ಅಮೆರಿಕ ಚುನಾವಣೆ: ಸೋತ ಟ್ರಂಪ್‌ಗೆ ಪತ್ನಿ ವಿಚ್ಛೇದನ!

ವಾಶಿಂಗ್ಟನ್, ನವೆಂಬರ್.08: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಡೊನಾಲ್ಡ್ ಟ್ರಂಪ್ ರಿಗೆ ಮತ್ತೊಂದು ಶಾಕ್ ಹೊಡೆಯುವ ಲಕ್ಷಣಗಳು ಎದ್ದು ಕಾಣುತ್ತಿವೆ.

ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ವಿರುದ್ಧ ಸೋಲು ಕಂಡ ಟ್ರಂಪ್ ಜೊತೆಗಿನ ವೈವಾಹಿಕ ಬದುಕನ್ನು ಅಂತ್ಯಗೊಳಿಸುವ ಬಗ್ಗೆ ಪತ್ನಿ ಮೆಲಾನಿಯಾ ಯೋಚಿಸುತ್ತಿದ್ದಾರೆ. ಶೀಘ್ರದಲ್ಲಿ ಟ್ರಂಪ್ ಅವರಿಗೆ ಮೆಲಾನಿಯಾ ವಿಚ್ಛೇದನ ನೀಡುತ್ತಾರೆ ಎನ್ನಲಾಗಿದೆ.

ಅಮೆರಿಕಾ ಶ್ವೇತಭವನದ ಮಾಜಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ರಂಪ್ ಹಾಗೂ ಮೆಲಾನಿಯಾ ನಡುವಿನ 15 ವರ್ಷಗಳ ವೈವಾಹಿಕ ಜೀವನ ಕಡಿದುಕೊಳ್ಳಲು ಕ್ಷಣಗಣನೆ ಶುರುವಾಗಿದೆ. ಶ್ವೇತಭವನದಿಂದ ಹೊರಗೆ ಕಾಲಿಡುತ್ತಿದ್ದಂತೆ ವಿಚ್ಛೇದನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

As-Soon-As Melania Will Divorced To Donald Trump: Says Ex-Aides

ಈಗ ವಿಚ್ಛೇದನಕ್ಕೆ ಕಾರಣವೇನು?:

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಗೆ ಪತ್ನಿ ಮೆಲಾನಿಯಾ ವಿಚ್ಛೇದನ ನೀಡುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಶ್ವೇತಭವನದ ಸಂಪರ್ಕ ಇಲಾಖೆ ಮಾಜಿ ನಿರ್ದೇಶಕ ಓಮಾಸಾ ಮ್ಯಾನಿಗಲ್ಟ್ ಉತ್ತರಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಡೊನೊಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದಲ್ಲಿದ್ದಾಗಲೇ ವಿಚ್ಛೇದನ ನೀಡುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ವೇಳೆ ಅಂದೇ ವಿಚ್ಛೇದನ ನೀಡಿದ್ದರೆ, ಅಧಿಕಾರವನ್ನು ಬಳಸಿಕೊಂಡು ಮೆಲಾನಿಯಾರನ್ನು ಟ್ರಂಪ್ ಶಿಕ್ಷೆಗೆ ಗುರಿಪಡಿಸುವ ಅಪಾಯವಿತ್ತು ಎಂದಿದ್ದಾರೆ.

ಸಾರ್ವಜನಿಕವಾಗಿ ಸಾಕಷ್ಟು ವದಂತಿಗಳು ಹರಡುತ್ತಿದ್ದರೂ ತಮ್ಮ ಪತಿಯ ಜೊತೆಗೆ ತಾವು ಉತ್ತಮ ಸಂಬಂಧವನ್ನು ಹೊಂದಿರುವುದಾಗಿ ಮೆಲಾನಿಯಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಡೊನಾಲ್ಡ್ ಟ್ರಂಪ್ ತಮ್ಮ ಮಾಡಿಗೆ ಎಂದು ಎದುರು ಆಡಿರುವ ಉದಾಹರಣೆಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಕಳೆದ ಶನಿವಾರವಷ್ಟೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಚುನಾವಣೆಯಲ್ಲಿ 290 ಮತಗಳನ್ನು ಪಡೆದ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ದೇಶದ 46ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತೀಯ ಮೂಲದ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+