ಪರ 2ನೇ ಮಹಾಯುದ್ಧದಲ್ಲಿ ಅಖಾಡ ಪ್ರವೇಶಿಸಿದ್ದ ದೊಡ್ಡಣ್ಣ ಅಮೆರಿಕ ಭಾರಿ ಸಾವು, ನೋವು ಅನುಭವಿಸಿತ್ತು. ಅಂದಾಜು 4 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು 2ನೇ ವಿಶ್ವಯುದ್ಧದಲ್ಲಿ ಮೃತಪಟ್ಟಿದ್ದರು. ಆದರೆ ಕೊರೊನಾ ಇದಕ್ಕಿಂತಲೂ ಹೆಚ್ಚಿನ ಸಾವು ನೋವು ಉಂಟುಮಾಡಿದೆ. ಅಂದಾಜು 5 ಲಕ್ಷಕ್ಕೂ ಹೆಚ್ಚು ಜನರು ಅಮೆರಿಕದಲ್ಲಿ ಬಲಿಯಾಗಿದ್ದಾರೆ. ಅಮೆರಿಕದ ಕೆಲ ಪ್ರದೇಶಗಳಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರನ್ನು ಮಣ್ಣು ಮಾಡುವುದಕ್ಕೂ ಜಾಗದ ಕೊರತೆ ಎದುರಾಗಿತ್ತು. ಇಂತಹ ಸಂದಿಗ್ಧ ಸ್ಥಿತಿಯಲ್ಲೇ ಅಮೆರಿಕದ ಅಧ್ಯಕ್ಷ ಬೈಡನ್ ಮತ್ತೊಮ್ಮೆ ಪುಟಿದೇಳುವ ಧೈರ್ಯ ತೋರಿದ್ದಾರೆ.

ಕೊರೊನಾ ಕೂಪದಲ್ಲಿ ಅಮೆರಿಕ

ಕೊರೊನಾ ಕೂಪದಲ್ಲಿ ಅಮೆರಿಕ

ಬೈಡನ್ ಅಧಿಕಾರ ಸ್ವೀಕರಿಸಿ ಸುಮಾರು 2 ತಿಂಗಳಾಗಿದೆ ಅಷ್ಟೇ. ಜೋ ಬೈಡನ್ ಅಧಿಕಾರ ಸ್ವೀಕರಿಸಿದ ತಕ್ಷಣ ಅಮೆರಿಕನ್ನರ ಸಮಸ್ಯೆಗಳು ಸರಿಯಾಗುವುದಿಲ್ಲ. ಏಕೆಂದರೆ ಅಮೆರಿಕ ಶತಮಾನದಲ್ಲೇ ಎದುರಿಸದಷ್ಟು ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೆಲ್ಲಾ ಬಗೆಹರಿಸಲು ಹಲವು ವರ್ಷಗಳೇ ಬೇಕು. ಅದರಲ್ಲೂ ಟ್ರಂಪ್ ಅಮೆರಿಕದ ಘನತೆಗೆ ಹಾಗೂ ಅಮೆರಿಕ ಅರ್ಥ ವ್ಯವಸ್ಥೆಗೆ ಮಾಡಿದ ಘಾಸಿಗೆ ಮುಲಾಮು ಹಚ್ಚಬೇಕು. ಹೀಗಾಗಿ ಬೈಡನ್‌ಗೆ ಅಮೆರಿಕ ಅಧ್ಯಕ್ಷರ ಖುರ್ಚಿ ಹೂವಿನ ಹಾಸಿಗೆ ಆಗಿಲ್ಲ, ಮುಳ್ಳಿನ ಹಾದಿಯಾಗಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಇದನ್ನೆಲ್ಲಾ ಎದುರಿಸಿ, ಅಮೆರಿಕ ಹಾಗೂ ಅಮೆರಿಕನ್ನರನ್ನು ರಕ್ಷಿಸುವ ಹೊಣೆ ಜೋ ಬೈಡನ್ ಹೆಗಲ ಮೇಲಿದೆ.

