ತಿನ್ನುವ ಮೂಲಕವೇ ಕೋಟಿಗಟ್ಟಲೆ ಹಣ ಸಂಪಾದಿಸಿದ ಮಹಿಳೆ

ವಾಷಿಂಗ್ಟನ್, ಆಗಸ್ಟ್ 2: ನಾವು ದುಡಿಯುವ ಹಣದಲ್ಲಿ ಹೆಚ್ಚು ಹಣ ವ್ಯಯಿಸುವುದು ತಿನ್ನುವುದಕ್ಕಾಗಿಯೇ. ಕುಟುಂಬದವರೊಂದಿಗೆ ಒಮ್ಮೆ ಹೋಟೆಲ್‌ಗೆ ಹೋದರೆ ಸಾವಿರಾರು ರೂಪಾಯಿ ಖರ್ಚಾಗುವುದು ಸಹಜ. ರುಚಿರುಚಿಯಾದ ಅಡುಗೆ, ವಿವಿಧ ಬಗೆಯ ಖಾದ್ಯಗಳು ಆಸೆ ಹುಟ್ಟಿಸುವುದರ ಜತೆಗೆ ಜೇಬಿಗೆ ಕತ್ತರಿ ಹಾಕಿಸುತ್ತವೆ. ಆದರೆ, ಇಲ್ಲೊಬ್ಬ ಮಹಿಳೆ ತಿನ್ನುವ ಮೂಲಕವೇ ಖ್ಯಾತಿ ಗಳಿಸಿದ್ದಾರೆ. ಮಾತ್ರವಲ್ಲ, ಕೋಟಿಗಟ್ಟಲೆ ಹಣವನ್ನೂ ಸಂಪಾದಿಸಿದ್ದಾರೆ.

ಅಮೆರಿಕದ ಬೆಥಾನಿ ಗ್ಯಾಸ್ಕಿನ್ ಎಂಬಾಕೆ ಯೂಟ್ಯೂಬ್ ಚಾನೆಲ್‌ ಮೂಲಕ ಕೇವಲ ಎರಡು ವರ್ಷದಲ್ಲಿ ಸುಮಾರು ಎರಡು ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ್ದಾರೆ. 'ಬ್ಲೋವ್ಸ್‌ಲೈಫ್' ಎಂಬ ಚಾನೆಲ್ ಮೂಲಕ ಆಕೆ ಭರ್ಜರಿ ಹಣ ಗಳಿಸಿದ್ದಾರೆ.

ಯೂಟ್ಯೂಬ್‌ನ ನೇರಪ್ರಸಾರದಲ್ಲಿ ವೀಕ್ಷಕರೊಂದಿಗೆ ಸಂವಾದ ನಡೆಸುತ್ತಾ ಬಗೆಬಗೆಯ ತಿನಿಸು ಸೇವಿಸುವ ಪದ್ಧತಿಯಿದೆ. ಅದಕ್ಕೆ ಮುಕ್ಬಾಂಗ್ ಎಂದು ಕರೆಯಲಾಗುತ್ತದೆ. ಗ್ಯಾಸ್ಕಿನ್ ಅವರು ವೃತ್ತಿಪರ ಶೆಫ್ ಅಲ್ಲ. ಆದರೆ, ಆಕೆ ಆಹಾರದ ರೆಸಿಪಿಗಳು ಮತ್ತು ನೀಡುವ ಆಹಾರದ ಸವಾಲುಗಳು ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಸಂಖ್ಯೆಯ ವೀಕ್ಷಕರನ್ನು ಸೆಳೆದಿದೆ.

Bethany Gaskin Makes $1 Million Mukbang Youtube Videos

'ಮುಕ್ಬಾಂಗ್' ಆನ್‌ಲೈನ್ ಮಾಧ್ಯಮದ ಇತ್ತೀಚಿನ ಕ್ರೇಜ್‌ಗಳಲ್ಲಿ ಒಂದು. ಇಲ್ಲಿ ಟೇಬಲ್ ಮುಂದೆ ಕುಳಿತ ಜನರು ತಮ್ಮ ಎದುರು ಕ್ಯಾಮೆರಾ ಇರಿಸಿಕೊಂಡಿರುತ್ತಾರೆ. ತಮ್ಮ ಚಾನೆಲ್ ಚಂದಾದಾರಿಕೆ ಪಡೆದ ವೀಕ್ಷಕರೊಂದಿಗೆ ಹರಟುತ್ತಾ, ಬಗೆಬಗೆಯ ತಿನಿಸುಗಳನ್ನು ತಿನ್ನುತ್ತಾರೆ. ಹುಚ್ಚಾಟಕ್ಕೆ ಆರಂಭವಾದ ಈ ಅಭ್ಯಾಸ ಈಗ ಉದ್ಯಮದಂತೆಯೇ ಬೆಳೆದಿದೆ. ಹೀಗೆ ಭಕ್ಷ್ಯಗಳನ್ನು ಭಕ್ಷಿಸುತ್ತಾ ಹರಟುವವರು ಕುಳಿತಲ್ಲೇ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಕೊಳ್ಳುತ್ತಾರೆ.

ಗ್ಯಾಸ್ಕಿನ್ ಅವರು ಇದುವರೆಗೂ ಸುಮಾರು 900 ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಅವುಗಳನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಕೇವಲ ಈ ರೀತಿಯ ವಿಡಿಯೋಗಳ ಮೂಲಕವೇ ತಾವು 10 ಲಕ್ಷ ಡಾಲರ್ ಗಳಿಸಿರುವುದಾಗಿ ಗ್ಯಾಸ್ಕಿನ್ ಖುಷಿಯಿಂದ ಹೇಳಿಕೊಂಡಿದ್ದಾರೆ.

44 ವರ್ಷದ ಗ್ಯಾಸ್ಕಿನ್, ಆಹಾರ ಮಾತ್ರವಲ್ಲದೆ ಮೇಕಪ್ ಟ್ಯುಟೋರಿಯಲ್, ಕೌನ್ಸೆಲಿಂಗ್‌ನಂತಹ ವಿಡಿಯೋಗಳನ್ನೂ ಕೂಡ ಯೂಟ್ಯೂಬ್‌ನಲ್ಲಿ ಹರಿಬಿಡುತ್ತಾರೆ.

ಮುಕ್ಬಾಂಗ್ ವಿಡಿಯೋಗಳಿಂದ ಖ್ಯಾತಿ ಗಳಿಸಿರುವ ದಕ್ಷಿಣ ಕೊರಿಯಾದ ಯು ಹೆ ಜಿ ಎಂಬ ಯುವತಿಗೆ ಆಕೆಯ ಅಭಿಮಾನಿಯೊಬ್ಬ 4,20,000 ಮಲೇಷಿಯನ್ ರಿಂಗಿಟ್‌ ಹಣವನ್ನು ದೇಣಿಗೆಯಾಗಿ ನೀಡಿದ್ದಾನೆ.
ಮನೆಯಲ್ಲಿಯೇ ಕುಳಿತು ಕೆಲಸ ಮಾಡಬೇಕು ಎಂದು ಬಯಸುವವರಿಗೆ ದುಡಿಮೆಗೆ ಎಷ್ಟೊಂದು ಮಾರ್ಗಗಳಿವೆಯಲ್ಲವೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+