ಗಾಂಜಾ ಬಳಕೆಗೆ ಗ್ರೀನ್ ಸಿಗ್ನಲ್ ಕೊಟ್ಟ ಅಮೆರಿಕದ ಮತದಾರರು

ಈಗಾಗಲೇ ಅಮೆರಿಕದ ಹಲವು ರಾಜ್ಯಗಳಲ್ಲಿ ಗಾಂಜಾ ಬಳಕೆ ಮತ್ತು ಕೃಷಿಗೆ ಕಾನೂನುಬದ್ಧ ಅವಕಾಶವನ್ನು ನೀಡಿರುವ ಬೆನ್ನಲ್ಲೇ ನ್ಯೂ ಜೆರ್ಸಿ ರಾಜ್ಯದಲ್ಲೂ ಗಾಂಜಾಗೆ ಕಾನೂನುಬದ್ಧ ಸ್ಥಾನ ಸಿಕ್ಕಿದೆ. ಚುನಾವಣೆ ಸಂದರ್ಭ ನ್ಯೂ ಜೆರ್ಸಿ ರಾಜ್ಯದ ಮತದಾರರಿಗೆ ಕೇಳಿದ್ದ ಪ್ರಶ್ನೆಗೆ, ಗಾಂಜಾ ಕಾನೂನುಬದ್ಧ ಮಾಡಿ ಎಂಬ ಅಭಿಪ್ರಾಯವೇ ಕೇಳಿಬಂದಿದೆ. ನ್ಯೂ ಜೆರ್ಸಿ ಮತದಾರರ ಪೈಕಿ ಸುಮಾರು 17 ಲಕ್ಷ 28 ಸಾವಿರ ಜನರು ಗಾಂಜಾ ಪರವಾಗಿ ಮತ ಹಾಕಿದ್ದಾರೆ. ಇನ್ನುಳಿದ 8 ಲಕ್ಷ 53 ಸಾವಿರ ಜನರು ಗಾಂಜಾ ಬಳಕೆ ವಿರುದ್ಧ ಮತ ಹಾಕಿದ್ದರು.

ಹೀಗಾಗಿ ಶೇ. 66.96ರಷ್ಟು ಮತಗಳೊಂದಿಗೆ ನ್ಯೂ ಜೆರ್ಸಿ ರಾಜ್ಯದಲ್ಲಿ ಗಾಂಜಾ ಕಾನೂನುಬದ್ಧ ಸ್ಥಾನಮಾನ ಪಡೆದಿದೆ. ಈ ಮೂಲಕ ಅಮೆರಿಕದ 50 ರಾಜ್ಯಗಳ ಪೈಕಿ 3 ರಾಜ್ಯಗಳನ್ನು ಹೊರತುಪಡಿಸಿದರೆ, ಮಿಕ್ಕ ಎಲ್ಲಾ ರಾಜ್ಯಗಳೂ ಗಾಂಜಾ ಬಳಕೆಗೆ ಅನುಮತಿ ಸಿಕ್ಕಂತಾಗಿದೆ. ಆದರೆ ಬಹುತೇಕ ರಾಜ್ಯಗಳಲ್ಲಿ ಗಾಂಜಾ ಔಷಧಗಳ ತಯಾರಿಕೆಗೆ ಮಾತ್ರ ಬಳಸಬೇಕು. ಆದರೆ ಕ್ಯಾಲಿಫೋರ್ನಿಯ, ಕೊಲೊರಾಡೋ, ಅಲಾಸ್ಕಾ, ಅರಿಜೋನಾ ಸೇರಿದಂತೆ ಕೆಲವೇ ಕೆಲವು ರಾಜ್ಯಗಳಲ್ಲಿ ಜನರು ಮುಕ್ತವಾಗಿ ಗಾಂಜಾ ಬಳಸಬಹುದಾಗಿದೆ.

