ಮಲ್ಪೆಯಲ್ಲಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವೇನು?
ಉಡುಪಿ, ಜನವರಿ 04: ಕಾಪು, ಪಡುಬಿದ್ರಿ, ಮಲ್ಪೆ ಕಡಲ ತೀರ ಭಾಗದಲ್ಲಿ ಸಮುದ್ರದ ನೀರು ಕಳೆದ ಮೂರ್ನಾಲ್ಕು ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ್ದು, ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಉಚ್ಚಿಲ, ಎರ್ಮಾಳು, ಪಡುಬಿದ್ರಿ ಪರಿಸರದಲ್ಲೂ ಸಮುದ್ರದ ನೀರುಹಸಿರು ಬಣ್ಣಕ್ಕೆ ತಿರುಗಿದ್ದು, ದುರ್ವಾಸನೆ ಬರುತ್ತಿದೆ.

ಇದು ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದ್ದರೆ, ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ. ಸಮುದ್ರದ ನೀರು ಪಾಚಿಗಟ್ಟಿದ ಹಸಿರು ಬಣ್ಣದಂತೆ ಇರುವುದರಿಂದ ಕಡಲ ಕಿನಾರೆಗೆ ಬರುವ ಪ್ರವಾಸಿಗರು ನೀರಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಸಮುದ್ರ ನೀರು ಹಸಿರಾಗಿರುವ ವೀಡಿಯೋ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಸರ ತಜ್ಞ ಎನ್ ಎ ಮಧ್ಯಸ್ಥ ಅವರು ,ಇದೊಂದು ಅಪರೂಪದ ಪ್ರಕ್ರಿಯೆ. ಇದರಿಂದ ಮೀನುಗಳಿಗೂ ಹಾನಿ ಇದೆ. ಜೊತೆಗೆ ಜಲಚರಗಳೂ ಕೂಡ ಈ ವಿಷದಿಂದ ಹಾನಿಗೊಳಗಾಗುತ್ತವೆ. ಮನುಷ್ಯರಿಗೂ ಇದರಿಂದ ಹೊರಬರುವ ರಾಸಾಯನಿಕ ಹಾನಿಕಾರಕ ಎಂದಿದ್ದಾರೆ.












Click it and Unblock the Notifications