ಭಾರತದ ಮೇಲೆ ಮತ್ತೆ ಉಗ್ರದಾಳಿ ನಡೆದರೆ ಪಾಕ್ ಕತೆ ಅಷ್ಟೇ:ಅಮೆರಿಕ ಎಚ್ಚರಿಕೆ!
ವಾಷಿಂಗ್ಟನ್, ಮಾರ್ಚ್ 21: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ, ಉಗ್ರದಮನದ ಬಗ್ಗೆ ಅಗತ್ಯ ಮತ್ತು ಶಾಶ್ವತ ಪರಿಹಾರ ಕಂಡೂಕೊಂಡಿಲ್ಲ ಎಂದರೆ ಸಮಸ್ಯೆಯಾದೀತು. ಭಾರತದ ಮೇಲೆ ಇನ್ನೊಂದು ಉಗ್ರದಾಳಿಯಾದರೆ ಪಾಕಿಸ್ತಾನ ಭಾರೀ ಸಂಕಷ್ಟ ಎದುರಿಸಬೇಕಾದೀತು ಎಂದು ಅಮೆರಿಕ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
"ಜೈಶ್ ಇ ಮೊಹಮ್ಮದ್ ಮತ್ತು ಲಷ್ಕರ್ ಇ ತಯಿಬಾ ಉಗ್ರ ಸಂಘಟನೆಯ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳುವುದನ್ನು ನೋಡಲು ನಾವು ಕಾಯುತ್ತಿದ್ದೇವೆ. ಈ ಕುರಿತು ಅಮೆರಿಕ ಮತ್ತೆ ಮತ್ತೆ ನೆನಪಿಸುವ ಅಗತ್ಯವಿಲ್ಲ ಎಂದುಕೊಂಡಿದ್ದೇವೆ" ಎಂದು ಅಮೆರಿಕ ಹೇಳಿದೆ.
ಅಕಸ್ಮಾತ್ ಇನ್ನೋದಮು ಉಗ್ರ ದಾಳಿ ಭಾರತದ ಮೇಲೆ ನಡೆದು, ಅದರಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದಾದರೆ ಅದು ಭಾರೀ ಬೆಲೆ ತೆರಬೇಕಾದೀತು. ಈ ಭಯೋತ್ಪಾದಕ ಸಂಘಟನೆಗಳು ಭಾರತದ ಮೇಲೆ ದಾಳಿ ನಡೆಸಿದ್ದೇ ಆದಲ್ಲಿ, ವಿಶ್ವದ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ವೈಟ್ ಹೌಸ್ ನ ಅಧಿಕೃತ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.

ಭಯೋತ್ಪಾದಕ ಸಂಘಟನೆಗಳ ನಿಷ್ಕ್ರಿಯಗೊಳಿಸಲು ಪಾಕಿಸ್ತಾನ ಮಾಡುತ್ತಿರುವ ಯಾವ ಪ್ರಯತ್ನವೂ ಸಾಲದು, ಆ ನಿಟ್ಟಿನಲ್ಲಿ ಅದು ಮತ್ತಷ್ಟು ಪ್ರಯತ್ನ ಮಾಡಬೇಕಿದೆ ಎಂದು ಅಮೆರಿಕ ಹೇಳಿದೆ.












Click it and Unblock the Notifications