• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ ಡೌನ್: ಉಡುಪಿ ಮದುವೆಯಲ್ಲಿ ಹಾಜರಾದವರು ಹತ್ತು ಜನ

By ಉಡುಪಿ ಪ್ರತಿನಿಧಿ
|

ಉಡುಪಿ, ಏಪ್ರಿಲ್ 09: ರಾಜ್ಯ ಮತ್ತು ದೇಶಾದ್ಯಂತ ಕೊರೊನಾ ವೈರಸ್ ಸಂಬಂಧ ಲಕ್ ಡೌನ್ ಆದೇಶ ಮಾಡಿರುವುದರಿಂದ ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿದೆ.

ಹೆಚ್ಚು ಜನ ಸೇರುವುದರಿಂದ ಮದುವೆಗಳಲಿಗೆ ಬ್ರೇಕ್ ಹಾಕಲಾಗಿದೆ. ಆದರೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್ ಇದ್ದರೂ ಮದುವೆ ನೆರವೇರಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಅಂಪಾರು ಗುಡಿಬೆಟ್ಟು ನಿವಾಸಿ ಗಿರೀಶ್ ಹಾಗೂ ಪ್ರೀತಿಕಾ ನಡುವೆ ಅತ್ಯಂತ ಸರಳವಾಗಿ ವಿವಾಹ ನಡೆದಿದೆ.

ಕುಂದಾಪುರದ ಹಳ್ನಾಡು ಗಣಪತಿ ದೇವಸ್ಥಾನದಲ್ಲಿ ವಿವಾಹ ನೆರವೇರಿದೆ.

ವಿವಾಹದಲ್ಲಿ ವರನ ಕಡೆಯಿಂದ ನಾಲ್ವರು ಹಾಗೂ ವಧುವಿನ ಕಡೆಯಿಂದ ನಾಲ್ವರು, ವಧು-ವರರಿಬ್ಬರು ಸೇರಿ 10 ಮಂದಿ ಮಾತ್ರ ಭಾಗಿಯಾಗಿದ್ದರು. ಲಾಕ್ ಡೌನ್ ಇಲ್ಲದಿದ್ದರೆ ಇಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಈ ಮದುವೆ ನಡೆಯಬೇಕಿತ್ತು.

English summary
Girish and Pritika, a resident of Amparu Gudibettu in Kundapur in Udupi district, had a very simple wedding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X