ತೈವಾನ್ ಮಿಲಿಟರಿಗೆ ಡೈನೋಸಾರ್ ಬಲ, ಚೀನಾಗೆ ಮರ್ಮಾಘಾತ

ತೈವಾನ್

ವಿಚಾರವಾಗಿ
ಅಮೆರಿಕ
ಹಾಗೂ
ಚೀನಾ
ನಡುವೆ
ಘರ್ಷಣೆ
ನಡೆಯುತ್ತಿರುವಾಗಲೇ,
ತೈವಾನ್‌ಗೆ
ಭಾರಿ
ಮೊತ್ತದ
ಶಸ್ತ್ರಾಸ್ತ್ರ
ಮಾರಟಕ್ಕೆ
ಅಮೆರಿಕ
ಒಪ್ಪಿಗೆ
ಸೂಚಿಸಿದೆ.
ಬರೋಬ್ಬರಿ
1.9
ಬಿಲಿಯನ್
ಡಾಲರ್‌
ಅಂದರೆ
ಸುಮಾರು
14
ಸಾವಿರ
ಕೋಟಿ
ರೂಪಾಯಿಗೂ
ಹೆಚ್ಚು
ಮೊತ್ತದ
ಒಪ್ಪಂದ
ಇದಾಗಿದೆ.
ಅತ್ಯಾಧುನಿಕ
ಮಿಸೈಲ್‌,
ಆರ್ಟಿಲರಿ
ಸೇರಿದಂತೆ
ಫೈಟರ್‌
ಜೆಟ್‌ಗಳಿಗೆ
ಸೆನ್ಸಾರ್‌
ಖರೀದಿಸಲು
ತೈವಾನ್
ಮುಂದಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ಹಿಂದೆಯೇ
ಒಪ್ಪಂದ
ಜಾರಿಗೆ
ಬರಬೇಕಿತ್ತಾದರೂ
ಅಮೆರಿಕ
ಗ್ರೀನ್
ಸಿಗ್ನಲ್
ನೀಡಿರಲಿಲ್ಲ.
ಆದರೆ
ಈಗ
ಎಲ್ಲಾ
ಅಡ್ಡಿ
ಆತಂಕ
ದೂರವಾಗಿ,
ಅಮೆರಿಕ
ಮತ್ತು
ತೈವಾನ್
ನಡುವಿನ
ಮಹತ್ವದ
ಒಪ್ಪಂದ
ಜಾರಿಗೆ
ಬಂದಿದೆ.
ಮೂಲಕ
ತಾನೇ
ಡಾನ್
ಎಂಬಂತೆ
ಏಷ್ಯಾದಲ್ಲಿ
ಸೊಕ್ಕಿನಿಂದ
ಮೆರೆಯುತ್ತಿದ್ದ
ಚೀನಾಗೆ
ಶಾಕ್
ಸಿಕ್ಕಿದೆ.
ತಕ್ಷಣಕ್ಕೆ
ಚೀನಾ
ಬಗ್ಗೆ
ಪ್ರತಿಕ್ರಿಯೆ
ನೀಡಿಲ್ಲವಾದರೂ,
ಡ್ರ್ಯಾಗನ್
ಹೊಟ್ಟೆಗೆ
ಬೆಂಕಿ
ಬಿದ್ದಿದೆ.
ಅದೆಷ್ಟು
ಬಾರಿ
ತೈವಾನ್
ಕುರಿತು
ಅಮೆರಿಕ
ನಾಯಕರಿಗೆ
ಎಚ್ಚರಿಕೆ
ನೀಡಿದರೂ
ವಿಶ್ವದ
ದೊಡ್ಡಣ್ಣ
ಹಠ
ಬಿಡದೆ
ತೈವಾನ್‌ಗೆ
ಬೆಂಬಲವಾಗಿ
ನಿಂತಿದ್ದಾನೆ.

id='are-slot-2'
class='oiad
oi-axt
oiadv'>

ತೈವಾನ್ ಮಿಲಿಟರಿಗೆ ಡೈನೋಸಾರ್ ಬಲ..!

ತೈವಾನ್ ಮಿಲಿಟರಿಗೆ ಡೈನೋಸಾರ್ ಬಲ..!

