ವಿಜಯಪುರ ಜಿಲ್ಲೆಯಲ್ಲಿ ವಿಚಿತ್ರ ಪ್ರೇಮ ಪ್ರಕರಣವೊಂದು ಬೆಳಕಿಗೆ...

ವಿಜಯಪುರ, ಏಪ್ರಿಲ್ 2: ವಿಜಯಪುರದಲ್ಲಿ ವಿಚಿತ್ರ ಪ್ರೇಮ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯರಿಬ್ಬರ ನಡುವೆ ಪ್ರೇಮಾಂಕುರವಾಗಿ ಇದೀಗ ಸಲಿಂಗಿ ಮದುವೆ ಹಂತಕ್ಕೆ ಬಂದು ನಿಂತಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಂಡಾವೊಂದರ ನಿವಾಸಿ ಸುಮಾ (22) ಹಾಗೂ ಜಿಲ್ಲೆಯ ಇನ್ನೊಂದು ತಾಂಡಾ ನಿವಾಸಿ ರಮಾ (19, ಇಬ್ಬರ ಹೆಸರೂ ಬದಲಾಯಿಸಲಾಗಿದೆ) ಮಧ್ಯೆ ಪ್ರೇಮಾಂಕುರವಾಗಿರುವುದು ಬೆಳಕಿಗೆ ಬಂದಿದೆ.

ಈಗ ಈ ಇಬ್ಬರೂ ಯುವತಿಯರು ತಾವು ಪರಸ್ಪರ ಪ್ರೀತಿಸುತ್ತಿದ್ದು ನಮ್ಮ ಮದುವೆಗೆ ಮನೆಯವರು ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಮುಂದೆ ಓದಿ....

ಆರು ತಿಂಗಳಿನಿಂದ ಪ್ರೀತಿಸುತ್ತಿರುವ ಜೋಡಿ

ಆರು ತಿಂಗಳಿನಿಂದ ಪ್ರೀತಿಸುತ್ತಿರುವ ಜೋಡಿ

ವಿಜಯಪುರ ಜಿಲ್ಲೆಯ ಕಲಕೇರಿ ಪಟ್ಟಣದ ಒಂದೇ ಕಾಲೇಜಿನಲ್ಲಿ ಕಳೆದ ಮೂರು ವರ್ಷದಿಂದ ಸುಮಾ ಹಾಗೂ ರಮಾ ಒಂದೇ ಕೋರ್ಸ್‌ನಲ್ಲಿ ಓದುತ್ತಿದ್ದಾರೆ. ಓದುವ ನಡುವೆಯೇ ಈ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆರು ತಿಂಗಳಿನಿಂದ ಪ್ರೀತಿಸುತ್ತಿದ್ದ ಈ ಇಬ್ಬರೂ ಇದೀಗ ಮದುವೆ ಹಾದಿ ಹಿಡಿದಿದ್ದಾರೆ.

ಮನೆಯವರ ವಿರೋಧ

ಮನೆಯವರ ವಿರೋಧ

ಈ ವಿಚಿತ್ರ ಪ್ರೇಮ ಪ್ರಕರಣ ಕಂಡು ಯುವತಿಯರ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಮನೆಯವರ ವಿರೋಧಕ್ಕೆ ಸೊಪ್ಪು ಹಾಕದ ಯುವತಿಯರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಆದರೆ ಪೊಲೀಸ್ ಠಾಣೆಯಲ್ಲೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಗೋಗರೆದಿದ್ದಾರೆ. ಇದರಿಂದ ಗಲಿಬಿಲಿಯಾಗಿರುವ ಪೊಲೀಸರು ಸ್ವಾಧಾರ್ ಎಂಬ ಮಹಿಳಾ ಸಾಂತ್ವಾನ ಕೇಂದ್ರದ ಆಪ್ತ ಸಮಾಲೋಚಕರ ಬಳಿ ಕಳಿಸಿದ್ದಾರೆ.

ಸ್ವಾಧಾರ ಕೇಂದ್ರದಲ್ಲಿ ಆಪ್ತ ಸಮಾಲೋಚನೆ

ಸ್ವಾಧಾರ ಕೇಂದ್ರದಲ್ಲಿ ಆಪ್ತ ಸಮಾಲೋಚನೆ

ಇಬ್ಬರಿಗೂ ಸಹ ತಿಳುವಳಿಕೆ ಹಾಗೂ ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಸ್ವಾಧಾರ ಕೇಂದ್ರದ ಆಪ್ತ ಸಮಾಲೋಚಕರು, ಇಬ್ಬರಿಗೂ ಸಮಾಲೋಚನೆ ಮಾಡಿ, ಅರಿವು ಮೂಡಿಸಲು ಹರಸಾಹಸ ನಡೆಸಿದ್ದಾರೆ. ಈ ಮದುವೆಯನ್ನು ಸಮಾಜ ಒಪ್ಪುವುದಿಲ್ಲ ಎಂದು ತಿಳಿವಳಿಕೆ ಮೂಡಿಸುತ್ತಿದ್ದಾರೆ. ಆದರೆ ಮದುವೆಗೆ ಈ ಜೋಡಿ ಹಠ ಹಿಡಿದಿದೆ.

ಸಲಿಂಗಿ ವಿವಾಹಕ್ಕೆ ವಿರೋಧ

ಸಲಿಂಗಿ ವಿವಾಹಕ್ಕೆ ವಿರೋಧ

ಭಾರತದಲ್ಲಿ ಸಲಿಂಗಿ ಮದುವೆಗೆ ಸಮಾಜದಲ್ಲಿ ಅವಕಾಶ ಇಲ್ಲದಿರುವುದರಿಂದ ಸದ್ಯಕ್ಕೆ ಈ ಜೋಡಿಯ ಮದುವೆ ವಿಚಾರ ಕಗ್ಗಂಟಾಗಿದೆ. ಸುಮಾ ಹಾಗೂ ರಮಾ ಮದುವೆಗೆ ಅವರ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಈಗ ಸ್ವಾಧಾರ ಕೇಂದ್ರದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಇಬ್ಬರ ಮದುವೆ ಬಗ್ಗೆ ವಿಜಯಪುರ ಜಿಲ್ಲೆಯಲ್ಲಿ ಕುತೂಹಲ ಮೂಡಿದೆ. ಕಲಕೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+