ಜೋ ಬೈಡನ್ ಪ್ರಮಾಣವಚನಕ್ಕೂ ಮುನ್ನ ಕ್ಯಾಪಿಟಲ್ ತಾತ್ಕಾಲಿಕ ಲಾಕ್‌ಡೌನ್

ವಾಷಿಂಗ್ಟನ್‌, ಜನವರಿ 19: ಅಮೆರಿಕಾದ ಕ್ಯಾಪಿಟಲ್ ಹಿಲ್‌ ಕಟ್ಟಡದ ಸಮೀಪದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಹ್ಯ ಭದ್ರತಾ ಬೆದರಿಕೆ ಹಿನ್ನೆಲೆಯಲ್ಲಿ ಅದನ್ನು ತಾತ್ಕಾಲಿಕ ಲಾಕ್‌ಡೌನ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋ ಬಿಡೆನ್ ಪ್ರಮಾಣವಚನಕ್ಕೆ ಮೊದಲು ಪೊಲೀಸರು ಪೂರ್ವಾಭ್ಯಾಸದ ಸಿದ್ಧತೆಗಳನ್ನು ನಡೆಸುತ್ತಿದ್ದರು. ಈ ನಡುವೆ ಅನುಮಾನಸ್ಪದ ಘಟನೆ ಬೆಳಕಿಗೆ ಬಂದಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಕ್ಯಾಪಿಟಲ್‌ ಅನ್ನು ತಾತ್ಕಾಲಿಕವಾಗಿ ಲಾಕ್‌ಡೌನ್ ಮಾಡಲಾಗಿದ್ದು, ಕೆಲವು ಗಂಟೆಗಳ ಬಳಿಕ ತೆರವು ಮಾಡಲಾಗಿದೆ.

ಕ್ಯಾಪಿಟಲ್ ಸಂಕೀರ್ಣದ ಒಳಗಿನ ಕಟ್ಟಡದ ಪ್ರವೇಶ ಅಥವಾ ನಿರ್ಗಮನಕ್ಕೆ ಅನುಮತಿ ಇಲ್ಲ. ಕಿಟಕಿಗಳು, ಬಾಗಿಲುಗಳಿಂದ ದೂರವಿರುವಂತೆ ಕ್ಯಾಪಿಟಲ್ ಪೊಲೀಸರು ಸಂದೇಶ ರವಾನಿಸಿದ್ದಾರೆ.

Biden Inauguration Rehearsal Paused Amid US Capitol Lockdown

ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಜನವರಿ 6ರಂದು ಕ್ಯಾಪಿಟಲ್‌ಗೆ ನುಗ್ಗಿ ಎಲೆಕ್ಟ್ರೊಲ್ ಕಾಲೇಜ್ ಮತ ಎಣಿಕೆಯಂಥ ಸಾಂವಿಧಾನಿಕ ಪ್ರಕ್ರಿಯೆಗೆ ಅಡ್ಡಿಪಡಿಸಿದರು. ಕ್ಯಾಪಿಟಲ್ ಮೇಲೆ ನಡೆದ ಈ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದರು.

ಜನವರಿ 20ರಂದು ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+