ಯೆಸ್, ತೈವಾನ್ ಭೂಭಾಗ ನನಗೇ ಸೇರಿದ್ದು ಅಂತಾ ಚೀನಾ ಹಠ ಮಾಡುತ್ತಿದೆ. ಈ ಹಠ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅತ್ತ ಹಾಂಕಾಂಗ್ ಆಂತರಿಕ ವಿಚಾರದಲ್ಲಿ ತಲೆಹಾಕಿ, ಅಲ್ಲಿ ನೆಮ್ಮದಿ ಕೆಡಿಸಿರುವ ಚೀನಾ ತೈವಾನ್ ಮೇಲೂ ಕಣ್ಣಿಟ್ಟಿದೆ. ಆದರೆ ತೈವಾನ್ ಹಾಂಕಾಂಗ್ ರಾಜಕಾರಣಿಗಳಂತೆ ಚೀನಾಗೆ ಎದುರು ಬಾಲ ಅಲ್ಲಾಡಿಸುತ್ತಲ್ಲ. ಬದಲಾಗಿ ಸೆಡ್ಡುಹೊಡೆದು ನಿಂತಿದ್ದು, ನಮ್ಮ ತಂಟೆಗೆ ಬಂದರೆ ಹುಷಾರ್ ಎಂಬ ಸಂದೇಶವನ್ನ ರವಾನಿಸುತ್ತಿದೆ. ಈ ಹಿಂದೆ ಚೀನಾ ತೈವಾನ್‌ ಗಡಿಗೆ ತನ್ನ ಯುದ್ಧ ವಿಮಾನಗಳನ್ನು ನುಗ್ಗಿಸಿದ್ದಾಗ ವಾರ್ನಿಂಗ್ ಕೊಟ್ಟಿತ್ತು. ನಾವು ತಿರುಗೇಟು ನೀಡುವಷ್ಟು ಶಕ್ತವಾಗಿದ್ದೀವಿ ಎಂದು ನೇರಾನೇರ ಎಚ್ಚರಿಕೆ ನೀಡಿತ್ತು.

ಭಾರತದ ಜೊತೆಗೂ ವ್ಯಾಪಾರ ವೃದ್ಧಿ

ಭಾರತದ ಜೊತೆಗೂ ವ್ಯಾಪಾರ ವೃದ್ಧಿ

ಭಾರತ ಹಾಗೂ ತೈವಾನ್ ನಡುವಿನ ವ್ಯಾಪಾರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗಿದೆ. 2019ರಲ್ಲಿ ಭಾರತ ಹಾಗೂ ತೈವಾನ್ ನಡುವಿನ ವ್ಯಾಪಾರ 7.2 ಶತಕೋಟಿ ಡಾಲರ್‌ಗೆ ತಲುಪಿತ್ತು. ಈ ಮೂಲಕ ದಿಢೀರ್ ಶೇ. 18ರಷ್ಟು ವ್ಯಾಪಾರ ವೃದ್ಧಿ ಕಂಡಿತ್ತು. ಇದು ಸ್ಯಾಂಪಲ್ ಮಾತ್ರ, ಈಗ ಭಾರತ ತೈವಾನ್ ಜೊತೆಗೆ ಬಹುದೊಡ್ಡ ಮೊತ್ತದ ಒಪ್ಪಂದಕ್ಕೆ ಮುಂದಾಗಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್‌ ಮೂಲದ ಕಂಪನಿಗಳಿಗೆ ಭಾರತದಿಂದ ದೊಡ್ಡ ಗಿಫ್ಟ್ ಸಿಕ್ಕಿತ್ತು. ಫಾಕ್ಸ್‌ಕಾನ್‌ ಕಂಪನಿಗೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಲಾಗಿತ್ತು, ಈ ಮೂಲಕ ಭಾರತದ ಸ್ಮಾರ್ಟ್‌ಫೋನ್ ತಯಾರಿಕಾ ವಲಯಕ್ಕೆ 143 ಬಿಲಿಯನ್ ಡಾಲರ್ ಬಂಡವಾಳ ಹರಿಸಲು ಸಹಾಯವಾಗಿದೆ. ಈ ಒಪ್ಪಂದ ನಡೆದು ಕೆಲವು ದಿನಗಳು ಕಳೆಯುವ ಒಳಗಾಗಿ ಭಾರತ ತೈವಾನ್‌ಗೆ ಮತ್ತೊಂದು ಬಿಗ್ ಆಫರ್ ಕೊಡಲು ಮುಂದಾಗಿದೆ.

