ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

87ರ ಹರೆಯದ ಪೇಜಾವರ ಶ್ರೀಗಳಿಗೆ ಕೃಷ್ಣಮಠದಲ್ಲಿ ಗುರುವಂದನೆ

|
Google Oneindia Kannada News

ಉಡುಪಿ, ಡಿಸೆಂಬರ್ 27: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಮಧ್ವಪೀಠವೇರಿ ಇದೀಗ 80 ವರ್ಷ ಪೂರ್ಣಗೊಂಡಿದೆ. ತಮ್ಮ 7ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಬಳಿಕ ಪುಟ್ಟ ಪೋರ ವೆಂಕಟರಮಣ ಶರ್ಮಾ ವಿಶ್ವೇಶ ತೀರ್ಥರಾಗಿ ಬೆಳೆದರು.

ಈಗ 87 ವರ್ಷದ ಪೇಜಾವರ ಶ್ರೀ ಅವರಿಗೆ ರಾಷ್ಟ್ರಪತಿಗಳು ಹಾಗೂ ಶಿಷ್ಯೆ ಕೇಂದ್ರ ಸಚಿವೆ ಉಮಾಭಾರತಿಯವರು ಇಂದು ಗುರುವಂದನೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿಯವರು ಉಡಪಿಗೆ ಆಗಮಿಸಲಿದ್ದಾರೆ. ಉಡುಪಿಯ ಕೃಷ್ಣನ ಅಂಗಳದಲ್ಲಿ ಪೇಜಾವರ ಶ್ರೀಗಳಿಗೆ ಗುರುವಂದನೆ ನಡೆಯಲಿದೆ.

ಉಡುಪಿಗೆ ಡಿ.27 ರಂದು ರಾಷ್ಟ್ರಪತಿ ಭೇಟಿ, ಕೃಷ್ಣ ಮಠಕ್ಕೆ ಬಿಗಿ ಭದ್ರತೆಉಡುಪಿಗೆ ಡಿ.27 ರಂದು ರಾಷ್ಟ್ರಪತಿ ಭೇಟಿ, ಕೃಷ್ಣ ಮಠಕ್ಕೆ ಬಿಗಿ ಭದ್ರತೆ

87 ವರ್ಷ ಪ್ರಾಯದ ಪೇಜಾವರ ಶ್ರೀ ಅವರ ಓಡಾಟ, ಚುರುಕುತನ, ಪೂಜೆ, ಯೋಗ, ಭಾಷಣ, ಪ್ರವಚನ ಕೇಳಿದರೆ ಇನ್ನೂ 37 ವರ್ಷ ಅನ್ನಿಸುತ್ತದೆ. ಕಾವಿ ಉಟ್ಟು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ತಮ್ಮನ್ನು ಸೀಮಿತ ಗೊಳಿಸದೆ ಸಾಮಾಜಿಕ ಚಟುವಟಿಕೆಯಲ್ಲೂ ಪೇಜಾವರಶ್ರೀ ಮುಂಚೂಣಿಯಲ್ಲಿದ್ದಾರೆ.

ಪೇಜಾವರ ಶ್ರೀ ವಿಶ್ವೇಶ ತೀರ್ಥರ ಎಕ್ಸ್ ಕ್ಲೂಸಿವ್ ಸಂದರ್ಶನಪೇಜಾವರ ಶ್ರೀ ವಿಶ್ವೇಶ ತೀರ್ಥರ ಎಕ್ಸ್ ಕ್ಲೂಸಿವ್ ಸಂದರ್ಶನ

60ರ ದಶಕದಲ್ಲಿ ದಲಿತ ಕೇರಿಗೆ ಭೇಟಿಕೊಟ್ಟು ಅಸ್ಪೃಶ್ಯತೆಯನ್ನು ಹೋಗಲಾಡಿಸುವ ದಿಟ್ಟ ಹೆಜ್ಜೆಯನ್ನು ಶ್ರೀಗಳು ಇಟ್ಟಿದ್ದರು. ಬ್ರಾಹ್ಮಣರಿಂದ ವಿರೋಧ ಬಂದರೂ, ಲೆಕ್ಕಕ್ಕೆ ತೆಗೆದುಕೊಳ್ಳದೆ ಮುಂದುವರಿದವರು. ದೇಶದ ಉದ್ದಗಲಕ್ಕೂ ಹಿಂದೂ ಧರ್ಮ ಪ್ರಚಾರ, ಹೋರಾಟ, ಸಾಮರಸ್ಯ ಅಂತ ಓಡಾಡುವ ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಈಗ 87ವರ್ಷ ವಯಸ್ಸು.

