ಇದು ಕಥೆಯಲ್ಲ, ಜೀವನ: ಒಂದೇ ಮನೆಯ ನಾಲ್ವರಿಗೂ ವಿಚಿತ್ರ ಕಾಯಿಲೆ!

ಉಡುಪಿ, ಜನವರಿ 8: ಭಗವಂತ ಈ ಕುಟುಂಬದ ಮಟ್ಟಿಗೆ ಸಂಪೂರ್ಣ ನಿರ್ದಯಿ. ಈ ಮನೆಯಲ್ಲಿ ಒಬ್ಬರಿಗಲ್ಲ, ಇಬ್ಬರಿಗಲ್ಲ ಬರೋಬ್ಬರಿ ನಾಲ್ಕು ಮಂದಿಯೂ ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.

ಕುಳಿತಲ್ಲಿ ಕುಳಿತುಕೊಳ್ಳಲಾಗದೇ, ತಮ್ಮ ನಿತ್ಯ ಕಾರ್ಯ ಮಾಡಲೂ ಪರಿತಪಿಸಬೇಕಾದ ಶಾಪ ಈ ಇಡೀ ಕುಟುಂಬದ್ದು. ಇಂತಹ ನತದೃಷ್ಟ ಕುಟುಂಬವೊಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರಿನಲ್ಲಿದೆ. ಯಾರಾದರೂ ತಮಗೆ ಸಹಾಯ ಮಾಡಿ ತಮ್ಮ ಬದುಕನ್ನು ಸಹ್ಯವಾಗಿಸುವರೇ ಎಂಬ ನಿರೀಕ್ಷೆಯ ಕಣ್ಣಲ್ಲೇ ಮನೆಯ ದಾರಿ ನೋಡುತ್ತಾ ಬದುಕು ಸಾಗಿಸುತ್ತಿದೆ.

ಗುಲಾಬಿ ಶೆಟ್ಟಿಗಾರ್ತಿ (73 ವರ್ಷ) ಇವರ ಮಕ್ಕಳಾದ ಯಶೋಧಾ ಶೆಟ್ಟಿಗಾರ್ (37ವರ್ಷ) ಬಾಲಕೃಷ್ಣ ಶೆಟ್ಟಿಗಾರ್ (39ವರ್ಷ), ಗೀತಾ ಶೆಟ್ಟಿಗಾರ್ (32ವರ್ಷ) ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವವರು. ಕಳೆದ ಐದು ವರ್ಷಗಳಿಂದ ನಾಲ್ವರು ಈ ಕಾಯಿಲೆಗೆ ತುತ್ತಾಗಿದ್ದಾರೆ. ಕಾಯಲೆ ಏನು ಎಂದು ಕೇಳಿದರೆ ಅದು ರಕ್ತ ಸಂಬಂಧಿ ಕಾಯಿಲೆ ಎನ್ನುತ್ತಾರೆ ವೈದ್ಯರು.

Udupi: Strange Illness For All Four Of The Same Household

ಈ ನಾಲ್ವರಿಗೂ ಕಾಲಿನ ಸ್ವಾಧೀನತೆ ಇಲ್ಲ. ತಮ್ಮ ನಿತ್ಯದ ಕಾರ್ಯ ಮಾಡಲಾಗದೇ ಇತ್ತ ಬಡತನವನ್ನೇ ಹೊದ್ದು ಪರಿತಪಿಸುತ್ತಿರುವ ಈ ಕುಟುಂಬ ಇದೀಗ ಅಕ್ಷರಶಃ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಈ ವಿಚಿತ್ರ ಕಾಯಿಲೆಯನ್ನು ಗುಣಪಡಿಸಲು ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ ಈ ವ್ಯಾಧಿಯು ಗುಣ ಕಂಡಿಲ್ಲ. ಸರಕಾರದಿಂದ ಬರುವ ಪಿಂಚಣಿ 1,500 ರೂಪಾಯಿ, ಅನ್ನಭಾಗ್ಯದ ಪಡಿತರ, ಹಾಗೂ ಊರ ಜನರಲ್ಲಿ ಅಂಗಲಾಚಿ ಪಡೆದಿರುವ ನೆರವಿನಿಂದ ಇವರು ದಿನ ಕಳೆಯುತ್ತಿದ್ದಾರೆ.

ದುಡಿಯುವರು ಹಾಸಿಗೆ ಹಿಡಿದಿರುವುದರಿಂದ ಚಿಕಿತ್ಸೆ, ಔಷೋಧೋಪಚಾರ ನಡೆಸಲು ಇವರಿಗೆ ಅಸಾಧ್ಯ. ರಕ್ತದ ಸಮಸ್ಯೆಯಿಂದ ಈ ವ್ಯಾಧಿ ಬಂದಿರುವುದೆಂದು ವ್ಯೆದ್ಯರಿಂದ ತಿಳಿದುಬಂದಿದ್ದು, ಇಷ್ಟು ದಿನ ಊರವರು ಅಲ್ಪ ಸ್ವಲ್ಪ ಸಹಾಯ ಮಾಡುತ್ತಿದ್ದರು. ಇದೀಗ ಊರವರ ಸಹಾಯವೂ ಇಲ್ಲದ ಕಾರಣ ಈ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ದೊಡ್ಡ ಆಸ್ಪತ್ರೆಗೆ ಹೋಗಲು ಲಕ್ಷಾಂತರ ರೂ. ಖರ್ಚು ಇದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ ಈ ಕುಟುಂಬ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+