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಚೀನಾ ಹಾಗೂ ತೈವಾನ್ ಸಂಘರ್ಷ ಕೆಲ ತಿಂಗಳಿಂದ ಉಗ್ರ ಸ್ವರೂಪ ಪಡೆಯುತ್ತಿದೆ. ಚೀನಾ ಪದೇ ಪದೆ ತೈವಾನ್ ವಿಚಾರ ಕೆದಕುವಾಗಲೇ, ಜುಲೈನಲ್ಲಿ ತೈವಾನ್ ಮಿಲಿಟರಿ ದಿಟ್ಟತನ ಪ್ರದರ್ಶಿಸಿತ್ತು. ಚೀನಾ ಕಡೆಗೆ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್‌ ಸೇನೆ ಸಮರಾಭ್ಯಾಸ ನಡೆಸಿತ್ತು. ಸಮರಾಭ್ಯಾಸದ ವೇಳೆ ತೈವಾನ್‌ನ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್ ಸಮುದ್ರಕ್ಕೆ ಕ್ಷಿಪಣಿ ಹಾಗೂ ಬಾಂಬ್‌ಗಳನ್ನು ಉಡಾಯಿಸುವ ಮೂಲಕ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಇದು ತೈವಾನ್ ಸೇನೆಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿತ್ತು.

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ತೈವಾನ್ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್‌ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಇಲ್ಲಿ ಕೆಲ ದಶಕಗಳ ಹಿಂದೆ ರಾಜಕೀಯ ಸ್ಥಿರತೆ ಇರಲಿಲ್ಲ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದು ನಿಂತಿದೆ.

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಆರಂಭದಲ್ಲಿ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೋ ನೇತೃತ್ವದ ಕಮ್ಯುನಿಸ್ಟ್ ಸೇನೆ ಚಿಯಾಂಗ್ ಪಡೆಯನ್ನ ಹೊರದಬ್ಬಿತ್ತು. ತನ್ನ ಬೆಂಬಲಿಗರ ಜೊತೆ ಚಿಯಾಂಗ್ ಬಂದು ಸೇರಿದ್ದು ಇದೇ ತೈವಾನ್ ಅನ್ನ. ಮಾವೋ ವಶದಲ್ಲಿದ್ದ ಚೀನಾ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ 'ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ನಂತರ ಚೀನಾ ಮತ್ತು ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆದಿದ್ದವು.

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ನ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಕೂಡ ಸಾಮ್ರಾಜ್ಯಶಾಹಿ ಚೀನಾ ಕೈಕೆಳಗೆ ನರಳಿ ಬದುಕಬೇಕಾಗಿತ್ತು. ಆದರೆ ತೈವಾನ್‌ನ 'ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಸಂಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು.

1996ರಲ್ಲಿ ನಡೆದ ತೈವಾನ್‌ನ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಲೀ ಗೆದ್ದು ಬೀಗಿದರು. ಈ ಮೂಲಕ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಿದ್ದವರು ಲೀ. ಆದರೆ 97 ವರ್ಷದ ಲೀ ಜುಲೈ 30ರಂದು ನಿಧನರಾಗಿದ್ದರು. ಬಳಿಕ ಚೀನಾ ಸರ್ಕಾರದ ಮುಖವಾಣಿ 'ಗ್ಲೋಬಲ್ ಟೈಮ್ಸ್' ಲೀ ಸಾವಿನ ಬಗ್ಗೆ ಅಹಿತಕರ ವರದಿ ಪ್ರಕಟಿಸಿತ್ತು. ಈಗ ಮತ್ತೆ ಚೀನಾ ಕ್ಯಾತೆ ತೆಗೆದಿರೋದು ಅಮೆರಿಕ ಸೇರಿದಂತೆ ಚೀನಾದ ಶತ್ರು ರಾಷ್ಟ್ರಗಳನ್ನ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+