ಮೋಸ್ಟ್ ವಾಂಟೆಡ್ ಉಗ್ರ ಬಗ್ದಾದಿ ಹತ್ಯೆ, ಫೋಟೊ, ವಿಡಿಯೊ ಬಿಡುಗಡೆ

ವಾಷಿಂಗ್ಟನ್, ಅಕ್ಟೋಬರ್ 31: ಇತ್ತೀಚೆಗಷ್ಟೇ ಅಮೆರಿಕ ಸೇನಾ ಕಾರ್ಯಾಚರಣೆಯ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಮೋಸ್ಟ್ ವಾಂಟೆಡ್ ಉಗ್ರ ಅಬು ಬಕರ್ ಅಲ್- ಬಗ್ದಾದಿಯ ಹತ್ಯೆ ಕಾರ್ಯಾಚರಣೆಯ ವಿಡಿಯೋ ಮತ್ತು ಚಿತ್ರಗಳನ್ನು ಅಮೆರಿಕ ಬಿಡುಗಡೆ ಮಾಡಿದೆ.

America Releases Video And Photos Of Abu Bakr al-Badhdadi Killing

ಸಿರಿಯಾದ ವಾಯವ್ಯಕ್ಕೆ ಇರುವ ಇದ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ ವೇಳೆ ಬಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸುರಂಗದೊಳಗೆ ಅವಿತಿದ್ದ ಬಗ್ದಾದಿ, ಅಮೆರಿಕ ಸೇನೆಯ ನಾಯಿಗಳು ಅಟ್ಟಿಸಿಕೊಂಡು ಬಂದ ಪರಿಣಾಮ, ಭಯಗೊಂಡು ಬೇರೆ ‌ ದಾರಿ ಕಾಣದ ತನ್ನ ಮೈಗೆ ಅಂಟಿಸಿಕೊಂಡಿದ್ದ ಆತ್ಮಹತ್ಯಾ ಬಾಂಬ್ ಅನ್ನು ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದ.

ಈಗಾಗಲೇ ಮೂರ್ನಾಲ್ಕು ಬಾರಿ ಬಗ್ದಾದಿ ಸತ್ತಿದ್ದಾನೆಂಬ ಸುದ್ದಿಯಾಗಿತ್ತು. ಆದರೆ ಆತ ಬದುಕಿದ್ದ. ಹೀಗಿರುವಾಗ ಆತ ಸತ್ತಿದ್ದಾನೆಂದು ನಾವು ನಂಬುವುದು ಹೇಗೆ? ಕಾರ್ಯಾಚರಣೆ ನಡೆಸಿದೆ ಎಂಬುದಕ್ಕೆ ಯಾವ ಸಾಕ್ಷಿ ಇದೆ ಎಂದು ಕೆಲವರು ಪ್ರಶ್ನಿಸಿದ್ದರು. ಅದಕ್ಕೆ ಉತ್ತರ ನೀಡಿದ ಅಮೆರಿಕ ಇದೀಗ ಕಾರ್ಯಾಚರಣೆಯ ವಿಡಿಯೋವನ್ನೇ ಬಿಡುಗಡೆ ಮಾಡಿದೆ.

ಈ ಬ್ಲ್ಯಾಕ್ ಅಂಡ್ ವೈಟ್ ವಿಡಿಯೋದಲ್ಲಿ ಸೈನಿಕರು ಬಗ್ದಾದಿ ಇರುವ ನೆಲೆಯನ್ನು ಮುತ್ತಿಗೆ ಹಾಕುತ್ತಿರುವ ದೃಶ್ಯವನ್ನು ಕಾಣವಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+