ಗರಿಗರಿ ಚಿಪ್ಸ್ ತಿಂದು ನಾಲಗೆಯನ್ನೇ ಸುಟ್ಟುಕೊಂಡ ಯುವಕ
ವಿಜಯಪುರ, ಅಕ್ಟೋಬರ್ 18: ಗರಿಗರಿಯಾಗಿರುತ್ತದೆ ಎಂದು ಚಿಪ್ಸ್ ತಿನ್ನುವ ಮುನ್ನ ಇನ್ನುಮುಂದೆ ಯೋಚಿಸಿ ಬಾಯಿಗಿಡಿ. ಯುವಕನೊಬ್ಬ ಚಿಪ್ಸ್ ತಿನ್ನಲು ಹೋಗಿ ನಾಲಗೆಯನ್ನೇ ಸುಟ್ಟುಕೊಂಡಿರುವ ಘಟನೆ ವಿಜಯಪುರದಲ್ಲಿ ವರದಿಯಾಗಿದೆ.
ಇಂದು ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಗೋಲ್ಡನ್ ಸ್ಟಾರ್ ಬೇಕರಿಯಲ್ಲಿ ಅರವತ್ತು ರೂಪಾಯಿ ಕೊಟ್ಟು ವಿನೋದ್ ಹದಗಲ್ (22) ಚಿಪ್ಸ್ ಖರೀದಿಸಿದ್ದಾರೆ. ನಂತರ ಅದನ್ನು ಪ್ಯಾಕೆಟ್ ತೆರೆದು ತಿಂದಿದ್ದಾರೆ. ಚಿಪ್ಸನ್ನು ಬಾಯಿಗೆ ಇಡುತ್ತಿದ್ದಂತೆ ನಾಲಗೆಯಲ್ಲಿ ಕಿರಿ ಕಿರಿ ಆರಂಭವಾಗಿದೆ. ಉರಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲೇ ನಾಲಗೆ ಸುಟ್ಟು ಸುಲಿದುಕೊಂಡಂತೆ ಆಗಿದೆ.

ಚಿಪ್ಸ್ ತಯಾರಿಕೆಯಲ್ಲಿ ಬಳಸಲಾಗಿದ್ದ ಅತಿಯಾದ ರಾಸಾಯನಿಕದಿಂದಲೇ ಹೀಗೆ ಆಗಿರುವುದು ಎನ್ನಲಾಗಿದೆ. ಈ ಚಿಪ್ಸ್ ಕೊಟ್ಟ ಗೋಲ್ಡನ್ ಬೇಕರಿ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications