ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Parashuram Theme Park: ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್, ಸಚಿವ ಸುನಿಲ್ ಕುಮಾರ್ ಸಂದರ್ಶನ

ತುಳುನಾಡಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ಇಂಬನ್ನು ನೀಡಲಿರುವ ಪರಶುರಾಮ ಥೀಮ್ ಪಾರ್ಕ್ ಅನ್ನು ಮುಖ್ಯಮಂತ್ರಿಗಳು ಕಳೆದ ಶುಕ್ರವಾರದಂದು (ಜ 27) ಲೋಕಾರ್ಪಣೆಗೊಳಿಸಿದ್ದಾರೆ. ಇದರಲ್ಲೇನಿದೆ ಎನ್ನುವ ವಿವರವನ್ನು ಸಚಿವ ವಿ.ಸುನಿಲ್ ಕುಮಾರ್ ಸಂದರ್ಶನದಲ್ಲಿ ವಿವರಿಸಿದ್ದಾರೆ.

By ಬಾಲರಾಜ್ ತಂತ್ರಿ
|
Google Oneindia Kannada News

ತುಳುನಾಡ ಸೃಷ್ಟಿಕರ್ತ, ಭಗವಾನ್ ವಿಷ್ಣುವಿನ ಎಂಟನೇ ಅವತಾರ ಎಂದೇ ಕರೆಯಲ್ಪಡುವ ಪರಶುರಾಮನ ಬೃಹತ್ ಕಂಚಿನ ಪ್ರತಿಮೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ.

Recommended Video

Parashuram Theme Park: ಸಚಿವ ವಿ.ಸುನಿಲ್ ಕುಮಾರ್ ಸಂದರ್ಶನ | OneIndia Kannada

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಳೆದ ಶುಕ್ರವಾರ (ಜ 27) 33 ಅಡಿ ಎತ್ತರದ ಕಂಚಿನ ಪ್ರತಿಮೆ ಮತ್ತು ಪರಶುರಾಮ ಥೀಮ್ ಪಾರ್ಕ್ ಅನ್ನು ಅನಾವರಣಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಮತ್ತು ಸಚಿವರೂ ಆಗಿರುವ ವಿ.ಸುನಿಲ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ರಘುಪತಿ ಭಟ್ ಮುಂತಾದವರು ಹಾಜರಿದ್ದರು.

ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವುದೇ ಸಾಧಕನ ಕೆಲಸ ಎಂದು ಪರಶುರಾಮ ಥೀಮ್ ಪಾರ್ಕಿನ ರೂವಾರಿ ಸುನಿಲ್ ಕುಮಾರ್ ಅವರನ್ನು ಮುಖ್ಯಮಂತ್ರಿಗಳು ಮುಕ್ತಕಂಠದಿಂದ ಹೊಗಳಿದ್ದಾರೆ.

ಕರಾವಳಿಯ ಪ್ರವಾಸೋದ್ಯಮಕ್ಕೆ ಇಂಬು ಕೊಡುವ ಮಾಸ್ಟರ್ ಪ್ಲಾನ್:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಕರಾವಳಿಯ ಪ್ರವಾಸೋದ್ಯಮಕ್ಕೆ ಇಂಬು ಕೊಡುವ ಮಾಸ್ಟರ್ ಪ್ಲಾನ್:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಈ ಥೀಮ್ ಪಾರ್ಕ್ ಯೋಜನೆಯ ಬಗ್ಗೆ ಸಚಿವ ಸುನಿಲ್ ಕುಮಾರ್ ಅವರು 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ವಿವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಪ್ರವಾಸೀ ಸ್ಥಳವಾಗಲಿದೆ ಎನ್ನುವ ವಿಶ್ವಾಸವನ್ನು ಸಚಿವರು ಸಂದರ್ಶನದ ವೇಳೆ ವ್ಯಕ್ತ ಪಡಿಸಿದ್ದಾರೆ. ಸಂದರ್ಶನದ ಆಯ್ದ ಭಾಗವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

 ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪರಶುರಾಮನಿಗೆ ಸಂಬಂಧ ಪಟ್ಟಂತೆ ಚಟುವಟಿಕೆಗಳಿಲ್ಲ

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪರಶುರಾಮನಿಗೆ ಸಂಬಂಧ ಪಟ್ಟಂತೆ ಚಟುವಟಿಕೆಗಳಿಲ್ಲ

ಪ್ರ: ಪರಶುರಾಮ ಥೀಮ್ ಪಾರ್ಕ್ ಎನ್ನುವ ಯೋಚನೆ ನಿಮಗೆ ಬರಲು ಏನಾದರೂ ಕಾರಣವಿದೆಯೇ?

