Get Updates
Get notified of breaking news, exclusive insights, and must-see stories!

ಕೊರೊನಾ ವಿರುದ್ಧ ಕೊನೆಗೂ ಗೆದ್ದ ಅಮೆರಿಕ! ಲಕ್ಷ ಲಕ್ಷ ಉದ್ಯೋಗ ಸೃಷ್ಟಿ!

ಕೆಲವೇ ತಿಂಗಳ ಹಿಂದೆ ಸೋತು ಸುಣ್ಣವಾಗಿದ್ದ ಅಮೆರಿಕ ಮತ್ತೆ ಪುಟಿದೆದ್ದು, ಜಗತ್ತಿಗೆ ತನ್ನ ಸಾಮರ್ಥ್ಯ ಏನು ಅನ್ನೋದನ್ನ ತೋರಿಸಲು ಸಿದ್ಧವಾಗುತ್ತಿದೆ. ಹೌದು, ಜೂನ್ ತಿಂಗಳಲ್ಲಿ ಬರೋಬ್ಬರಿ 8 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಸಿದೆ ಅಮೆರಿಕದ ಆರ್ಥಿಕತೆ. 8 ಲಕ್ಷ 50 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಅಮೆರಿಕ ಆರ್ಥಿಕತೆ ಸಕ್ಸಸ್ ಆಗಿದೆ. ಇದು ಕೇವಲ ಜೂನ್ ತಿಂಗಳ ಸಾಧನೆಯಾಗಿದ್ದು, ಇನ್ನೂ ಏಪ್ರಿಲ್ ಹಾಗೂ ಮೇ ತಿಂಗಳಲ್ಲೂ ಉತ್ತಮ ಸಾಧನೆ ಮಾಡಿತ್ತು ಅಮೆರಿಕ.

ಕೊರೊನಾ ಕಂಟಕ ಶುರುವಾದ ಬಳಿಕ ಅಮೆರಿಕ ಸಾಕಷ್ಟು ಬದಲಾಗಿದೆ. ಅದರಲ್ಲೂ ಟ್ರಂಪ್ ಆಡಳಿತದಲ್ಲಿ ಮಕಾಡೆ ಮಲಗಿದ್ದ ಅಮೆರಿಕ, ಈಗೀಗ ಚೇತರಿಕೆ ಕಾಣುತ್ತಿದೆ. ಜೋ ಬೈಡನ್ ಕೈಗೊಂಡಿರುವ ಕೆಲವು ಕಠಿಣ ಕ್ರಮ ಅಮೆರಿಕದಲ್ಲಿ ಆಸೆ ಚಿಗುರುವಂತೆ ಮಾಡಿದೆ. ಅಂದಹಾಗೆ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಉದ್ಯೋಗಗಳು ಜೂನ್ ತಿಂಗಳಲ್ಲಿ ಸೃಷ್ಟಿಯಾಗಿವೆ. ಇದು ಕೂಡ ಅಮೆರಿಕದ ಆರ್ಥಿಕತೆ ಮತ್ತೆ ಬಲಿಷ್ಠವಾಗುತ್ತಿರುವ ಮುನ್ಸೂಚನೆ ನೀಡಿದೆ.

ಚೇತರಿಕೆ ಕಂಡ ಪ್ರವಾಸೋದ್ಯಮ!

ಚೇತರಿಕೆ ಕಂಡ ಪ್ರವಾಸೋದ್ಯಮ!

