ಸಲೀಂ ಹೋಟೆಲ್‌ನಲ್ಲಿ ರಾಹುಲ್ ಗಾಂಧಿ ಚಹಾ ಬಜ್ಜಿ ಸ್ವಾಹಾ
ವಿಜಯಪುರ, ಫೆಬ್ರವರಿ 24: ಮೊದಲ ರಾಜ್ಯ ಪ್ರವಾಸದಲ್ಲಿ ಬಜ್ಜಿ ತಿಂದು ಖುಷಿ ಪಟ್ಟಿದ್ದ ರಾಹುಲ್ ಗಾಂಧಿ ಇಂದು ವಿಜಯಪುರದಲ್ಲಿ ರಸ್ತೆ ಬದಿಯ ಸಣ್ಣ ಚಹಾದ ಅಂಗಡಿಯಲ್ಲಿ ಟೀ ಕುಡಿದು ದಣಿವಾರಿಸಿಕೊಂಡರು.
ವಿಜಯಪುರದಲ್ಲಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ವಾಪಸಾಗುವ ವೇಳೆ ವಿಜಯಪುರದ ಸರ್ಕೀಟ್ ಹೌಸ್ ಎದುರಿನ ರಸ್ತೆ ಬದಿಯ ಸಲೀಂ ಚಹಾದ ಅಂಗಡಿಗೆ ಕಾಂಗ್ರೆಸ್ ರಾಜ್ಯ ಮುಖಂಡರೊಂದಿಗೆ ತೆರಳಿದ ರಾಹುಲ್ ಗಾಂಧಿ ಅವರು ಟೀ ಕುಡಿದು ಬಜ್ಜಿ ತಿಂದರು.
ಮೊದಲ ಪ್ರವಾಸದಲ್ಲಿ ರಾಯಚೂರಿನ ಕಲ್ಮಲಾದಲ್ಲಿ ಬಿಸಿಬಿಸಿ ಬಜ್ಜಿ ತಿಂದು ಸುದ್ದಿ ಮಾಡಿದ್ದ ರಾಹುಲ್ ಗಾಂಧಿ ಎರಡನೇ ಪ್ರವಾಸದಲ್ಲಿ ಅದೇ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.

ರಾಹುಲ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಸಚಿವ ಎಂ.ಬಿ.ಪಾಟೀಲ್, ಜಾರಕಿಹೊಳಿ, ಡಿಕೆಶಿ ಮುಂತಾದ ಹಲವು ರಾಜ್ಯ ನಾಯಕರಿದ್ದರು. ಟೀ ಅಂಗಡಿ ಮಾಲೀಕನಿಗೆ ಸಿದ್ದರಾಮಯ್ಯ ಅವರು 2000 ಹಣ ನೀಡಿದರು.

ರಾಹುಲ್ ಗಾಂಧಿ ಚಹಾ ಕುಡಿಯಲು ತೆರಳಿದ ವೇಳೆ ರಾಹುಲ್ ಅಭಿಮಾನಿಗಳು ಟೀ ಅಂಗಡಿ ಮುಂದೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು.












Click it and Unblock the Notifications