ಸುನಿಲ್ ಕುಮಾರ್: ತುಳುನಾಡು ಸೃಷ್ಟಿಯಾಗಿದ್ದು ಪರಶುರಾಮನ ಕಾಲದಲ್ಲಿ ಎನ್ನುವುದು ನಮ್ಮೆಲ್ಲರ ನಂಬಿಕೆ. ತುಳುನಾಡಿನ ಆಚಾರ, ವಿಚಾರ ಪದ್ದತಿಗಳು ಎಲ್ಲವೂ ಅದನ್ನು ಸಾರುತ್ತಿದೆ. ತುಳುನಾಡು ಸೃಷ್ಟಿಯಾಗಿರುವುದಕ್ಕೆ ನಮ್ಮ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖವಿದೆ. ಆದರೆ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪರಶುರಾಮನಿಗೆ ಸಂಬಂಧ ಪಟ್ಟಂತೆ ಯಾವುದೇ ಚಟುವಟಿಕೆಗಳಿಲ್ಲ.

ಇದನ್ನು ಗಮನದಲ್ಲಿ ಇಟ್ಟುಕೊಂಡು ಧಾರ್ಮಿಕ ಮತ್ತು ಪ್ರವಾಸೋದ್ಯಮವನ್ನು ಗಮನದಲ್ಲಿ ಇಟ್ಟುಕೊಂಡು ಬೆಸೆಯುವಂತಹ ಚಟುವಟಿಕೆಯೇ ಪರಶುರಾಮ ಥೀಮ್ ಪಾರ್ಕ್. ನಮ್ಮ ತಾಲೂಕಿನಲ್ಲಿ ಆಗಬೇಕೆಂದು ಬೈಲೂರಿನಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಾಗಿದೆ. ಇದೊಂದು ಪುಣ್ಯದ ಕಾರ್ಯ ಎನ್ನುವುದು ನಮ್ಮ ಅಭಿಪ್ರಾಯ.

 ಸಾರ್ವಜನಿಕರಿಗೆ ಈ ಥೀಮ್ ಪಾರ್ಕ್ ನೋಡಲು ಅವಕಾಶ

ಸಾರ್ವಜನಿಕರಿಗೆ ಈ ಥೀಮ್ ಪಾರ್ಕ್ ನೋಡಲು ಅವಕಾಶ

ಪ್ರ: ಥೀಮ್ ಪಾರ್ಕ್ ಯೋಜನೆ ಆರಂಭಗೊಂಡಿದ್ದು ಯಾವಾಗ ಮತ್ತು ಸಾರ್ವಜನಿಕರಿಗೆ ಇದು ಯಾವತ್ತಿಂದ ಮುಕ್ತವಾಗುತ್ತದೆ?

ಸುನಿಲ್ ಕುಮಾರ್: ಎರಡು ವರ್ಷದ ಹಿಂದೆ ಈ ಯೋಜನೆ ಕಾರ್ಯಾರಂಭವಾಗಿತ್ತು. ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡ ನಂತರ ಸಾರ್ವಜನಿಕರಿಗೆ ಈ ಥೀಮ್ ಪಾರ್ಕ್ ನೋಡಲು ಅವಕಾಶವಿರುತ್ತದೆ. ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ.

ಪ್ರ: ಕಾರ್ಕಳ ತಾಲೂಕಿಗೆ ಪ್ರವಾಸೋದ್ಯಮದ ಆಯಾದಲ್ಲಿ ಯಾವರೀತಿ ಉಪಯೋಗವಾಗಲಿದೆ?