ಅಮೆರಿಕದಲ್ಲಿ ಕೆಲವೇ ತಿಂಗಳ ಹಿಂದೆ ಪರಿಸ್ಥಿತಿ ಹೇಗಿತ್ತು ಅಂದ್ರೆ, ಆ ದೇಶದ ಹೆಸರು ಕೇಳಿದ್ರೂ ಭಯಪಡುವ ಸನ್ನಿವೇಶ ನಿರ್ಮಾಣವಾಗಿತ್ತು. ಸರಿಸುಮಾರು 1 ತಿಂಗಳಿಗೂ ಹೆಚ್ಚು ಕಾಲ ನಿತ್ಯ 3 ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್‌ಗಳು ಕನ್ಫರ್ಮ್ ಆಗುತ್ತಿದ್ದವು. ಇದರ ಜೊತೆ ಸಾವಿನ ಸಂಖ್ಯೆ 5 ಲಕ್ಷವನ್ನೂ ದಾಟಿ 6 ಲಕ್ಷಕ್ಕೆ ಮುಟ್ಟಿತ್ತು. ಅನಿವಾರ್ಯ ಪರಿಸ್ಥಿತಿಯಲ್ಲಿ ಅಮೆರಿಕದ ಕಡೆ ತಲೆಹಾಕಿ ಮಲಗೋದಕ್ಕೂ ಯೋಚಿಸುವಂತಾಗಿತ್ತು. ಆದರೆ ಬೈಡನ್ ಆಡಳಿತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಮತ್ತೆ ಜೀವ ಕಳೆ ಬಂದಿದ್ದು, ಅಮೆರಿಕದ ಪ್ರವಾಸೋದ್ಯಮ ಕ್ಷೇತ್ರದಲ್ಲೇ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಮಂದಿಗೆ ಕೆಲಸ ಸಿಕ್ಕಿದೆ. ಒಂದೇ ತಿಂಗಳಲ್ಲಿ ಭಾರಿ ಪ್ರಗತಿ ಕಾಣುತ್ತಿದೆ ಅಮೆರಿಕದ ಆರ್ಥಿಕತೆ.

ಬೈಡನ್ ಬದ್ಧತೆ ಮಾದರಿ!

ಬೈಡನ್ ಬದ್ಧತೆ ಮಾದರಿ!

‘ಅಮೆರಿಕ ಮೊದಲು', ‘ಅಮೆರಿಕನ್ನರಿಗೆ ಆದ್ಯತೆ' ಹೀಗೆ ಬಾಯಿ ಬಿಟ್ಟರೆ ಸಾಕು ಅಮೆರಿಕ, ಅಮೆರಿಕ ಎನ್ನುತ್ತಿದ್ದ ಮಾಜಿ ಅಧ್ಯಕ್ಷ ಟ್ರಂಪ್ ಸಾಧಿಸಿದ್ದು ಅಷ್ಟಕ್ಕಷ್ಟೆ. ಬೇರೆ ಬೇರೆ ದೇಶಗಳನ್ನ ಬಿಡಿ, ಸ್ವತಃ ಅಮೆರಿಕದ ಪ್ರಜೆಗಳಿಗೂ ಟ್ರಂಪ್ ಹೇಳಿಕೆಗಳಿಂದ ಪ್ರಯೋಜನ ಆಗಲಿಲ್ಲ. ಮೇಕ್ ಅಮೆರಿಕ ಗ್ರೇಟ್ ಅಗೈನ್ ಹಾಗೂ ಅಮೆರಿಕ ಫಸ್ಟ್ ಎಂಬ ಟ್ರಂಪ್ ಘೋಷವಾಕ್ಯ ಪ್ರಯೋಜನಕ್ಕೆ ಬರಲಿಲ್ಲ. ಆದರೆ ಬೈಡನ್ ಗುಟ್ಟಾಗಿ ಇದನ್ನು ಸಾಧಿಸುತ್ತಿದ್ದಾರೆ. ಇತರ ದೇಶಗಳ ಉದ್ಯೋಗಿಗಳಿಗೆ ನಷ್ಟ ಆಗದ ರೀತಿಯಲ್ಲೇ ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿ ಮಾಡುತ್ತಿದ್ದಾರೆ. ಈಗಾಗಲೇ ವಲಸಿಗರ ಪರ ಕಾನೂನು ಜಾರಿಗೆ ತಂದಿರುವ ಬೈಡನ್, ಇತರ ದೇಶಗಳ ಶತ್ರುತ್ವ ಕಟ್ಟಿಕೊಳ್ಳದೆ ಅಮೆರಿಕನ್ನರ ಉದ್ಧಾರಕ್ಕೆ ಪ್ರಯತ್ನಿಸುತ್ತಿದ್ದಾರೆ.