ಖಾವಿಯುಟ್ಟು 8 ದಶಕಗಳೇ ಕಳೆಯಿತು

ಖಾವಿಯುಟ್ಟು 8 ದಶಕಗಳೇ ಕಳೆಯಿತು

ಡಿಸೆಂಬರ್ 3, 1938ರಲ್ಲಿ ಸನ್ಯಾಸ ಸ್ವೀಕರಿಸಿದ ಈ ಹಿರಿಯ ಯತಿಗಳು ಖಾವಿಯುಟ್ಟು 8 ದಶಕಗಳೇ ಕಳೆಯಿತು. ಶ್ರೀಗಳ ನೆಚ್ಚಿನ ಶಿಷ್ಯೆ ಉಮಾಭಾರತಿ 80 ವರುಷದ ವಿಶೇಷ ಗುರುವಂದನಾ ಕಾರ್ಯಕ್ರಮಕ್ಕೆ ಅಣಿಮಾಡಿದ್ದಾರೆ.

ಅರಿಯದ ವಯಸ್ಸಿನಲ್ಲಿ ಸನ್ಯಾಸಿ

ಅರಿಯದ ವಯಸ್ಸಿನಲ್ಲಿ ಸನ್ಯಾಸಿ

ಪ್ರಪಂಚ ಅರಿಯದ ವಯಸ್ಸಿನಲ್ಲಿ ಮಧ್ವಪೀಠವೇರಿ ಸನ್ಯಾಸಿಯಾದವರು ಶ್ರೀ ಪೇಜಾವರ ಶ್ರೀಗಳು. ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಪುಟ್ಟ ಬಾಲಕನಿಗೆ ಅದೇನು ಕನಸಿತ್ತೋ, ಮುಂದೇನು ಆಗಬೇಕೆಂಬ ಮನಸ್ಸಿತ್ತೋ ಗೊತ್ತಿಲ್ಲ. ಆದ್ರೆ ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟಮಠಗಳ ಪೈಕಿ ಒಂದಾಗ ಪೇಜಾವರ ಮಠಕ್ಕೆ ಉತ್ತರಾಧಿಕಾರಿಯಾಗಿ ಧೀಕ್ಷೆ ಕೊಡಲಾಯ್ತು.ಬಳಿಕ ಮಾಣಿ ವೆಂಕಟರಮಣ ಶರ್ಮಾ ಶ್ರೀ ವಿಶ್ವೇಶತೀರ್ಥ ಶ್ರೀಪಾದರಾದರು.

ಮೋದಿಯಷ್ಟು ಸಮರ್ಥರಲ್ಲದ ಯೋಗಿ ಪ್ರಧಾನಿ ಅಭ್ಯರ್ಥಿ ಆಗಬಾರದು: ಪೇಜಾವರ ಶ್ರೀಮೋದಿಯಷ್ಟು ಸಮರ್ಥರಲ್ಲದ ಯೋಗಿ ಪ್ರಧಾನಿ ಅಭ್ಯರ್ಥಿ ಆಗಬಾರದು: ಪೇಜಾವರ ಶ್ರೀ

ಉಮಾಭಾರತಿಯಿಂದ ಗುರುವಂದನೆ

ಉಮಾಭಾರತಿಯಿಂದ ಗುರುವಂದನೆ

ಪೇಜಾವರ ಸ್ವಾಮೀಜಿ ಸನ್ಯಾಸಿಯಾಗಿ 80 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ ನೆರವೇರಿಸಲಾಗುತ್ತಿದೆ. ಪೇಜಾವರಶ್ರೀ ಶಿಷ್ಯೆ ಉಮಾಭಾರತಿ ಗುರುವಂದನೆ ಮಾಡಲಿದ್ದಾರೆ. ಇಂದು ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ರಾಜ್ಯಪಾಲ ವಜೂಭಾಯಿ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ ಆಚಾರ್ಯ ಮತ್ತಿತರರು ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಪೇಜಾವರ ಮಠಾಧಿಪತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಂದರ್ಶನಪೇಜಾವರ ಮಠಾಧಿಪತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಂದರ್ಶನ

ರಾಷ್ಟ್ರಪತಿಗಳ ಆಗಮನ

ರಾಷ್ಟ್ರಪತಿಗಳ ಆಗಮನ

ಪೇಜಾವರ ಸ್ವಾಮೀಜಿಗಳ ಅಪೇಕ್ಷೆಯಂತೆ ಬಹಳ ಸರಳವಾಗಿ ಗುರುವಂದನೆ ಕಾರ್ಯಕ್ರಮ ಕೃಷ್ಣಮಠದಲ್ಲಿ ನಡೆಯಲಿದೆ. ಕೃಷ್ಣಮಠಕ್ಕೆ ರಾಷ್ಟ್ರಪತಿಗಳು ಆಗಮಿಸಲಿದ್ದು, ದೇವರ ದರ್ಶನ ಮತ್ತು ಅವರ ಗೌರವಕ್ಕೆ ಸಿದ್ಧತೆ ನಡೆಸಲಾಗಿದೆ.

English summary
President Ram Nath Kovind and others are going to attend Guru vandhana program of Pejawara shree on december 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X