ಸುನಿಲ್ ಕುಮಾರ್: ಥೀಮ್ ಪಾರ್ಕ್ ನಲ್ಲಿರುವ ಒಟ್ಟು ಪರಿಸರ, ವಾತಾವರಣವನ್ನು ಅವಲೋಕಿಸಿದರೆ ಇದಕ್ಕೆ ಉತ್ತರ ಸಿಗಲಿದೆ. ಕಾರ್ಕಳ ತಾಲೂಕನ್ನು ಗರಿಷ್ಟ ಪ್ರಮಾಣದಲ್ಲಿ ಅಭಿವೃದ್ದಿ ಮಾಡಬೇಕು ಎನ್ನುವುದು ನಮ್ಮ ಗುರಿ. ಈಗ ಮುಖ್ಯಮಂತ್ರಿಗಳು ಮೊದಲ ಹಂತದ ಕೆಲಸವನ್ನು ಉದ್ಘಾಟನೆಗೊಳಿಸಲಿದ್ದಾರೆ. ಹಂತ ಹಂತದಲ್ಲಿ ಇದು ಮುಕ್ತಾಯಗೊಳ್ಳಲಿದೆ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ಪ್ರವಾಸೀ ತಾಣ ಇದಾಗಲಿದೆ ಎನ್ನುವ ವಿಶ್ವಾಸ ನಮ್ಮಲಿದೆ.

 360 ಡಿಗ್ರಿ ಕಾಣುವಂತಹ ಪ್ರದೇಶ ಇದಾಗಿದೆ

360 ಡಿಗ್ರಿ ಕಾಣುವಂತಹ ಪ್ರದೇಶ ಇದಾಗಿದೆ

ಪ್ರ: ಪರಶುರಾಮ ಥೀಮ್ ಪಾರ್ಕಿಗೆ ಜಾಗ ಆಯ್ಕೆ ಮಾಡಿಕೊಂಡ ವಿಚಾರದ ಬಗ್ಗೆ ಹೇಳುವುದಾದರೆ?

ಸುನಿಲ್ ಕುಮಾರ್: ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವಂತಹ ಬಂಡೆಯ ಪ್ರದೇಶ. ಯಾವುದೇ ಚಟುವಟಿಕೆ ನಡೆಯುತ್ತಿರಲಿಲ್ಲ, ಪ್ರವಾಸಿಗರಿಗೆ ಹತ್ತಿರವಾಗಿ ಕಾಣಿಸುವ ಮತ್ತು 360 ಡಿಗ್ರಿ ಕಾಣುವಂತಹ ಪ್ರದೇಶ ಇದಾಗಿದೆ. ಹಾಗಾಗಿ, ಎಲ್ಲಾ ರೀತಿಯಲ್ಲೂ ಇದು ಸೂಕ್ತವಾದ ಪ್ರದೇಶ ಎನ್ನುವ ನಿಟ್ಟಿನಲ್ಲಿ ಇಲ್ಲಿ ಥೀಮ್ ಪಾರ್ಕ್ ನಿರ್ಮಾಣಗೊಳಿಸುತ್ತಿದ್ದೇವೆ.

 33 ಅಡಿ ಎತ್ತರದ ಕಂಚಿನ ಪುತ್ಥಳಿ ಈ ಥೀಮ್ ಪಾರ್ಕಿನಲ್ಲಿದೆ

33 ಅಡಿ ಎತ್ತರದ ಕಂಚಿನ ಪುತ್ಥಳಿ ಈ ಥೀಮ್ ಪಾರ್ಕಿನಲ್ಲಿದೆ

ಪ್ರ: ಈ ಥೀಮ್ ಪಾರ್ಕ್ ಬಗ್ಗೆ ಸ್ವಲ್ಪ ವಿವರವನ್ನು ನಮ್ಮ ವೀಕ್ಷಕರಿಗೆ ನೀಡುವುದಾದರೆ?