ಬಡವರಿಗೆ 1 ಲಕ್ಷ ರೂಪಾಯಿ

ಬಡವರಿಗೆ 1 ಲಕ್ಷ ರೂಪಾಯಿ

ಕೊರೊನಾ ಕಂಟಕದಿಂದ ಪಾರಾಗಲು ಬೈಡನ್ ಸರ್ಕಾರ ಬೃಹತ್ ಯೋಜನೆ ಹಾಕಿಕೊಂಡು, ಸುಮಾರು 1.9 ಟ್ರಿಲಿಯನ್ ಡಾಲರ್ ಮೊತ್ತದ ಪ್ಯಾಕೇಜ್‌ ಘೋಷಿಸಿದೆ. ಬೈಡನ್ ಸರ್ಕಾರದ ಮಹತ್ವಕಾಂಕ್ಷೆಯ ಪ್ಯಾಕೇಜ್‌ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ನೆರವಾಗುತ್ತಿದೆ. ಬಡ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪ್ರೋತ್ಸಾಹಧನ ಸಿಗುತ್ತಿದೆ. ಕೆಲಸ ಕಳೆದುಕೊಂಡು ನರಳಾಡುತ್ತಿದ್ದ ಅಮೆರಿಕದ ಬಡ ಕುಟುಂಬಗಳಿಗೆ ಸರ್ಕಾರದ ಸಹಾಯ ಒಂದಷ್ಟು ಚೇತರಿಕೆ ನೀಡಿದೆ. ಹೀಗೆ ಪ್ರೋತ್ಸಾಹಧನ ನೀಡುವ ಜೊತೆ ಉದ್ಯೋಗ ಸೃಷ್ಟಿಸುವಲ್ಲಿಯೂ ಜೋ ಬೈಡನ್ ಯಶಸ್ವಿಯಾಗುತ್ತಿದ್ದಾರೆ. ಮುಂದಿನ ಕೆಲವು ತಿಂಗಳಲ್ಲಿ ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯೂ ಆರ್ಥಿಕ ತಜ್ಞರಲ್ಲಿದೆ.

Recommended Video

    ಯೂರೋ ಕಪ್ ಇಟಲಿಗೆ ಇನ್ನೊಂದು ಹೆಜ್ಜೆ ದೂರ | Oneindia Kannada
    ಭಾರತ ಮೂಲದವರಿಗೆ ಲಾಭ

    ಭಾರತ ಮೂಲದವರಿಗೆ ಲಾಭ

    ಟ್ರಂಪ್ ಆಡಳಿತದಲ್ಲಿ ಕೋಟಿ ಕೋಟಿ ವಲಸಿಗರಿಗೆ ಅಮೆರಿಕ ಎಂಬ ದೈತ್ಯ ದೇಶ ಪ್ರವೇಶ ಕನಸು ಮರೀಚಿಕೆ ಆಗಿತ್ತು. ಆದರೆ ಈಗ ಅಂಧಕಾರ ತೊಲಗಲಿದ್ದು, ಅಮೆರಿಕ ಎಂಬ ಪವರ್‌ಫುಲ್ ದೇಶಕ್ಕೆ ವಲಸೆ ಹೋಗಲು ಇಚ್ಛಿಸಿದ್ದ ಟ್ಯಾಲೆಂಟ್‌ಗಳಿಗೆ ಅವಕಾಶ ಸಿಗುತ್ತಿದೆ. ಇದೀಗ H1B ವೀಸಾ ಹಂಚಿಕೆ ಟ್ರಂಪ್ ಆಡಳಿತಕ್ಕಿಂತಲೂ ಸುಲಭವಾಗಿದೆ. ಟ್ರಂಪ್ ಕೈಗೊಂಡ ಪ್ರಮುಖ 6 ವಲಸೆ ನೀತಿಗಳಲ್ಲಿ ಜೋ ಬೈಡನ್ ಬದಲಾವಣೆ ತಂದಿದ್ದಾರೆ. ಇದರಿಂದ ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದ ಉದ್ಯೋಗಿಗಳಿಗೆ ಅವಕಾಶ ಸಿಕ್ಕಿದೆ. H1B ವೀಸಾ ಪಡೆಯುವವರಲ್ಲಿ ಹೆಚ್ಚಿನವರು ಭಾರತ ಮೂಲದವರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+