ಉಡುಪಿ; ಬಡಗುಬೆಟ್ಟುವಿನಲ್ಲಿ ಪುರಾತನ ವಿಷ್ಣುಮೂರ್ತಿ ಪತ್ತೆ
ಉಡುಪಿ, ಫೆಬ್ರವರಿ 5; ಉಡುಪಿಯ ಪರ್ಕಳ ಸಮೀಪ ಹಳೆಯ ದೇವಾಲಯದ ಕುರುಹು ಪತ್ತೆಯಾಗಿದೆ. ಈ ಸ್ಥಳದಲ್ಲಿ ಪುರಾತನ ವಿಷ್ಣುಮೂರ್ತಿಯೊಂದು ಸಹ ಪತ್ತೆಯಾಗಿದ್ದು, ಇತಿಹಾಸ ತಜ್ಞ ರ ಕುತೂಹಲ ಕೆರಳಿಸಿದೆ.
ಮಣಿಪಾಲದಿಂದ ಮುಂದಕ್ಕೆ ಸಾಗಿದಾಗ ಸಿಗುವ 80 ಬಡಗುಬೆಟ್ಟು ಗ್ರಾಮ ಪಂಚಾಯತಿ ಹಿಂಭಾಗ ಈ ಮೂರ್ತಿ ಪತ್ತೆಯಾಗಿದೆ. ಈ ಸ್ಥಳದಲ್ಲಿರುವ ಮೆಸ್ಕಾಂನ ವಿದ್ಯುತ್ ಪ್ರಸರಣದ ಉಪಕೇಂದ್ರದ ಹಿಂಬದಿಯ ಬಾವಿಯಲ್ಲಿ ಅತ್ಯಂತ ಪುರಾತನ ಅಂದಾಜು ನಾಲ್ಕು ಅಡಿ ಎತ್ತರವಿರುವ ಸುಂದರವಾದ ಕೆತ್ತನೆಯ ವಿಷ್ಣುಮೂರ್ತಿ ದೇವರ ಮೂರ್ತಿ ಪತ್ತೆಯಾಗಿದೆ.
ಶಿರ್ವ ಸುಂದರಂ ಶೆಟ್ಟಿ ಕಾಲೇಜಿನ ಪುರಾತತ್ವ ವಿಭಾಗದ ಪ್ರೊಫೆಸರ್ ಟಿ. ಮುರುಗೇಶ್ ಅವರು ಹಾಗೂ ಅವರ ವಿದ್ಯಾರ್ಥಿಗಳ ತಂಡ ಈ ಮೂರ್ತಿಯನ್ನು ಪತ್ತೆ ಹಚ್ಚಿದ್ದಾರೆ.

ವಿಗ್ರಹದ ಕುರಿತು ಈಗಾಗಲೇ ಕೆಲ ಮಾಹಿತಿ ಸಂಗ್ರಹಿಸಿರುವ ಮುರುಗೇಶ್ ಮತ್ತವರ ತಂಡ ಇದೊಂದು ಪುರಾತನ ವಿಗ್ರಹವಾಗಿದ್ದು, ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಾದ ಗಣೇಶ್ ರಾಜ್ ಸರಳೆಬೆಟ್ಟು ಕೂಡ ಈ ವಿಗ್ರಹದ ಕುರಿತು ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ.












Click it and Unblock the Notifications