ಸುನಿಲ್ ಕುಮಾರ್: ಈ ಥೀಮ್ ಪಾರ್ಕಿನಲ್ಲಿ ಒಂದು ಸಾವಿರ ಜನ ಕುಳಿತುಕೊಳ್ಳುವಂತಹ ಬಯಲು ರಂಗ ಮಂದಿರವಿದೆ. ತುಳುನಾಡಿನ ಇತಿಹಾಸವನ್ನು ತಿಳಿಸುವಂತಹ ಚಿತ್ರ ಗ್ಯಾಲರಿ. ಏಕಕಾಲಕ್ಕೆ ನೂರು ಜನ ಕುಳಿತುಕೊಳ್ಲಬಹುದಾದಂತಹ ಚಿತ್ರಮಂದಿರ ಮತ್ತು 33 ಅಡಿ ಎತ್ತರದ ಕಂಚಿನ ಪುತ್ಥಳಿ ಈ ಥೀಮ್ ಪಾರ್ಕಿನಲ್ಲಿದೆ. ಇದಿಷ್ಟು ಮೊದಲನೇ ಹಂತದದಲ್ಲಿ ಉದ್ಘಾಟನೆಯಾಗಲಿದೆ. ಪ್ರವಾಸಿಗರು ಇಲ್ಲಿಗೆ ಬಂದಾಗ ಪರಶುರಾಮನ ಬಗ್ಗೆ ಇತಿಹಾಸ ಜಾಗೃತವಾಗುತ್ತದೆ. ತುಳುನಾಡು ಯಾವ ಕಾರಣಕ್ಕಾಗಿ ಸೃಷ್ಟಿಯಾಯಿತು ಎನ್ನುವ ಅನುಭವವಾಗಲಿದೆ. ಪ್ರಶಾಂತವಾದ ವಾತಾವರಣ ಇರುವುದರಿಂದ ಪ್ರವಾಸಿಗರನ್ನು ಸೆಳೆಯುತ್ತದೆ.
 ನಮ್ಮೂರಿಗೆ ಪ್ರವಾಸಿಗರು ಬಂದರೆ, ಬೇರೆ ಬೇರೆ ಉದ್ಯಮಗಳಿಗೆ ಅನುಕೂಲ

ನಮ್ಮೂರಿಗೆ ಪ್ರವಾಸಿಗರು ಬಂದರೆ, ಬೇರೆ ಬೇರೆ ಉದ್ಯಮಗಳಿಗೆ ಅನುಕೂಲ

ಪ್ರ: ಪುತ್ಠಳಿಯನ್ನು ಎಲ್ಲಿ ನಿರ್ಮಿಸಲಾಯಿತು? ಅನುದಾನ ಬಿಡುಗಡೆ ವಿಚಾರದಲ್ಲಿ ಸರಕಾರದ ಸ್ಪಂದನೆ ಹೇಗಿತ್ತು?

ಸುನಿಲ್ ಕುಮಾರ್: ಬೆಂಗಳೂರಿನಲ್ಲಿ ಸಿದ್ದಪಡಿಸಿ ಇಲ್ಲಿ ಬಂದು ಫಿಕ್ಸ್ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಮೂಲಗಳಿಂದ ಹಣವನ್ನು ಸಂಗ್ರಹಿಸಲಾಗಿದೆ. ಮೊದಲ ಹಂತದ ಕಾರ್ಯಕ್ಕೆ ಹದಿನೈದು ಕೋಟಿ ಖರ್ಚಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಈಗಾಗಲೇ ಹೇಳಿದಂತೆ, ಈ ಥೀಮ್ ಪಾರ್ಕ್ ನಿರ್ಮಾಣಕ್ಕೆ ಒಂದು ಇತಿಹಾಸವಿದೆ.

ಇಲ್ಲಿ ಧಾರ್ಮಿಕತೆ ಸೇರಿದಂತೆ ಎಲ್ಲವನ್ನೂ ಒಳಗೊಂಡಂತಹ ಪ್ಯಾಕೇಜ್ ಇದಾಗಲಿದೆ. ಇದು ಮೋಜು, ಮಸ್ತಿ ಮಾಡುವಂತಹ ತಾಣವಲ್ಲ,ನಮ್ಮ ಭಾಗದ ಸಾಂಸ್ಕೃತಿಕ ಸಂಗತಿಗಳನ್ನು ಬೆಸೆಯುವಂತಹ ಥೀಮ್ ಪಾರ್ಕ್ ಇದಾಗಲಿದೆ. ನಮ್ಮೂರಿಗೆ ಪ್ರವಾಸಿಗರು ಬಂದರೆ, ಬೇರೆ ಬೇರೆ ಉದ್ಯಮಗಳಿಗೆ ಅನುಕೂಲವಾಗಲಿದೆ. ದೊಡ್ಡ ಪ್ರಮಾಣದಲ್ಲಿ ಪಟ್ಟಣವೂ ಬೆಳೆಯಲಿದೆ.

English summary
parashuram-theme-park-an-exclusive-interview-with-minister-v-sunil-kumar. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X