ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಂಗಡಿಯಲ್ಲಿ ಶಾಲೆಗೆ ನುಗ್ಗಿದ ಬೃಹತ್ ಗಾತ್ರದ ಕಾಳಿಂಗ!

|
Google Oneindia Kannada News

ಉಡುಪಿ, ಫೆಬ್ರವರಿ 01: ಅದೊಂದು ಶಾಲೆಯಲ್ಲಿ ಮಕ್ಕಳು ತಲ್ಲೀನರಾಗಿ ಮೇಷ್ಟ್ರು ಪಾಠ ಕೇಳುತ್ತಿದ್ದರು. ನಿಶ್ಯಬ್ಧದ ವಾತಾವರಣದಲ್ಲಿ ಏಕಾಗ್ರತೆಯಿಂದ ಮಕ್ಕಳು ಪಾಠ ಕೇಳುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ಬುಸ್.. ಎಂಬ ಹೋಂಕರಿಸುವ ಶಬ್ದ ಕೇಳಿ ಹೌಹಾರಿದ್ದಾರೆ.

ಬಡವನದಿಣ್ಣೆಯಲ್ಲಿ ನುಂಗಿದ ನಾಲ್ಕು ಮೊಟ್ಟೆಯನ್ನು ಕಕ್ಕಿದ ಮರಿ ನಾಗರ!ಬಡವನದಿಣ್ಣೆಯಲ್ಲಿ ನುಂಗಿದ ನಾಲ್ಕು ಮೊಟ್ಟೆಯನ್ನು ಕಕ್ಕಿದ ಮರಿ ನಾಗರ!

ಹೌದು, ಇಂದು ಬೃಹತ್ ಗಾತ್ರದ ಕಾಳಿಂಗ ಸರ್ಪ ತರಗತಿಗೆ ನುಗ್ಗಿದ ಘಟನೆ ಉಡುಪಿ ಜಿಲ್ಲೆಯ ಹೊಸಂಗಡಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಹೊಸಂಗಡಿಯ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಬೃಹತ್ ಗಾತ್ರದ ಕಾಳಿಂಗ ಸರ್ಪ ನುಗ್ಗಿದೆ.

ಕೊಳಕ ಮಂಡಲವನ್ನು ನುಂಗಿ ಹೆಬ್ಬಾವಿಗೆ ಸೆಡ್ಡು ಹೊಡೆದ ನಾಗರಾಜ!ಕೊಳಕ ಮಂಡಲವನ್ನು ನುಂಗಿ ಹೆಬ್ಬಾವಿಗೆ ಸೆಡ್ಡು ಹೊಡೆದ ನಾಗರಾಜ!

ಭಾರೀ ಗಾತ್ರದ ಕಾಳಿಂಗನನ್ನು ನೋಡಿ ಭಯಭೀತರಾದ ವಿದ್ಯಾರ್ಥಿಗಳು ತರಗತಿಯಿಂದ ಒಂದೇ ಸಮನೆ ದಿಕ್ಕಪಾಲಾಗಿ ಓಡಿದ್ದಾರೆ. ಕಾಳಿಂಗ ಸರ್ಪವನ್ನು ಕಂಡು ಗಲಿಬಿಲಿಗೊಂಡ ಶಾಲೆಯ ಶಿಕ್ಷಕರು ನಂತರ

King Cobra entered at Hosangadi school

ಸ್ಥಳೀಯ ಉರಗ ತಜ್ಞರನ್ನು ಸ್ಥಳಕ್ಕೆ ಕರೆಸಿದ್ದಾರೆ. ಸ್ಥಳೀಯ ಉರಗ ತಜ್ಞ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

English summary
Huge king cobra entered class room of government school in Hosangadi near Byndoor of Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X