ಕೋವಿಡ್ 19 ಟೆಸ್ಟಿಂಗ್: ಉಡುಪಿ ರಾಜ್ಯದಲ್ಲೇ ಟಾಪ್
ಉಡುಪಿ, ಏಪ್ರಿಲ್ 17: ಕೋವಿಡ್ -19 ಸ್ಯಾಂಪಲ್ ಟೆಸ್ಟಿಂಗ್ ನಲ್ಲಿ ಉಡುಪಿ ನಂಬರ್ ಒನ್ ಆಗಿದೆ. ಪ್ರಾರಂಭದಲ್ಲಿ ಮೂವರು ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲಿದ್ದರೂ ಬಳಿಕ ಸೋಂಕು ತಡೆಯುವಲ್ಲಿ ಜಿಲ್ಲಾಡಳಿತ ಕೈಗೊಂಡ ಹಲವು ಕ್ರಮಗಳಿಂದಾಗಿ ಈಗ ಇಬ್ಬರು ಗುಣಮುಖರಾಗಿ ಮನೆಗೆ ತೆರಳುವಂತಾಗಿದೆ.
ಕೋವಿಡ್ ಟೆಸ್ಟ್ ಗೆ ಸಂಬಂಧಿಸಿದಂತೆ ಇಂದು ಬಿಡುಗಡೆಯಾದ ಅಂಕಿಅಂಶಗಳಲ್ಲಿ ಉಡುಪಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಜಿಲ್ಲೆ ಎನಿಸಿಕೊಂಡಿದೆ. ಪ್ರತೀ ಲಕ್ಷ ಮಂದಿಗೆ 34 ಟೆಸ್ಟ್ ನಡೆಸುವ ಮೂಲಕ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 1177361 ಜನಸಂಖ್ಯೆ ಇದ್ದು, ಈವರೆಗೆ 403 ಮಂದಿಗೆ ಕೊರೊನಾ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಮೂರು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಅವರ ಪೈಕಿ ಇಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮಾತ್ರವಲ್ಲ, ಕಳೆದ 19 ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಹೊಸ ಪ್ರಕರಣ ದಾಖಲಾಗದ ಬಗ್ಗೆ ಕೇಂದ್ರದಿಂದಲೂ ಜಿಲ್ಲಾಡಳಿತಕ್ಕೆ ಪ್ರಶಂಸೆ ವ್ಯಕ್ತವಾಗಿದೆ.












Click it and Unblock the Notifications