ತಡವಾಗಿ ಬೆಳಕಿಗೆ ಬಂತು ಪತಿಯನ್ನೇ ಪತ್ನಿ ಕೊಲೆಗೈದು ಹೂತಿಟ್ಟ ಪ್ರಕರಣ
ವಿಜಯಪುರ, ಜೂನ್.01 : ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತಿಯನ್ನೇ ಪತ್ನಿ ಕೊಲೆಗೈದಿರುವ ವಿಷಯ ಸಿಂಧಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ಎರಡು ತಿಂಗಳ ಕೇಸ್ ಗೆ ಹೊಸ ಟ್ವಿಸ್ಟ್ ಬಂದಿದೆ.
ಪ್ರಕಾಶ ಹರಿಜನ್ ( 38) ಎಂಬಾತನೇ ಕೊಲೆಯಾದ ವ್ಯಕ್ತಿ. ಈತನ ಪತ್ನಿ ಸುನೀತಾ ಹರಿಜನ್ (32) ಹಾಗೂ ಮತ್ತಿಬ್ಬರು ಸೇರಿ ಮಾರ್ಚ್ 21 ರಂದುಕೊಲೆ ಮಾಡಿರುವ ವಿಷಯ ವಿಚಾರಣೆಯ ವೇಳೆ ತಿಳಿದು ಬಂದಿದೆ.
ಕೊಲೆ ಮಾಡಿದ ನಂತರ ಬನ್ನಿಹಟ್ಟಿ ಗ್ರಾಮದಲ್ಲಿರುವ ಸುನೀತಾ ಹರಿಜನ್ ತೋಟದಲ್ಲಿ ಶವವನ್ನು ಹೂತು ಹಾಕಲಾಗಿದೆ. ವಿಷಯ ತಿಳಿದ ದೇವರಹಿಪ್ಪರಗಿ ಪೊಲೀಸರು ಹೂತ್ತಿದ್ದ ಶವವನ್ನು ಹೊರತೆಗೆದು ಮತ್ತೆ ಪೋಸ್ಟ್ ಮಾರ್ಟಮ್ ಗೆ ಕಳುಹಿಸಿದಾಗ ಶವ ಪ್ರಕಾಶ ಹರಿಜನ್ ದು ಎಂದು ತಿಳಿದು ಬಂದಿದೆ.

ಸಿಂಧಗಿ ತಹಶೀಲ್ದಾರ ಡಿ.ಹೆಚ್. ಜಮಾದಾರ ನೇತೃತ್ವದಲ್ಲಿ ಪೊಲೀಸರು ಶವ ಹೊರತೆಗೆದಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications