ಉಡುಪಿ; ಹೊರ ರಾಜ್ಯ, ದೇಶದಿಂದ ಬಂದವರಿಗೆ 7 ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್
ಉಡುಪಿ, ಮೇ 28: "ಹೊರ ದೇಶ ಅಥವಾ ಹೊರ ರಾಜ್ಯದಿಂದ ಬರುವವರಿಗೆ ಏಳು ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಇರುತ್ತದೆ. ಆನಂತರದ ಏಳು ದಿನ ಅವರೇ ಹೋಮ್ ಕ್ವಾರಂಟೈನ್ ಆಗಬೇಕು" ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 5200 ಮಂದಿ ಕ್ವಾರಂಟೈನ್ ನಿಂದ ಬಿಡುಗಡೆ ಆಗಿದ್ದಾರೆ. ಇವರೆಲ್ಲ ಹದಿನಾಲ್ಕು ದಿನಗಳ ಕಾಲ ಬಹಳ ಎಚ್ಚರಿಕೆಯಿಂದ ಇರಬೇಕು. ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ಕೊಡಬೇಕು. ಹೋಂ ಕ್ವಾರಂಟೈನ್ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ತಿಳಿಸಿದ್ದಾರೆ.

ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಈಗ ಎಲ್ಲವೂ ಆಪ್ ಮೂಲಕ ಗೊತ್ತಾಗುತ್ತದೆ. app ನ ಮೂಲಕ ಎಲ್ಲರ ಮೇಲೆ ನಿಗಾ ಇಡಲಾಗಿದೆ. ಕಾನೂನು ಮೀರಿದರೆ ಆಪ್ ಮೂಲಕ ಸಂದೇಶ ಜಿಲ್ಲಾಡಳಿತಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications