ಮೋದಿ, ಅಮಿತ್ ಶಾ ಪ್ರಚಾರ ಮಾಡಿದ್ರು ಗೆದ್ದು ಬೀಗಿದ ಎಂ.ಬಿ.ಪಾಟೀಲ್!

ವಿಜಯಪುರ, ಮೇ 17 : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಚಿವ ಎಂ.ಬಿ.ಪಾಟೀಲ್ ಅವರ ತವರು ಜಿಲ್ಲೆ ವಿಜಯಪುರದಲ್ಲಿ ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯಗಳಿಸಿದೆ.

ವಿಜಯಪುರ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 3, ಬಿಜೆಪಿ 3 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಜಯಗಳಿಸಿವೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನದಲ್ಲಿ ಜಯಗಳಿಸಿತ್ತು. ಬಿಜೆಪಿ ಕೇವಲ 1 ಸ್ಥಾನ ಪಡೆದಿತ್ತು.

ಜಿಲ್ಲೆಯಲ್ಲಿ ಭಾರೀ ಕುತೂಹಲ ಕೆರೆಳಿಸಿದ್ದ ಕ್ಷೇತ್ರ ಬಬಲೇಶ್ವರ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ತವರು ಕ್ಷೇತ್ರವಿದು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು.

Vijayapura

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಆದರೂ ಎಂ.ಬಿ.ಪಾಟೀಲ್ 50 ಸಾವಿರ ಮತಗಳ ಅಂತರದಲ್ಲಿ ಗೆದ್ದು ಬರುವುದಾಗಿ ಹೇಳಿದ್ದರು. 29,715 ಮತಗಳ ಅಂತರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ.

ಕ್ಷೇತ್ರ ಗೆದ್ದವರು ಗಳಿಸಿದ
ಮತಗಳು
ಪಕ್ಷ ಸೋತವರು ಗಳಿಸಿದ
ಮತಗಳು
ಪಕ್ಷ
ಮುದ್ದೇಬಿಹಾಳ

ಎ.ಎಸ್.ಪಾಟೀಲ ನಡಹಳ್ಳಿ 63,512 ಬಿಜೆಪಿ ಸಿ.ಎಸ್. ನಾಡಗೌಡ 54,879 ಕಾಂಗ್ರೆಸ್
ದೇವರಹಿಪ್ಪರಗಿ ಸೋಮನಗೌಡ ಪಾಟೀಲ 38,802 ಬಿಜೆಪಿ ಭೀಮನಗೌಡ ಪಾಟೀಲ 38,712 ಜೆಡಿಎಸ್
ಬಸವನ
ಬಾಗೇವಾಡಿ

ಶಿವಾನಂದ ಎಸ್. ಪಾಟೀಲ 58,647 ಕಾಂಗ್ರೆಸ್ ಎಸ್.ಬಿ.ಪಾಟೀಲ(ಮನಗೂಳಿ) 55,461 ಜೆಡಿಎಸ್
ಬಬಲೇಶ್ವರ (ಎಸ್ ಟಿ)
ಎಂ.ಬಿ. ಪಾಟೀಲ
98,339 ಕಾಂಗ್ರೆಸ್ ವಿಜಯಕುಮಾರ್ ಪಾಟೀಲ್ 68,624 ಬಿಜೆಪಿ
ಬಿಜಾಪುರ ನಗರ ಬಸನಗೌಡ ಪಾಟೀಲ ಯತ್ನಾಳ್ 76,308 ಬಿಜೆಪಿ ಹಮೀದ ಮುಶ್ರೀಫ್ 69,895 ಕಾಂಗ್ರೆಸ್
ನಾಗಠಾಣ (ಎಸ್ ಸಿ)
ದೇವನಾಂದ ಚವಾಣ್ 59,709 ಜೆಡಿಎಸ್ ವಿಠ್ಠಲ ಕಟಕದೋಂಡ 54,108 ಕಾಂಗ್ರೆಸ್
ಇಂಡಿ ಯಶವಂತರಾವ್ ಗೌಡ
ಪಾಟೀಲ
50,401 ಕಾಂಗ್ರೆಸ್ ಜಿ.ಡಿ.ಪಾಟೀಲ 40,463 ಜೆಡಿಎಸ್
ಸಿಂಧಗಿ ಎಂ.ಸಿ.ಮನಗೂಳಿ 70,865 ಜೆಡಿಎಸ್ ರಮೇಶ ಭೂಸನೂರ 61,560 ಬಿಜೆಪಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+