3 ಕೋಟಿ ಕೊರೊನಾ ಸೋಂಕಿತರು..!

3 ಕೋಟಿ ಕೊರೊನಾ ಸೋಂಕಿತರು..!

ಅಮೆರಿಕದ ಸ್ಥಿತಿ ಭೀಕರವಾಗಿದ್ದು, ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲಿ ಹೊಸ ಹೊಸ ದಾಖಲೆಗಳನ್ನ ಬರೆಯುತ್ತಿದೆ. ಜಗತ್ತಿನಾದ್ಯಂತ 11 ಕೋಟಿ 87 ಲಕ್ಷ ಸೋಂಕಿತರು ಪತ್ತೆಯಾಗಿದ್ರೆ, ಕೇವಲ ಅಮೆರಿಕದಲ್ಲೇ ಈ ಸಂಖ್ಯೆ 3 ಕೋಟಿಗೆ ಸಮೀಪದಲ್ಲಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಜೊತೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಭಯ ಹುಟ್ಟಿಸುತ್ತಿದೆ. ಸುಮಾರು 86 ಲಕ್ಷ ಆಕ್ಟಿವ್ ಕೇಸ್‌ಗಳು ಅಮೆರಿಕದ ಆಸ್ಪತ್ರೆಗಳನ್ನ ತುಂಬುವಂತೆ ಮಾಡಿದೆ. ಇಷ್ಟೇ ಆಗಿದ್ದರೆ ಪರಿಸ್ಥಿತಿ ನಿಭಾಯಿಸಬಹುದಿತ್ತೋ ಏನೋ, ಆದರೆ ಈವರೆಗೂ 5 ಲಕ್ಷ 42 ಸಾವಿರ ಅಮೆರಿಕನ್ನರು ಡೆಡ್ಲಿ ಕೊರೊನಾಗೆ ಉಸಿರು ಚೆಲ್ಲಿದ್ದಾರೆ. ಇದು ಪರಿಸ್ಥಿತಿಯ ಭಯಾನಕತೆಯನ್ನು ಬಿಡಿಸಿಡುತ್ತಿದೆ.

ನಂ. 2 ಆಗತ್ತಾ ಅಮೆರಿಕ..?

ನಂ. 2 ಆಗತ್ತಾ ಅಮೆರಿಕ..?

ಅಮೆರಿಕದ ಸದ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ, ಅಮೆರಿಕದ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿರುವುದು ಖಚಿತವಾಗುತ್ತಿದೆ. ಹೀಗಾಗಿ ಅಮೆರಿಕದ ಪರಮ ಶತ್ರು ಚೀನಾ ಅಮೆರಿಕದ ನಂಬರ್ 1 ಸ್ಥಾನವನ್ನ ಆಕ್ರಮಿಸಲು ತುದಿಗಾಗಲಲ್ಲಿ ನಿಂತಿದೆ. ಇದು ಕೂಡ ಅಮೆರಿಕದ ನಾಯಕರನ್ನ ಹಾಗೂ ಉದ್ಯಮಿಗಳನ್ನು ಕಂಗೆಡಿಸಿದೆ. ಹಾಗೇ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜಗತ್ತು ಆರ್ಥಿಕ ಹಿಂಜರಿತ ಕಾಣುತ್ತಿದ್ದರೆ ಚೀನಾದ ಜಿಡಿಪಿ ಮಾತ್ರ ಗಮನಾರ್ಹ ಬೆಳವಣಿಗೆ ಕಾಣುತ್ತಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದು ಅಮೆರಿಕದ ನಂಬರ್ 1 ಸ್ಥಾನ ಅಲುಗಾಡಿಸುವ ಜೊತೆಗೆ, ಜಗತ್ತಿನಲ್ಲಿ ಹೊಸ ಆರ್ಥಿಕ ಶಕ್ತಿಯ ಉಗಮಕ್ಕೂ ಕಾರಣವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+