ಗೋಲ್ ಗುಂಬಜ್ ವೀಕ್ಷಣೆಗೆ ರಾತ್ರಿ 9 ಗಂಟೆ ತನಕ ಅವಕಾಶ

ವಿಜಯಪುರ, ಸೆಪ್ಟೆಂಬರ್ 19 : ಗೋಲ್ ಗುಂಬಜ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿ ಸುದ್ದಿ. ಶೀಘ್ರದಲ್ಲಿಯೇ ರಾತ್ರಿ 9 ಗಂಟೆ ತನಕ ಪ್ರವಾಸಿ ಸ್ಥಳವನ್ನು ವೀಕ್ಷಣೆ ಮಾಡಲು ಅವಕಾಶವನ್ನು ನೀಡಲಾಗುತ್ತದೆ.

ವಿಜಯಪುರದಲ್ಲಿರುವ ಗೋಲ ಗುಮ್ಮಟ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿರುವ ಪಟ್ಟದಕಲ್ಲು ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರುತ್ತವೆ. ಇವುಗಳನ್ನು ಆದರ್ಶ ತಾಣಗಳು ಎಂದು ಇಲಾಖೆ ಘೋಷಣೆ ಮಾಡಿದೆ.

ಪ್ರಸ್ತುತ ಗೋಲ ಗುಮ್ಮಟ ಮತ್ತು ಪಟ್ಟದಕಲ್ಲು ವೀಕ್ಷಣೆಗೆ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಅವಕಾಶವಿದೆ. ಆದ್ದರಿಂದ, ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ. ರಾತ್ರಿ 9 ಗಂಟೆ ತನಕ ವೀಕ್ಷಣೆಗೆ ಅವಕಾಶ ಮಾಡಿಕೊಡಲು ಇಲಾಖೆ ಮುಂದಾಗಿದೆ.

Tourists Can Visit Gol Gumbaz Till 9 Pm

ಪ್ರಸ್ತುತ ಗೋಲ ಗುಮ್ಮಟದಲ್ಲಿ ಮೂರು ಶಿಫ್ಟ್‌ಗಳಲ್ಲಿ 22 ಜನರು ಕೆಲಸ ಮಾಡುತ್ತಿದ್ದು, ಪ್ರವಾಸಿಗರ ಸುರಕ್ಷತೆ ಬಗ್ಗೆ ಗಮನಹಿಸುತ್ತಿದ್ದಾರೆ. ಸಮಯ ವಿಸ್ತರಣೆ ಮಾಡಿದರೆ ಭದ್ರತಾ ಸಿಬ್ಬಂದಿಗಳನ್ನು ಹೆಚ್ಚಿಸಬೇಕಾಗಿದ್ದು, 5 ಜನರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಗೋಲ ಗುಮ್ಮಟ್ಟಕ್ಕೆ ಪ್ರತಿನಿತ್ಯ 2500 ಪ್ರವಾಸಿಗರು ಭೇಟಿ ನೀಡುತ್ತಾರೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶ ಉಚಿತವಾಗಿದೆ. ಉಳಿದವರು 25 ರೂ. ಕೊಟ್ಟು ಪ್ರವಾಸಿ ತಾಣ ವೀಕ್ಷಣೆ ಮಾಡಬೇಕು.

ಮಹಮ್ಮದ್ ಆದಿಲ್ ಷಾ ಗೋಲ ಗುಮ್ಮಟ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಸುಮಾರು 51 ಮೀಟರ್ ಎತ್ತರವನ್ನು ಇದು ಹೊಂದಿದ್ದು, ಗುಮ್ಮಟದ ನಾಲ್ಕು ಕಂಬಗಳ ಮೇಲೆ ಹತ್ತಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ.

ಗುಮ್ಮಟದಲ್ಲಿರುವ ಗೋಲಾಕಾರದ ಗೋಡೆಯಲ್ಲಿ ಒಂದು ಬದಿಯಲ್ಲಿ ಪಿಸುಗುಟ್ಟಿದರೆ ಮತ್ತೊಂದು ಬದಿಯಲ್ಲಿ ಅದನ್ನು ಕೇಳಿಸಿಕೊಳ್ಳಬಹುದು. ಇದು ಗೋಲ ಗುಮ್ಮಟ್ಟದ ವಿಶೇಷತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+