ಔಷಧ ಕಂಪನಿಗಳು ಬಳಸುತ್ತಿವೆ

ಔಷಧ ಕಂಪನಿಗಳು ಬಳಸುತ್ತಿವೆ

ಈಗಾಗಲೇ ಅಮೆರಿಕದ ಹಲವು ಔಷಧ ತಯಾರಿಕಾ ಸಂಸ್ಥೆಗಳು ಗಾಂಜಾ ಗಿಡವನ್ನು ಮೆಡಿಸಿನ್ ತಯಾರಿಕೆಗೆ ಮೂಲ ಪದಾರ್ಥವಾಗಿ ಬಳಸುತ್ತಿವೆ. ಆದರೆ ಹಲವು ದಶಕಗಳ ಹಿಂದೆ ಬಹುತೇಕ ದೇಶಗಳು ಗಾಂಜಾ ಬ್ಯಾನ್ ಮಾಡಲು ಅಮೆರಿಕ ಕಂಪನಿಗಳ ಲಾಬಿ ಕಾರಣ ಎನ್ನಲಾಗಿತ್ತು. ಇಷ್ಟೆಲ್ಲದರ ನಡುವೆ ಅಮೆರಿಕದಲ್ಲೂ ಗಾಂಜಾ ಬಳಕೆ ಬಗ್ಗೆ ಒತ್ತಡಗಳು ಹೆಚ್ಚಾದವು. ಈ ಒತ್ತಡಗಳ ಪರಿಣಾಮ ಒಂದೊಂದೇ ರಾಜ್ಯಗಳು ತಮಗೆ ಬೇಕಾದಂತೆ ಕಾನೂನು ರೂಪಿಸಿಕೊಂಡವು. ಈಗ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಗಾಂಜಾ ಬಳಕೆಗೆ ಅನುಮತಿಯನ್ನು ನೀಡಲಾಗಿದೆ. 2020ರ ಚುನಾವಣೆ ಸಂದರ್ಭದಲ್ಲಿ ಈ ಸಾಲಿಗೆ ನ್ಯೂ ಜರ್ಸಿ ರಾಜ್ಯ ಸೇರ್ಪಡೆಯಾಗಿದೆ.

ಜಗತ್ತಿನ 40 ದೇಶಗಳಲ್ಲಿ ಲೀಗಲ್

ಜಗತ್ತಿನ 40 ದೇಶಗಳಲ್ಲಿ ಲೀಗಲ್

ಜಗತ್ತಿನ ಬಹುಪಾಲು ದೇಶಗಳಲ್ಲಿ ಮರಿಜುನಾ ಈಗಲೂ ನಿಷೇಧಿತ ವಸ್ತು. ಆದರೆ 40ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಜಾ ಬೆಳೆಯುವುದಕ್ಕೆ ಹಾಗೂ ಬಳಸುವುದಕ್ಕೆ ಅನುಮತಿ ಇದೆ. ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಗಾಂಜಾ ಗಿಡಕ್ಕೆ ಲೀಗಲ್ ಪಟ್ಟವಿದೆ. ಹಾಗೇ ಅಮೆರಿಕದ ಹಲವು ರಾಜ್ಯಗಳಲ್ಲಿ ಔಷಧ ತಯಾರಿಕೆಗೆ ಗಾಂಜಾ ಬಳಸಲು ಅನುಮತಿ ಇದೆ. ಭಾರತದಲ್ಲಿ ಮಾತ್ರ ಗಾಂಜಾ ಈಗಲೂ ಬ್ಯಾನ್ ಆಗಿದೆ. ಹೀಗಾಗಿ ಆಯುರ್ವೇದ ತಜ್ಞರು ಕಾನೂನಾತ್ಮಕವಾಗಿ ಗಾಂಜಾ ಬಳಸಲು ಅನುಮತಿ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ.

ಹಿಮಾಚಲದಲ್ಲಿ 60 ಸಾವಿರ ಕೆ.ಜಿ ಗಾಂಜಾ ಬೆಳೆ

ಹಿಮಾಚಲದಲ್ಲಿ 60 ಸಾವಿರ ಕೆ.ಜಿ ಗಾಂಜಾ ಬೆಳೆ

ಆಯುರ್ವೇದದಲ್ಲಿ ಗಾಂಜಾಗೆ ಮನ್ನಣೆ ಇದ್ದು, ಇದನ್ನು ನೋವು ನಿವಾರಕದಂತೆ ಬಳಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ನೋವು ನಿವಾರಕವಾಗಿ ಮಾತ್ರವಲ್ಲ, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೂ ಗಾಂಜಾ ರಾಮಬಾಣ ಎನ್ನಲಾಗುತ್ತೆ. ಹೀಗೆ ಸಾವಿರಾರು ವರ್ಷಗಳಿಂದಲೂ ಗಾಂಜಾ ಗಿಡ ಆಯುರ್ವೇದದಲ್ಲಿ ಬೆರೆತು ಹೋಗಿತ್ತು. 1961ರಲ್ಲೇ ಗಾಂಜಾ ಭಾರತದಲ್ಲಿ ಬ್ಯಾನ್ ಆಗುವಂತೆ ಮಾಡಲು ಲಾಬಿ ನಡೆದಿತ್ತು. ಅಮೆರಿಕ ಆಸೆ ಆಗ ಈಡೇರಲಿಲ್ಲ. ಆದರೆ 1985ರಲ್ಲಿ ಅಂದಿನ ರಾಜೀವ್ ಗಾಂಧಿ ಸರ್ಕಾರ ಅಮೆರಿಕ ಫಾರ್ಮಾ ಕಂಪನಿಗಳ ಒತ್ತಡಕ್ಕೆ ಮಣಿದು ಗಾಂಜಾ ಬ್ಯಾನ್ ಮಾಡಿತ್ತು ಎಂಬ ಆರೋಪವಿದೆ. ಆದರೂ ಭಾರತದಲ್ಲಿ ಕಳ್ಳದಾರಿಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಉದಾಹರಣೆಗೆ ಹಿಮಾಚಲ ಪ್ರದೇಶ ಒಂದರಲ್ಲೇ ಬರೋಬ್ಬರಿ 60 ಸಾವಿರ ಕೆ.ಜಿ ಗಾಂಜಾ ಬೆಳೆಯಲಾಗುತ್ತಿದೆ.

 ಸಿಗರೇಟ್, ಆಲ್ಕೋಹಾಲ್‌ಗಿಂತ ಅಪಾಯ ಕಮ್ಮಿ

ಸಿಗರೇಟ್, ಆಲ್ಕೋಹಾಲ್‌ಗಿಂತ ಅಪಾಯ ಕಮ್ಮಿ

ಮರಿಜುನಾ ಹಲವು ಔಷಧೀಯ ಗುಣ ಹೊಂದಿದೆ. ಇದರಲ್ಲಿನ ಕೆಲವು ರಾಸಾಯನಿಕ ವಸ್ತುಗಳು ದೇಹದಲ್ಲಿ ಒತ್ತಡ ಹಾಗೂ ನೋವು ಕಡಿಮೆ ಮಾಡುವ ಶಕ್ತಿ ಹೊಂದಿವೆ ಎಂಬುದು ಆಯುರ್ವೇದ ತಜ್ಞರ ಮಾತು. ಸಿಗರೇಟ್ ಹಾಗೂ ಆಲ್ಕೋಹಾಲ್‌ಗೆ ಹೋಲಿಕೆ ಮಾಡಿದರೆ ಗಾಂಜಾ ಗಿಡದಿಂದ ಆಗುವ ಅಪಾಯವೂ ತೀರಾ ಕಡಿಮೆ ಎಂಬುದು ಕೆಲ ಸಂಶೋಧನೆಗಳಿಂದ ಸಾಬೀತಾಗಿದೆ. ಆದರೂ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಏಕೆಂದರೆ ಗಾಂಜಾ ಬ್ಯಾನ್ ಆಗಿರೋದರಿಂದ ಹಲವು ಸಂಶೋಧನೆಗೂ ಅಡ್ಡಿಯಾಗಿದೆ.

ಭಾರತದಲ್ಲೂ ಸಿಗಲಿದೆಯಾ ಅನುಮತಿ..?

ಭಾರತದಲ್ಲೂ ಸಿಗಲಿದೆಯಾ ಅನುಮತಿ..?

ಔಷಧೀಯ ಉಪಯೋಗಕ್ಕಾಗಿ ಗಾಂಜಾ ಬಳಕೆಗೆ ಹಾಗೂ ಬೆಳೆಸಲು ಅನುಮತಿ ನೀಡಬೇಕು ಎಂಬ ಒತ್ತಡ ಕೇಂದ್ರ ಸರ್ಕಾರದ ಮೇಲೆ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಕೂಡ ಔಷಧೀಯ ಸಂಶೋಧನೆಗೆ ಗಾಂಜಾ ಬಳಕೆಗೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಆದರೆ ಇದ್ಯಾವುದೂ ಇನ್ನೂ ಫೈನಲ್ ಆಗಿಲ್ಲ. ಭವಿಷ್ಯದಲ್ಲಿ ಆಯುರ್ವೇದ ತಜ್ಞರ ಮಾತಿಗೆ ಕೇಂದ್ರ ಸರ್ಕಾರ ಮನ್ನಣೆ ನೀಡುತ್ತಾ, ಇಲ್ಲ ಗಾಂಜಾ ಬಳಕೆ ಮೇಲಿನ ನಿಷೇಧ ಮುಂದುವರಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+